ಸಿನಿಮಾ

ಪ್ರಭಾಸ್ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಕನ್ನಡದ ಬೆಡಗಿ.

ತೆಲುಗು ಚಿತ್ರರಂಗದಲ್ಲಿ ಹೆಸರುವಾಸಿಯಾಗಿರುವ ಪ್ರಭಾಸ್ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಬಾಹುಬಲಿ 1 ಹಾಗು ಬಾಹುಬಲಿ 2 ಚಿತ್ರದಲ್ಲಿ ಅಭಿನಯ ಮಾಡಿದನಂತರವಂತೂ ಇವರ ಜನಪ್ರಿಯತೆ ಇಮ್ಮಡಿಯಾಯ್ತು. ಪ್ರಭಾಸ್ ಜೊತೆಗೆ ಅಭಿನಯ ಮಾಡಲು ನಟಿ ಮಣಿಯರು ನಾ ಮುಂದು ನೀ ಮುಂದು ಅಂತ ಬರ್ತಾರೆ ಆದ್ರೆ ಎಲ್ಲರಿಗು ಪ್ರಭಾಸ್ ಜೊತೆ ಅಭಿನಯ ಮಾಡುವ ಭಾಗ್ಯ ಸಿಗುವುದಿಲ್ಲ ಅಷ್ಟೊಂದು ಪಾಪ್ಯುಲಾರಿಟಿ ಈ ನಟನಿಗೆ ಬಂದಿದೆ.

 

 

ಪ್ರಭಾಸ್ ಜೊತೆ ಅಭಿನಯಿಸುವ ಅದೃಷ್ಟ ಭಾಗ್ಯ ನಟಿಯೊಬ್ಬಳಿಗೆ ದೊರೆತಿದೆ. ಹೌದು ಪ್ರಭಾಸ್ ಅಭಿನಯದ ಮುಂದಿನ ಚಿತ್ರಕ್ಕೆ ಪೂಜಾ ಹೆಗಡೆ ಅವರಿಗೆ ಚಾನ್ಸ್ ಸಿಕ್ಕಿದೆ. ಮೂಲಗಳ ಪ್ರಕಾರ ಪೂಜಾ ಹೆಗಡೆ ಈಗಾಗಲೇ ಚಿತ್ರಕ್ಕೆ ಸೈನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ

 

 

ಈಗಾಗಲೇ ಸಾಕಷ್ಟು ಚಿತ್ರಗಳನ್ನು ತೆಲುಗು ಹಾಗೂ ತಮಿಳು ಅಭಿನಯಿಸಿರುವ ಪೂಜಾ ಹೆಗಡೆ ಬಾಲಿವುಡ್‌ನ ಚಿತ್ರಗಳಲ್ಲಿಯೂ ಅವರು ನಟಿಸಿದ್ದಾರೆ ಎಂದು ತಿಳಿದು ಬಂದಿದೆ. 2016ರಲ್ಲಿ ತೆರೆಕಂಡಿದ್ದ ಬಾಲಿವುಡ್‍ನ ಹೃತಿಕ್ ರೋಷನ್ ನಟನೆಯ ‘ಮೊಹೆಂಜೋದಾರೋ’ ಚಿತ್ರದ ಮೂಲಕ ಪೂಜಾ ಹೆಗ್ಡೆ ಬಾಲಿವುಡ್’ಗೆ ಎಂಟ್ರಿ ಕೊಟ್ಟಿದ್ದರು. ಅದರ ಜೊತೆಗೆ ಟಾಲಿವುಡ್ ಚಿತ್ರಗಳಾದ ದುವ್ವಡಾ ಜಗನಾದಂ, ಓಕ ಲೈಲಾ ಕೋಸಂ, ರಂಗಸ್ಥಲಂ, ಮುಕುಂದ ಗಳಂತಹ ಚಿತ್ರಗಳಲ್ಲೂ ನಟಿಸಿದ್ದಾರೆ.

 

ಪೂಜಾ ಹೆಗಡೆ ತಂದೆ ತಾಯಿ ಮಂಗಳೂರಿನವರಾಗಿದ್ದು ಈಗ ಈಗ ಮುಂಬೈ ನಲ್ಲಿ ನೆಲೆಸಿದ್ದಾರೆ. ಪೂಜಾ ಮುಂಬೈ ನಲ್ಲಿ ಹುಟ್ಟಿ ಬೆಳೆದರು ಕನ್ನಡವನ್ನು ಕಲಿತಿರುವುದು ಒಳ್ಳೆಯ ವಿಚಾರ. ಪೂಜಾ ಅವರು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಬೇಕೆಂಬುದು ಅವರ ಅಭಿಮಾನಿಗಳ ಬಯಕೆಯಾಗಿದೆ. ಮುಂದಿನ ದಿನಗಳಲ್ಲಿ ಪೂಜಾ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top