ಉಪಯುಕ್ತ ಮಾಹಿತಿ

ನೀವು ಪ್ರೀತಿಸುವ ಹುಡುಗಿಯ ಜೊತೆ ಮಾತನಾಡುವಾಗ ಈ ವಿಷಯಗಳು ನಿಮ್ಮ ತಲೆಯಲ್ಲಿ ಇರಲ್ಲಿ…

ನಾವು ಮಾತನಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು ಮತ್ತು ಅದರ ಬಗ್ಗೆ ಗಮನಹರಿಸಬೇಕು ನೀವು… ಕೆಲವೊಂದು ಸಲ ಮಾತಿನಿಂದಲೇ ಸಂಬಂಧಗಳು ದೂರವಾಗುತ್ತದೆ. ಮಾತನಾಡುವಾಗ ಎಚ್ಚರವಿದ್ದರೆ ಎಂತಹ ಅನಾಹುತವನ್ನು ಬೇಕಾದರೂ ತಪ್ಪಿಸಬಹುದು. ಎಷ್ಟೇ ಒಳ್ಳೆಯ ಸಂಬಂಧವಾದರೂ ಕೆಲವೊಮ್ಮೆ ಒಂದು ಶಬ್ದವೂ ಎಲ್ಲವನ್ನು ಕೆಡಿಸಿಬಿಡುತ್ತದೆ.

 

 

ಈ ಕೆಳಗಿನ ವಿಚಾರಗಳನ್ನು ನೀವು ಗಮನದಲ್ಲಿ ಇಟ್ಟುಕೊಂಡರೆ ಒಳಿತು…

 

 

ನಿಮ್ಮ ಗೆಳತಿಯರ ಬಗ್ಗೆ…!

ಇಂತಹ ವಿಷಯವನ್ನು ಪ್ರಿಯತಮೆ ಮುಂದೆ ಹೇಳುವ ಅಗತ್ಯವೇ ಇಲ್ಲ. ಗೆಳತಿಯರಿದ್ದಾರೆಂದು ಹೇಳಿದಾಗ ಸುರಕ್ಷಿತ ಮಹಿಳೆ ಕೂಡ ಅಸುರಕ್ಷಿತ ಭಾವನೆಗೊಳಗಾಗುತ್ತಾಳೆ.

 

 

ನೀನು ಯೋಚನೆ ಮಾಡುವುದನ್ನು ಕಮ್ಮಿ ಮಾಡು…

ಚಿಂತಿತರಾದಾಗ ಮಹಿಳೆಯರಲ್ಲಿ ಹಲವಾರು ರೀತಿಯ ಯೋಚನೆಗಳು ಸಾಗುತ್ತಾ ಇರಬಹುದು. ಮಹಿಳೆಯರಿಗೆ ಯಾವತ್ತೂ ಇದನ್ನು ಹೇಳಬೇಡಿ. ಇದರಿಂದ ನಿಮ್ಮ ಮಾತು ಅವರ ಪರಿಸ್ಥಿತಿ ಕೆಡಿಸಬಹುದು.

 

 

ಪುರುಷ ಸಹೋದ್ಯೋಗಿ ಬಗ್ಗೆ ವಿಚಾರಿಸಬೇಡಿ…

ನೀವೇನಾದರೂ ವಿಚಾರಿಸಿದ್ದೆ ಆದಲ್ಲಿ ಖಂಡಿತವಾಗಿಯೂ ಆಕೆಗೆ ನೋವಾಗಲಿದೆ. ಆಕೆಯ ಬಗ್ಗೆ ನಿಮಗೆ ಸಂಶಯವಿದೆಯೆಂದು ಭಾವಿಸುತ್ತಾಳೆ. ನೀವು ಆಕೆಯ ಪ್ರಿಯತಮನಾಗಿದ್ದರೂ ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶಿಸಬಾರದು ಎಂದು ಆಕೆ ಬಯಸುತ್ತಾಳೆ.

 

 

 

ಯಾವುದೇ ಕಾರಣಕ್ಕೂ ಮೊಬೈಲ್ ಕೇಳಬೇಡಿ…

ಮೊಬೈಲ್ ಅನ್ನು ಕೇಳುವ ಮೊದಲು ಅಪಾಯವನ್ನು ಎದುರಿಸಲು ಸಿದ್ಧರಾಗಿ. ಯಾಕೆಂದರೆ ಆಕೆಯ ಮೊಬೈಲ್ ಕೇಳಿದರೆ ಆಕೆಗೆ ತುಂಬಾ ವಿಚಿತ್ರವೆನಿಸಬಹುದು.
ಜಗತ್ತಿನ ಎಲ್ಲಾ ಗೌಪ್ಯತೆಗಳು ಮೊಬೈಲ್‌ನಲ್ಲಿ ಅಡಗಿರುತ್ತದೆ.

 

 

ಪಾಸ್ ವರ್ಡ್ ಏನು?

ಹಿಂದೆಲ್ಲಾ ಪ್ರೀತಿಸುವವರು ಹಾಗೂ ಮದುವೆಯಾದ ಪತಿ-ಪತ್ನಿ ಪಾಸ್ ವರ್ಡ್ ಸಹಿತ ಪ್ರತಿಯೊಂದನ್ನು ಹಂಚಿಕೊಳ್ಳುತ್ತಾ ಇದ್ದರು. ಆದರೆ ಆ ಕಾಲ ಈಗಿಲ್ಲ. ಮದುವೆಯಾಗುವ ತನಕವಾದರೂ ಆಕೆಯ ಮೊಬೈಲ್ ಪಾಸ್ ವರ್ಡ್ ಕೇಳಲು ಹೋಗಬೇಡಿ. ಮದುವೆ ಬಳಿಕವೂ ಆಕೆ ನಿಮಗೆ ಪಾಸ್ ವರ್ಡ್ ನೀಡುತ್ತಾಳೆಂದು ಹೇಳಲು ಸಾಧ್ಯವಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top