ಸಿನಿಮಾ

ನಟಿ ಗೌತಮಿ ಮಗಳ ಜೊತೆ ಅಭಿನಯ ಮಾಡಲಿರುವ ಟಾಪ್ ನಟನ ಮಗ

ತಮಿಳು ಚಿತ್ರರಂಗದ ನಟಿಯಾಗಿರುವ ಗೌತಮಿ ಕನ್ನಡಲ್ಲಿ ‘ ಏಳು ಸುತ್ತಿನ ಕೋಟೆ’ , ‘ಚಿಕ್ಕೆಜಮಾನ್ರು’, ‘ ‘ಚೆಲುವ ‘ ಚಿತ್ರಗಳಲ್ಲಿ ಅಭಿನಯ ಮಾಡಿ ಕನ್ನಡಿಗರಿಂದ ಗುರುತಿಸಿಕೊಂಡಿದ್ದಾರೆ.

 

 

ಅನೇಕ ದಿನಗಳಿಂದ ಚಿತ್ರರಂಗಕ್ಕೆ ಬರರು ಕಾಯುತ್ತಿದ್ದ ನಟಿ ಗೌತಮಿ ಮಗಳಾದ ಸುಬ್ಬಲಕ್ಷ್ಮಿ ಅವರ ಅಸೆ ಕೊನೆಗೂ ಈಡೇರಿದೆ. ಟಾಲಿವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಅರ್ಜುನ್ ರೆಡ್ಡಿ ಚಿತ್ರ ಈಗ ಕಾಲಿವುಡ್ ಗೆ ‘ವರ್ಮಾ’ ಎಂಬ ಹೆಸರಿನಲ್ಲಿ ರಿಮೇಕ್ ಆಗುತ್ತಿದೆ. ಈ ಚಿತ್ರಕೆ ಸುಬ್ಬಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ ಆದರೆ ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇನ್ನು ಕೆಲವೇ ದಿನಗಲ್ಲಿ ಸುಬ್ಬಲಕ್ಷ್ಮಿ ಆಯ್ಕೆಯ ಬಗ್ಗೆ ಮಾಹಿತಿ ಹೊರಬೀಳಬಹುದು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

 

 

 

ಚಿತ್ರದ ಇನ್ನೊಂದು ವಿಶೇಷತೆ ಅಂದರೆ ಖ್ಯಾತ ನಟ ವಿಕ್ರಮ್‌ ಪುತ್ರ ಧ್ರುವ ಅವರು ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯ ಮಾಡಲಿದ್ದಾರೆ. ತೆಲುಗು ಚಿತ್ರದಲ್ಲಿ ವಿಜಯ್ ದೇವರಕೊಂಡ ಅಭಿನಯ ಮಾಡಿದ್ದ ಅರ್ಜುನ್ ರೆಡ್ಡಿ ಪಾತ್ರವನ್ನು ಧ್ರುವಾ ಅಭಿನಯ ಮಾಡಲಿದ್ದಾರೆ.

 

 

‘ವರ್ಮಾ’ ಸಿನಿಮಾ E 4 ಎಂಟರ್‌‌‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿದೆ. ಚಿತ್ರವನ್ನು ಬಾಲ ನಿರ್ದೇಶನ ಮಾಡಲಿದ್ದಾರೆ. ರಾಜು ಮುರುಗನ್ ಡೈಲಾಗ್ ಬರೆಯಲಿದ್ದಾರೆ. ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದ್ದು ಇನ್ನು ಕೆಲವೇ ದಿನಗಳಲ್ಲಿ ಚಿತ್ರ ಸೆಟ್ಟೇರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top