ಕ್ರಿಕೆಟ್

ಭಾರತದ ಯಾವ ಆಟಗಾರನೂ ಮಾಡದ ಎಡವಟ್ಟು ಮಾಡ್ಕೊಂಡ ಕನ್ನಡಿಗ ಕೆಎಲ್ ರಾಹುಲ್!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಿಧಹಸ್ ತ್ರಿಕೋನ ಸರಣಿಯ ನೆನ್ನೆ ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಈವರೆಗೆ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಭಾರತದ ಯಾವೊಬ್ಬ ಆಟಗಾರನೂ ಮಾಡದ ಎಡವಟ್ಟನ್ನು ಕನ್ನಡಿಗ ಲೋಕೇಶ್ ರಾಹುಲ್ ಮಾಡಿಕೊಂಡಿದ್ದಾರೆ.. ಅಷ್ಟಕ್ಕೂ ರಾಹುಲ್ ಮಾಡಿಕೊಂಡ ಆ ಅಚಾತುರ್ಯ ಏನು ಅಂತೀರಾ? ಮುಂದೆ ಓದಿ.

 

 

ಟ್ವೆಂಟಿ-20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಿಟ್ ವಿಕೆಟ್‌ಗೆ ಬಲಿಯಾದ ಮೊದಲ ಭಾರತೀಯ ಆಟಗಾರ ಎಂಬ ಅಪಖ್ಯಾತಿಗೆ ಕನ್ನಡಿಗ ಕೆಎಲ್ ರಾಹುಲ್ ಪಾತ್ರವಾಗಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಜೀವನ್ ಮೆಂಡೀಸ್ ಎಸೆದ ಪಂದ್ಯದ 10ನೇ ಓವರ್‌ನಲ್ಲಿ ಈ ಎಡವಟ್ಟು ಆಗಿದ್ದು 5ನೇ ಎಸೆತದಲ್ಲಿ ಸಿಂಗಲ್ ಕದಿಯುವ ಭರದಲ್ಲಿ ಕಾಲಿನಿಂದ ವಿಕೆಟ್‌ನ್ನು ತುಳಿಯುವ ಮೂಲಕ 18 ರನ್ ಗಳಿಸಿದ್ದ ರಾಹುಲ್ ಹಿಟ್ ವಿಕೆಟ್ ಆಗುವ ಮೂಲಕ ಔಟಾಗಿ ನಿರ್ಗಮಿಸಿದರು.

 

 

 

ಟ್ವೆಂಟಿ-20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೂ ಕೇವಲ ಒಂಬತ್ತು ಮಂದಿ ಬ್ಯಾಟ್ಸ್‌ಮನ್‌ಗಳು ಮಾತ್ರ ಹಿಟ್-ವಿಕೆಟ್‌ಗೆ ಬಲಿಯಾಗಿದ್ದು ಇವರಲ್ಲಿ ವಿಶ್ವ ಶ್ರೇಷ್ಠ ದಾಂಡಿಗ ಎಬಿಡಿ ವಿಲಿಲಿಯರ್ಸ್ ಕೂಡ ಇರುವುದು ವಿಶೇಷ. ಈ ಸಾಲಿಗೆ ಇದೀಗ ಕೆಎಲ್ ರಾಹುಲ್ ಸಹ ಸೇರ್ಪಡೆಗೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top