ಮನೋರಂಜನೆ

ಹ್ಯಾರಿಸ್ ಒತ್ತಡಕ್ಕೆ ಮಣಿದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಕಬ್ಬನ್ ಪಾರ್ಕ್ ಎಸಿಪಿ ಮಂಜುನಾಥ್’ರ ಅಮಾನತು ವಾಪಸ್ ಪಡೆದರಾ?

ಕರ್ತವ್ಯಲೋಪದಡಿ ಕೆಲಸದಿಂದ ಅಮಾನತುಗೊಂಡಿದ್ದ ಕಬ್ಬನ್ ಪಾರ್ಕ್ ಎಸಿಪಿ ಮಂಜುನಾಥ್ ತಳವಾರ್ ಅವರ ಅಮಾನತನ್ನು ವಾಪಸ್ಸು ಪಡೆಯಲಾಗಿದೆ.. ಬಹುಕೋಟಿ ಉದ್ಯಮಿ ಲೋಕನಾಥ್ ಅವರ ಮಗ ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಪುತ್ರನ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣದಲ್ಲಿ ಪೊಲೀಸ್ ಆಯುಕ್ತರು ಮಂಜುನಾಥ್ ತಳವಾರ್ ಕರ್ತವ್ಯಲೋಪ ಎಸಗಿದ ಹಿನ್ನಲೆಯಲ್ಲಿ ಅಮಾನತುಗೊಳಿಸಿದ್ದರು. ಆದರೆ ಅಮಾನತು ವಾಪಸ್ ಪಡೆಯಲಾಗಿದ್ದು, ಗೃಹಸಚಿವ ರಾಮಲಿಂಗಾರೆಡ್ಡಿ ಹ್ಯಾರಿಸ್ ಒತ್ತಡಕ್ಕೆ ಮಣಿದರಾ ಎಂಬಂತಹ ಅನುಮಾನಗಳು ಮೂಡುತ್ತಿವೆ.

 

 

ಇತ್ತ ನಳಪಾಡ್ ಜಾಮೀನು ವಿಚಾರಕ್ಕೆ ಬಂದರೆ ನೆನ್ನೆ ಕೂಡ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ್ದಾರೆ. ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಎರಡು ದಿನ ನಂತರ ಬುಧವಾರಕ್ಕೆ ಜಾಮೀನು ತೀರ್ಪು ಕಾಯ್ದಿರಿಸಿದೆ.

ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಮೊಹಮ್ಮದ್‌ ಜಾಮೀನು ಇನ್ನು ಬುಧವಾರದ ವರೆಗೂ ಕಾಯಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬುಧವಾರ ಹೈಕೋರ್ಟ್ ಏಕಸದಸ್ಯ ಪೀಠದಿಂದ ನಳಪಾಡ್ ಗೆ ಜೈಲೇ, ಬೇಲೇ ಎಂಬ ಬಗ್ಗೆ ನಿರ್ಧಾರ ಆಗಲಿದೆ.

 

 

ವಿದ್ವತ್ ಈಗಾಗಲೇ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ವಿದ್ವತ್ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಹೀಗಾಗಿ, ಈ ಹಂತದಲ್ಲಿ ಜಾಮೀನು ಕೊಡಬಹುದಲ್ಲ ಎಂದು ಸಿ.ವಿ. ನಾಗೇಶ್ ವಾದವನ್ನು ಮಂಡಿಸಿದರು.ನ್ಯಾಯವಾದಿ ಸಿ.ವಿ. ನಾಗೇಶ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್​ಪಿಪಿ ಶ್ಯಾಂಸುಂದರ್, ಹೆಲ್ಲೆಗೊಳಗಾಗಿರುವ ವಿದ್ವತ್ ಅವರಿಗೆ ಇನ್ನು ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ತನಿಖೆ ಇನ್ನೂ ಮುಕ್ತಾಯವಾಗಿಲ್ಲ. ಹೀಗಾಗಿ, ಜಾಮೀನು ಕೊಡಬಾರದೆಂದು ವಾದವನ್ನು ಮಂಡಿಸಿದರು. ಇಬ್ಬರ ವಾದ ಆಲಿಸಿದ ನ್ಯಾಯಾಧೀಶರು ತೀರ್ಪನ್ನ ಕಾಯ್ದಿರಿಸಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top