ಮನೋರಂಜನೆ

ರೆಸಾರ್ಟ್​ಗಾಗಿ ಕೆರೆಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಮಲಯಾಳಿ ಉದ್ಯಮಿ ರಾಜೀವ್ ಚಂದ್ರಶೇಖರ್’ಗೆ ನೋಟಿಸ್ ನೀಡಿತ್ತು ಗ್ರಾಮ ಪಂಚಾಯತ್!

ಕರ್ನಾಟಕದಲ್ಲಿ ಬಂದು ಕೆರೆಗಳನ್ನು ಉಳಿಸಬೇಕು ಎಂದು ದೊಡ್ಡ ದೊಡ್ಡ ಭಾಷಣವನ್ನು ಬಿಗಿಯುವ ಮಲೆಯಾಳಿ ಉದ್ಯಮಿ, ರಾಜ್ಯಸಭಾ ಸದಸ್ಯ, ರಾಜೀವ್ ಚಂದ್ರಶೇಖರ್ ಮೇಲೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ರಾಜೀವ್ ಚಂದ್ರಶೇಖರ್ ಮೇಲೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡ ಆರೋಪ ಕೇಳಿ ಅವರ ಮಾಲಿಕತ್ವದ ರೆಸಾರ್ಟ್ ಧ್ವಂಸಗೊಳಿಸಲು ಅಲ್ಲಿನ ಗ್ರಾಮ ಪಂಚಾಯತ್ ನೋಟಿಸ್ ನೀಡಿತ್ತು. ಇದನ್ನು ಮರೆತಂತಿರುವ ರಾಜೀವ್ ಚಂದ್ರಶೇಖರ್ ಭೂತದ ಬಾಯಲ್ಲಿ ಭಗವತ್ಗೀತೆ ಎಂಬಂದೆ ಕರ್ನಾಟಕದಲ್ಲಿ ನಿಂತುಕೊಂಡು ಕೆರೆಗಳನ್ನು ಉಳಿಸಬೇಕು ಎಂದು ಭಾಷಣ ಭಿಗಿಯುತ್ತಿದ್ದಾರೆ..

 

 

ಕೊಟ್ಟಯಂ ಜಿಲ್ಲೆಯ ಕುಮರಕುಮ ಎಂಬಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್ ನಿರ್ಮಾಣವಾಗಿದೆ ಎಂದು ಸರ್ಕಾರ ಕಂದಾಯ ಇಲಾಖೆ ತಿಳಿಸಿತ್ತು. ಕಂದಾಯ ಇಲಾಖೆ ದೃಢಪಡಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಈ ವಿಷ್ಣು ನಂಬೂದಿರಿ ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ನಿರ್ಮಾಣವಾಗಿರುವ ರೆಸಾರ್ಟ್ ಕೆಡವಲು ನೋಟಿಸ್ ಜಾರಿ ಮಾಡಿದ್ದರು.

ಹಿನ್ನೀರಿನ ದಂಡೆಯಲ್ಲಿರುವ ರೆಸಾರ್ಟ್ ಕಟ್ಟಡಗಳು ಮತ್ತು ಗೋಡೆಗಳು ಒತ್ತುವರಿಯಾಗಿದ್ದು, ಈ ಜಾಗ ಒತ್ತುವರಿಯಾಗಿವೆ ಎಂದು ಸರ್ಕಾರವೇ ಅಧಿಕೃತವಾಗಿ ಹೇಳಿರುವಾಗ ಅದನ್ನು ಮರೆಮಾಚಿ ಬೆಂಗಳೂರಿನ ಕೆರೆಗಳನ್ನು ರಕ್ಷಿಸಲು ಮುಂದಾಗಬೇಕು ಎಂದು ಭಾಷಣ ಬಿಗಿದಿರುವುದು, ಕೆರೆ ಒತ್ತುವರಿ ವಿರುದ್ಧ ಹೋರಾಟವನ್ನು ಕೈಗೊಂಡಿರುವುದು ನಿಜಕ್ಕೂ ನಗೆಪಾಟಲಿನ ವಿಚಾರವಾಗಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top