ದೇವರು

ಈ ಮೂರು ವಸ್ತುಗಳನ್ನು ಖರೀದಿ ಮಾಡ್ಬೇಕು ಅಂದ್ಕೊಂಡಿದ್ರೆ ಶುಕ್ರವಾರದ ದಿನವೇ ಮಾಡಿ ತುಂಬಾ ಒಳ್ಳೆಯದು

ಶುಕ್ರವಾರದ ದಿನವೇ  ಈ ವಸ್ತುಗಳನ್ನು ಖರೀದಿ ಮಾಡಿ ನಿಮ್ಮ ಮನೆಗೆ ತಂದರೆ ಶುಭವಾಗುತ್ತದೆ, ಉತ್ತಮ ಅದೃಷ್ಟ ಒಲಿದು ಬರುತ್ತದೆ.

 

ಶುಕ್ರವಾರದ ದಿನ ನೀವು ಈ ಕೆಲವು ವಸ್ತುಗಳನ್ನು ಖರೀದಿಸಿದರೆ, ನಿಮಗೆ ಎಲ್ಲ ರೀತಿಯಿಂದಲೂ ಶುಭವಾಗುತ್ತದೆ. ನಾವು ನಮ್ಮ ವೈವಾಹಿಕ ಜೀವನದಲ್ಲಿ  ಅನೇಕ ವಸ್ತುಗಳನ್ನು ಖರೀದಿ ಮಾಡುತ್ತಿರುತ್ತೇವೆ .ನಮ್ಮ ಮನೆಗೋಸ್ಕರ ನಾವು ಕೆಲವು ಪಾತ್ರೆಗಳನ್ನು ಖರೀದಿಸುತ್ತೇವೆ. ಇನ್ನು ಫ್ರಿಡ್ಜ್ ಗಳನ್ನು ಖರೀದಿಸುತ್ತೇವೆ. ಹವಾ ನಿಯಂತ್ರಕಗಳಾದ ಕೂಲರ್ ಹೀಗೆ ಇನ್ನೂ ಅನೇಕ ದಿನ ಬಳಕೆ ವಸ್ತುಗಳನ್ನು ನಾವು ಖರೀದಿಸುತ್ತಲೇ ಇರುತ್ತೇವೆ.

 

 

ಆದರೆ ಈ ವಿಷಯದ ಮೇಲೆ ನಾವು ಎಚ್ಚರ ವಹಿಸುವುದಿಲ್ಲ ? ಯಾವ ವಸ್ತುವನ್ನು ? ಯಾವ ದಿನ ಖರೀದಿಸಬೇಕೆಂದು ?  ನಮಗೆ ಗೊತ್ತಿಲ್ಲ ? ಯಾವ ವಸ್ತುವನ್ನು ಯಾವ ದಿನ  ಮನೆಗೆ ಕೊಂಡುಕೊಂಡು ತರಬೇಕೆಂದು ಮೊದಲು ತಿಳಿದುಕೊಳ್ಳಬೇಕು ? ಕಬ್ಬಿಣದ ವಸ್ತುಗಳನ್ನು ಶನಿವಾರದ ದಿನದಂದು ಖರೀದಿಸಬಾರದು. ಈ ವಿಷಯವನ್ನು ತುಂಬಾ ಜನರು ತಿಳಿದಿದ್ದಾರೆ. ಆದರೇ ನಮ್ಮ ಅಣ್ಣ ತಮ್ಮಂದಿರಿಗೆ  ಈ ವಿಷಯ ಗೊತ್ತಿಲ್ಲ.

ಶನಿವಾರದ ದಿನ ನಿಮಗೆ ಗೊತ್ತಿಲ್ಲದೇ ಕಬ್ಬಿಣದ ವಸ್ತುಗಳನ್ನು ಖರೀದಿಸಿ ಮನೆಗೆ ತಂದರೆ ಧನ ಹಾನಿಯಾಗುತ್ತದೆ. ಯಾವುದಾದರೂ ಒಂದು ವೃತ್ತಿಯಲ್ಲಿ ನಷ್ಟವನ್ನು ಅನುಭವಿಸುತ್ತೀರಿ. ಆರ್ಥಿಕವಾಗಿ ಜೀವನದಲ್ಲಿ ಬಹಳ ಕಷ್ಟವನ್ನು ಅವು  ತಂದೊಡ್ಡುತ್ತವೆ. ನಾವು ಇನ್ನೂ ಕೆಲವು ವಸ್ತುಗಳನ್ನು ಈಗ ಹೇಳುತ್ತಿದ್ದೇವೆ … ಈ ವಸ್ತುಗಳನ್ನು ಶುಕ್ರವಾರದ ದಿನ  ಖರೀದಿಸಿದರೆ, ನಿಮಗೆ ವಿಶೇಷವಾದ ಲಾಭವನ್ನು ತಂದು ಕೊಡುತ್ತವೆ. ನಿಮಗೆ  ಯಾವುದಾದರೂ ಒಂದು ಕ್ಷೇತ್ರದಲ್ಲಿ ಮತ್ತು ಕ್ಷೇತ್ರಗಳಲ್ಲಿ ಅಥವಾ ಬೇರೆ ವಿಷಯಗಳಲ್ಲಿ ಖಂಡಿತವಾಗಿಯೂ ಲಾಭವನ್ನು ಅವು ನಿಮಗೆ ತಂದು ಕೊಡಲಿವೆ.

 

1.ಲಕ್ಷ್ಮಿ ಮತ್ತು ಗಣೇಶ ದೇವರ ಫೋಟೋ ಅಥವಾ ವಿಗ್ರಹ.

 

 

ನಮ್ಮ ಮನೆಗಳಲ್ಲಿ  ಲಕ್ಷ್ಮೀ ಮತ್ತು ಗಣೇಶನ ದೇವಿ ಫೋಟೋಗಳನ್ನು ಹಾಕಿಕೊಂಡಿರುತ್ತೇವೆ ಹಾಗೂ ಪೂಜಿಸುತ್ತಿರುತ್ತೇವೆ. ಸನಾತನ ಧರ್ಮದ ಮತ್ತು ವೈದಿಕ ಧರ್ಮದ ಪ್ರಕಾರ ಶುಕ್ರವಾರದ ದಿನವೇ ಅವಶ್ಯವಾಗಿ ಲಕ್ಷ್ಮೀ  ಮತ್ತು ಗಣೇಶನ ಫೋಟೋವನ್ನು ಖರೀದಿಸಬೇಕು. ಯಾವ ದಿನ ಖರೀದಿಸಿ ತರುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಕೇವಲ ಶುಕ್ರವಾರ ಮಾತ್ರವೇ ನಾವು ಖರೀದಿಸಬೇಕು. ಲಕ್ಷ್ಮಿ ನಾಣ್ಯವನ್ನು ಖರೀದಿಸಿ ಶುಕ್ರವಾರವೇ ತಂದು ನೀವು ಹಣವನ್ನು ಇಡುವ ಸ್ಥಳದಲ್ಲಿ ಇಟ್ಟರೆ ಅದರಿಂದ ನಿಮಗೆ ಲಾಭ ಉಂಟಾಗುತ್ತದೆ.

 

2.ಪಾತ್ರೆಗಳು, ಹಿತ್ತಾಳೆ, ಬೆಳ್ಳಿ ಮತ್ತು ತಾಮ್ರದ ವಸ್ತುಗಳು.

 

 

ಹಿತ್ತಾಳೆ, ಬೆಳ್ಳಿ, ಮತ್ತು ತಾಮ್ರದ ಪಾತ್ರೆಗಳನ್ನು ಮತ್ತು ವಸ್ತುಗಳನ್ನು ಖರೀದಿಸಿ ತರುತ್ತೇವೆ. ನಾವು ಯಾವುದೇ ಪಾತ್ರೆಯನ್ನು  ಖರೀದಿಸಿದರೂ ಸಹ ಶುಕ್ರವಾರದ ದಿನವೇ ಖರೀದಿಸಿ ತರಬೇಕು. ಯಾವುದೇ ಪಾತ್ರೆಯನ್ನಾಗಲಿ , ಕುಕ್ಕರ್ ಮತ್ತು ಇನ್ನಿತರೆ ಯಾವುದೇ ಪಾತ್ರೆಗಳನ್ನು ಶುಕ್ರವಾರದ ದಿನವೇ ಖರೀದಿಸಿ ಮನೆಗೆ ತನ್ನಿ ಯಾಕೆಂದರೆ, ಯಾವುದೇ ಗ್ರಹ ಸಂಬಂಧಿತ ದೋಷಗಳು ಈ ದಿನ ಕಾಡುವುದಿಲ್ಲ. ಒಂದು ವೇಳೆ ಆ ರೀತಿಯ ದೋಷಗಳು ಇದ್ದರೂ ಕೂಡ ದೂರವಾಗುತ್ತವೆ. ಅವುಗಳ ಪ್ರಭಾವವು  ಕಡಿಮೆಯಾಗುತ್ತವೆ ಮತ್ತು ಧನ ಲಾಭವೂ ನಿಮಗೆ ಉಂಟಾಗುತ್ತದೆ.

 

3.ಹಳದಿ ಕವಡೆಗಳು ಮತ್ತು  ಗೋಮತಿ ಚಕ್ರಗಳು.

 

 

ಐದು ಹಳದಿ ಕವಡೆಗಳು ಮತ್ತು ಹನ್ನೊಂದು ಗೋಮತಿ ಚಕ್ರಗಳನ್ನು , ತೆಗೆದುಕೊಂಡು ಒಂದು ಹೊಸದಾದ ಹಳದಿ ಬಟ್ಟೆಯಲ್ಲಿ ಇಟ್ಟು , ಗಂಟು ಕಟ್ಟಿ ನೀವು ಹಣವನ್ನು ಇಡುವ ಸ್ಥಳದಲ್ಲಿ ಇಟ್ಟುಬಿಡಿ. ಇದರಿಂದ ನಿಮಗೆ ಆರ್ಥಿಕವಾಗಿ ಇರುವ ಹಣದ ಸಮಸ್ಯೆಗಳು ದೂರವಾಗುತ್ತವೆ ಮತ್ತು ಆರ್ಥಿಕವಾಗಿ ಲಾಭವನ್ನು ಕಾಣಲಿದ್ದೀರಿ. ಈ  ಗೋಮತಿ ಚಕ್ರ ಮತ್ತು ಹಳದಿ ಕವಡೆಗಳನ್ನು  ಶುಕ್ರವಾರದ ದಿನವೇ ಖರೀದಿಸಿ, ಸಾಧ್ಯವಾದಲ್ಲಿ ಈ ಉಪಾಯವನ್ನು ಸಹ ಶುಕ್ರವಾರದ ದಿನವೇ ಪಾಲಿಸಬೇಕು

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top