ಆರೋಗ್ಯ

ತರತರದ ನೋವನ್ನು ನೀಡುವ ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆ ಬಂದಾಗ ಈ ಆಹಾರ ಪದ್ಧತಿಗಳನ್ನು ತಪ್ಪದೆ ಪಾಲಿಸಲು ಮರೆಯಬೇಡಿ 

ಪೈಲ್ಸ್ ಸಮಸ್ಯೆ ಹೆಚ್ಚಾಗಿ ಕಾಡಿದಾಗ ಹಿಂದಿನಿಂದಲೂ ಹಿರಿಯರು ಮನೆಯಲ್ಲಿ ಸಿಗುವ ನೈಸರ್ಗಿಕ ಆಹಾರ ಹಾಗೂ ಮೂಲಿಕೆಗಳನ್ನು ಬಳಸಿ ವಾಸಿ ಮಾಡುತ್ತಾ ಬಂದಿದ್ದಾರೆ ಅಂಥದ್ದೇ ಕೆಲವು ಮನೆಯಲ್ಲಿ ಸಿಗುವ ಆಹಾರ ಪದ್ಧತಿಗಳ ಬಗ್ಗೆ ತಿಳಿದುಕೊಂಡು ಈ ಸಮಸ್ಯೆಯನ್ನು ಮುಕ್ತಿ ಪಡಿಸಿಕೊಳ್ಳಿ ಹಾಗಾದರೆ ಆ ಆಹಾರ ಪದ್ಧತಿಗಳಿವೆ ವೆಂದು ಈಗ ನೋಡೋಣ ಬನ್ನಿ

ಮೂಲವ್ಯಾಧಿಗೆ ಬಹಳ ಪ್ರಮುಖವಾದ ತರಕಾರಿ ಎಂದರೆ ಇದು ಮೂಲವ್ಯಾಧಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮೂಲಂಗಿಯನ್ನು ತುರಿದು ಸ್ವಲ್ಪ ಹಾಲನ್ನು ಬೆರೆಸಿ ಈ ಮಿಶ್ರಣವನ್ನು ಪೈಲ್ಸ್ ಆಗಿರುವ ಜಾಗಕ್ಕೆ ಹಚ್ಚಿದರೆ ಸ್ವಲ್ಪ ಶಮನ ಎನಿಸುತ್ತದೆ , ಮೂಲಂಗಿಯನ್ನು ಚೆನ್ನಾಗಿ ತುರಿದು ಸ್ವಲ್ಪ  ಮೊಸರನ್ನು ಬೆರೆಸಿ ಒಗ್ಗರಣೆ ಮಾಡಿ ಉಪ್ಪನ್ನು ಹಾಕಿ ತಿಂದರೆ ಮೂಲವ್ಯಾಧಿಗೆ ಒಳ್ಳೆಯದು .

 

ಮಾವಿನ ಗೊರಟದ ಪುಡಿಯನ್ನು ದಿನಕ್ಕೆ ಒಂದು ಚಮಚದಂತೆ ಸ್ವಲ್ಪ ಜೇನು ತುಪ್ಪದೊಂದಿಗೆ ದಿನ ಎರಡು ಬಾರಿ ಸೇವನೆ ಮಾಡಬೇಕು .

 

ಅಂಜೂರದ ಹಣ್ಣುಗಳನ್ನು ರಾತ್ರಿಯಿಡೀ ನೆನೆಯಿಟ್ಟು ಆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಹಾಗೂ ಹಣ್ಣನ್ನು ತಿನ್ನಬೇಕು ಇದು ಸಹ ಮೂಲವ್ಯಾಧಿಯಿಂದ ಗುವ ಊತ ಹಾಗೂ ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ

 

ಬಿಲ್ವ ಪತ್ರದ ಎಲೆಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಆ ಪುಡಿಯನ್ನು ಅರ್ಧ ಚಮಚ ತೆಗೆದುಕೊಂಡು ಒಂದು ಲೋಟ ನೀರಿನಲ್ಲಿ ಹಾಕಿಕೊಂಡು ಕುಡಿಯಬೇಕು .

 

ಅರ್ಧ ಚಮಚ ಲೋಳೆಸರವನ್ನು ದಿನಕ್ಕೆ ಮೂರು ಬಾರಿಯಂತೆ ಸೇವಿಸಬೇಕು

 

ನಾಲ್ಕೈದು ಖರ್ಜೂರಗಳನ್ನು ತೆಗೆದುಕೊಂಡು ಅರ್ಧ ಬಟ್ಟಲು ಹಾಲಿನಲ್ಲಿ ನೆನೆಸಿ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು

 

ತ್ರಿಫಲಾ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿದರೆ ಸಹ ಮೂಲವ್ಯಾಧಿ ಸಮಸ್ಯೆಗೆ ಬಹಳ ಒಳ್ಳೆಯದು

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top