ಮನೋರಂಜನೆ

ಮತ್ತೆ ಒಂದಾಯ್ತು ಚಕ್ರವ್ಯೂಹ ಜೋಡಿ: ಪವನ್ ಒಡೆಯರ್ ಚಿತ್ರದಲ್ಲಿ ಪುನೀತ್’ಗೆ ನಾಯಕಿಯಾಗಿ ರಚಿತಾ ರಾಮ್!

ಅಂಜನೀಪುತ್ರ ಚಿತ್ರದ ನಂತರ ಪುನೀತ್ ನಟನೆಯ ಮುಂದಿನ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ, ಈಗಾಗಲೇ ನೆನ್ನೆಯಿಂದ ಶೂಟಿಂಗ್ ಸ್ಟಾರ್ಟ್ ಆಗಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಈ ಚಿತ್ರಕ್ಕೆ ಪ್ರಿಯಾಂಕಾ ಜ್ವಾಲಕರ್ ನಾಯಕಿ ಆಯ್ಕೆಗಿದ್ದಾರೆ ಎನ್ನುವ ಸುದ್ದಿಯನ್ನು ನೀವು ಓದಿರುತ್ತೀರಿ. ಈಗ ಚಿತ್ರಕ್ಕೆ ಮತ್ತೊಂದು ಹೀರೋಯಿನ್ ಆಯ್ಕೆಯಾಗಿದ್ದು ಈ ಮೂಲಕ ಈ ಚಿತ್ರದಲ್ಲಿ ಪುನೀತ್’ಗೆ ಇಬ್ಬರು ಹೀರೋಯಿನ್’ಗಳು ಎಂಬ ವಿಷಯ ಬಹಿರಂಗವಾಗಿದೆ.

 

 

ಈಗಾಗಲೇ ಚಕ್ರವ್ಯೂಹ ಚಿತ್ರದಲ್ಲಿ ಪುನೀತ್ ಜೊತೆ ನಾಯಕಿಯಾಗಿ ಅಭಿನಯಿಸಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಈ ಚಿತ್ರದಲ್ಲೂ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈಗಾಗಲೇ ರಚಿತಾ ಜೊತೆಗಿನ ಮಾತುಕತೆಯೂ ಮುಗಿದಿದ್ದು ಚಿತ್ರಕ್ಕೆ ಅವರು ಸಹಿ ಮಾಡಿದ್ದಾರಂತೆ., ಅಲ್ಲದೆ ಆದಷ್ಟು ಬೇಗ ಶೂಟಿಂಗ್’ನಲ್ಲಿ ರಚಿತಾ ಪಾಲ್ಗೋಳ್ಳಲಿದ್ದಾರೆ.

 

 

ಇನ್ನೂ ಹೆಸರಿಡದ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು, ನಂತರ ಚಿತ್ರತಂಡ ಮೈಸೂರಿನತ್ತ ತೆರಳಲಿದೆ. ಶೀರ್ಷಿಕೆಯನ್ನು ಮಾರ್ಚ್ 17ರಂದು ಪುನೀತ್ ಅವರ ಹುಟ್ಟುಹಬ್ಬಕ್ಕೆ ಬಹಿರಂಗಪಡಿಸಲು ಚಿತ್ರತಂಡ ಯೋಚಿಸಿದೆ. ಚಿತ್ರಕ್ಕೆ ಡಿ. ಇಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದು ಹಿರಿಯ ನಟಿ ಬಿ ಸರೋಜಾದೇವಿ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top