ಮನೋರಂಜನೆ

ಶಿವಣ್ಣನ ಅಭಿಮಾನಿಗಳಲ್ಲಿ ಬಹಿರಂಗವಾಗಿಯೇ ಕ್ಷಮೆ ಕೇಳಿದ ಹುಚ್ಚ ವೆಂಕಟ್!

ಕೆಲ ದಿನಗಳಿಂದ ಯಾವ ರಗಳೆ ರಾಮಾಯಣಗಳೂ ಇಲ್ಲದೆ ತನ್ನ ಪಾಡಿಗೆ ತಾನಿದ್ದಂತಿದ್ದ ಹುಚ್ಚಾ ವೆಂಕಟ ಮತ್ತೆ ಪ್ರತ್ಯಕ್ಷವಾಗಿದ್ದಾನೆ. ಹಾಗಂತ ಈ ಬಾರಿ ಆತ ರಾವುದೇ ರಂಖಲು ಮಾಡಿಕೊಂಡು ಗೊಣ್ಣೆ ಸುರಿಸುತ್ತಾ ಮಾಧ್ಯಮದವರನ್ನು ಭೇಟಿಯಾಗಿ ರಂಪಾಟಗಳನ್ನ ಶುರುವಿಟ್ಟಿಲ್ಲ ಬದಲಾಗಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮೇಲೆ ಕೋಪಗೊಂಡು ಅವರ ಬಗ್ಗೆ ಬೇಸರದ ಮಾತುಗಳನ್ನಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿಬಿಟ್ಟಿದ್ದ.

 

 

ಶಿವಣ್ಣ ನನಗೆ ಅವಮಾನ ಮಾಡಿದ್ದಾರೆ, ನಾನು ಇನ್ನುಮುಂದೆ ನಿಮ್ಮನ್ನ ಇಷ್ಟ ಪಡಲ್ಲ,ಇನ್ಯಾವತ್ತೂ ನಾನು ನಿಮ್ ಮನೆ ಹತ್ರ ಬರಲ್ಲ. ನನಗೆ ಒಂದು ಗ್ಲಾಸ್ ನೀರು ಕೊಡ್ಲಿಲ್ಲ ನಿಮ್ ಸೆಕ್ಯುರಿಟಿ.. ಮನೆ ಬಾಗಿಲಲ್ಲೇ ನಿಲ್ಲಿಸಿ ನನ್ನನ್ನು ಅವಮಾನ ಮಾಡಿಸಿದ್ದೀರಾ.”.ಅಂತೆಲ್ಲಾ ಬಾಯಿಗೆ ಬಂದಹಾಗೆ ಉದ್ದುದ್ದ ಭಾಷಣ ಬಿಗಿದಿದ್ದ. ಶಿವಣ್ಣ ಇಲ್ಲದ ಸಮಯದಲ್ಲಿ ಅವರ ಮನೆಗೆ ಹೋಗಿ ತನಗೆ ಅವಮಾನವಾಗಿದೆ ಎಂದು ಹಗುರವಾಗಿ ಮಾತನಾಡಿದ ಹುಚ್ಚ ವೆಂಕಟ್ ವಿರುದ್ಧ ಶಿವಣ್ಣನ ಅಭಿಮಾನಿಗಳು ಕೆಂಡವಾಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಹುಚ್ಚ ವೆಂಕಟ್ ನಿಗೆ ಬೆಂಡೆತ್ತಿದ್ದಾರೆ.

 

 

ಅಷ್ಟಕ್ಕೇ ಸುಮ್ಮನಾಗದ ಶಿವಣ್ಣ ಅಭಿಮಾನಿಗಳು ನೇರವಾಗಿ ಹುಚ್ಚವೆಂಕಟ್ ಮನೆಗೆ ತೆರಳಿದ್ದಾರೆ ಆದರೆ ಅಲ್ಲಿ ಹುಚ್ಚ ವೆಂಕಟ್ ಇರಲಿಲ್ಲ. ನಂತರ ಮಾಧ್ಯಮದವರ ನೆರವಿನಿಂದ ವೆಂಕಟ್ ಫೋನ್ ನಂಬರ್ ಪಡೆದ ಶಿವಣ್ಣನ ಅಭಿಮಾನಿಗಳು ವೆಂಕಟ್ ಗೆ ಕರೆಮಾಡಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸುಮಾರು ಹತ್ತು ನಿಮಿಷಗಳ ಕಾಲ ಕರೆಯಲ್ಲಿ ಮಾತನಾಡಿದ ಹುಚ್ಚ ವೆಂಕಟ್ ಶಿವಣ್ಣನ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.. ಆದರೂ ಶಿವಣ್ಣನ ಅಭಿಮಾನಿಗಳು ಹುಚ್ಚ ವೆಂಕಟ್ ನನ್ನ ಸುಮ್ಮನೆ ಬಿಡಲಿಲ್ಲ ಒಬ್ಬರಾದಮೇಲೊಬ್ಬರಂತೆ ಕರೆ ಮಾಡಿ ಹುಚ್ಚನಿಗೆ ಚಳಿ ಜ್ವರ ಬಿಡಿಸುತ್ತಿದ್ದರು

ಶಿವಣ್ಣನ ಅಭಿಮಾನಿಗಳು ಕೊಡುತ್ತಿದ್ದ ಹಾವಳಿಗೆ ನಡುಗಿದ ಹುಚ್ಚ ವೆಂಕಟ್ ಕೊನೆಗೆ ಸಾರ್ವಜನಿಕವಾಗಿಯೇ ಫೇಸ್ಬುಕ್ ಲೈವ್ ವಿಡಿಯೋ ಮಾಡಿ ಶಿವಣ್ಣನ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾನೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top