ಮನೋರಂಜನೆ

ಶಿವಣ್ಣನ ಬಗ್ಗೆ ಕೇವಲವಾಗಿ ಬಾಯಿಗೆ ಬಂದಂತೆ ಮಾತನಾಡಿ ಅವಮಾನ ಮಾಡಿದ ಹುಚ್ಚಾ ವೆಂಕಟ್. ವಿಡಿಯೋ ನೋಡಿ

ಕೆಲ ದಿನಗಳಿಂದ ಯಾವ ರಗಳೆ ರಾಮಾಯಣಗಳೂ ಇಲ್ಲದೆ ತನ್ನ ಪಾಡಿಗೆ ತಾನಿದ್ದಂತಿದ್ದ ಹುಚ್ಚಾ ವೆಂಕಟ ಮತ್ತೆ ಪ್ರತ್ಯಕ್ಷವಾಗಿದ್ದಾನೆ. ಹಾಗಂತ ಈ ಬಾರಿ ಆತ ರಾವುದೇ ರಂಖಲು ಮಾಡಿಕೊಂಡು ಗೊಣ್ಣೆ ಸುರಿಸುತ್ತಾ ಮಾಧ್ಯಮದವರನ್ನು ಭೇಟಿಯಾಗಿ ರಂಪಾಟಗಳನ್ನ ಶುರುವಿಟ್ಟಿಲ್ಲ ಬದಲಾಗಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮೇಲೆ ಕೋಪಗೊಂಡು ಅವರ ಬಗ್ಗೆ ಬೇಸರದ ಮಾತುಗಳನ್ನಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ.

 

 

ಹುಚ್ಚ ವೆಂಕಟ ಏನ್ ಹೇಳಿದ್ದಾನೆ ಈ ವಿಡಿಯೋದಲ್ಲಿ ನೋಡಿ.

 

ವಿಷ್ಯ ಏನಪ್ಪಾ ಅಂದ್ರೆ ಈ ಹುಚ್ಚವೆಂಕಟ್ ಶಿವಣ್ಣನ ಮನೆಗೆ ಹೋಗಿದ್ದನಂತೆ. ಆದರೆ ಮನೆಯಲ್ಲಿ ಶಿವಣ್ಣ ಇಲ್ಲದಿದ್ದುದರಿಂದ ಸೆಕ್ಯುರಿಟಿ ಆತನನ್ನು ಒಳಗೆ ಬಿಟ್ಟುಕೊಳ್ಳದೆ ಆಚೆಯೇ ನಿಲ್ಲಿಸಿ ಸ್ವಲ್ಪ ಹೊತ್ತು ಕಾಯಿಸಿ ಕಳುಹಿಸಿದ್ದಾನೆ. ಅಷ್ಟಕ್ಕೇ “ಶಿವಣ್ಣ ನನಗೆ ಅವಮಾನ ಮಾಡಿದ್ದಾರೆ, ನಾನು ಇನ್ನುಮುಂದೆ ನಿಮ್ಮನ್ನ ಇಷ್ಟ ಪಡಲ್ಲ, ನನಗೆ ಒಂದು ಗ್ಲಾಸ್ ನೀರು ಕೊಡ್ಲಿಲ್ಲ ನಿಮ್ ಸೆಕ್ಯುರಿಟಿ.. ಮನೆ ಬಾಗಿಲಲ್ಲೇ ನಿಲ್ಲಿಸಿ ನನ್ನನ್ನು ಅವಮಾನ ಮಾಡಿಸಿದ್ದೀರಾ.”.ಅಂತೆಲ್ಲಾ ಬಾಯಿಗೆ ಬಂದಹಾಗೆ ಉದ್ದುದ್ದ ಭಾಷಣ ಬಿಗಿದಿದ್ದಾನೆ.

 

 

ಅಲ್ಲದೆ ಕಳೆದ ಎರಡು ದಿನಗಳಿಂದ ಶಿವಣ್ಣನ್ನು ಭೇಟಿ ಮಾಡಬೇಕು ಅಂತ ಹುಚ್ಚ ವೆಂಕಟ್ ಪ್ರಯತ್ನಿಸುತ್ತಿದ್ದಂತೆ..ಹಾಗಾಗಿ ಶಿವಣ್ಣನ ಡ್ರೈವರ್ ನಂಬರ್ ತಗೊಂಡು ಕಾಲ್ ಮಾಡಿದ್ನಂತೆ, ಆದರೆ ಕಾಲ್ ಮಾಡಿದ್ದು ಹುಚ್ಚ ವೆಂಕಟ್ ಅಂತ ತಿಳಿದ ತಕ್ಷಣ ಶಿವಣ್ಣನ ಡ್ರೈವರ್ ಕಾಲ್ ಮಾಡಿದ್ದರಂತೆ. ಮತ್ತೆ ಕಾಲ್ ಮಾಡಿದಾಗ “ಶಿವಣ್ಣನಿಗೆ ನಿಮ್ ನಂಬರ್ ಕೊಟ್ಟಿದೀನಿ ಅವರೇ ಕಾಲ್ ಮಾಡ್ತಾರೆ” ಎಂದಿದ್ದರಂತೆ. ಆದರೆ ಶಿವಣ್ಣ ಹುಚ್ಚ ವೆಂಕಟ್’ನಿಗೆ ಕಾಲ್ ಮಾಡಲೇ ಇಲ್ಲವಂತೆ. ಇದರಿಂದ ಹುಚ್ಚ ವೆಂಕಟ್ ಮನಸಿಗೆ ತುಂಬಾ ನೋವಾಗಿದೆಯಂತೆ..

“ಇನ್ಯಾವತ್ತೂ ನಾನು ನಿಮ್ ಮನೆ ಹತ್ರ ಬರಲ್ಲ. ಮನೆವರೆಗೆ ಯಾರಾದ್ರೂ ಬಂದ್ರೆ ಕನಿಷ್ಠ ಒಂದು ಗ್ಲಾಸ್ ನೀರು ಕೊಡೋದಕ್ಕೆ ನಿಮ್ ಸೆಕ್ಯುರಿಟಿ ಗಾರ್ಡ್ ಗೆ ಹೇಳಿ, ನೀರಿಗೆ ಬರ ಇದ್ರೆ ಈ ಹುಚ್ಚವೆಂಕಟ್ ನಂಬರ್ ಗೆ ಕಾಲ್ ಮಾಡೋಕೆ‌ ಹೇಳಿ. ಟ್ಯಾಂಕರ್ ಗಟ್ಟಲೆ ಕಳುಹಿಸ್ತೀನಿ.‌. ಒಬ್ಬ ಅಭಿಮಾನಿಗೆ ನೀರು ಕೊಡ್ಲಿಲ್ಲ ಅಂದ್ರೆ ಏನ್ ಅರ್ಥ.. ನೀವ್ ಫೋನ್ ಮಾಡ್ಲಿಲ್ಲ ಅಂದ್ರೆ ಹುಚ್ಚ ವೆಂಕಟ್ ವ್ಯಾಲ್ಯೂ ಕಮ್ಮಿ ಆಗಲ್ಲ.”
ಕೇವಲ ಇಷ್ಟು ಮಾತ್ರವಲ್ಲದೆ ಇನ್ನೂ ಏನೇನೋ ಹುಚ್ಚ ವೆಂಕಟ್ ಹೇಳಿದ್ದಾನೆ ಆತ ಹೇಳಿರೋದೆಲ್ಲಾ ತಿಳ್ಕೊಬೇಕು ಎಂದ್ರೆ ಮೇಲಿರುವ ವಿಡಿಯೋ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top