ಮನೋರಂಜನೆ

ಸಿಂಧೂ ಮೆನನ್ ಸಹೋದರ ಕಾರ್ತಿಕ್’ನ ಕಾರು ಶೋಕಿಯ ಭೀಕರ ಸತ್ಯಗಳು: ರಾಧಿಕಾ ಅಣ್ಣಂಗೂ ಸಿಂಧೂ ತಮ್ಮಂಗೂ ಏನ್ ಸಂಬಂಧ?

ಕನ್ನಡವೂ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಒಂದು ಕಾಲಕ್ಕೆ ಮಿಂಚಿದ್ದವಳು ನಟಿ ಸಿಂಧೂ ಮೆನನ್. ವರ್ಷಾಂತರದ ಹಿಂದೆ ಮದುವೆಯಾಗಿ ಇದೀಗ ದೂರದ ಲಂಡನ್ನಿನಲ್ಲಿ ಝಾಂಡಾ ಊರಿರುವ ಈಕೆ ತನ್ನ ಅನಾಹುತಕಾರಿ ಅಣ್ಣನ ಮೆಗಾ ವಂಚನೆಗಳಿಂದ ಆಗಾಗ ಸದ್ದು ಮಾಡುತ್ತಿರುತ್ತಾಳೆ. ಕರ್ನಾಟಕದಲ್ಲಿ ತನ್ನ ಅಣ್ಣಯ್ಯ ಕಾರ್ತಿಕ್ ಮೆನನ್ ಅಲಿಯಾಸ್ ಮನೋಜ್ ಕಾರ್ತಿಕ್ ವರ್ಮಾ ಎಂಬ ಖತಾರ್ನಾಕ್ ವಂಚಕ ಮುಂಡಾ ಮೋಚಿದ ಕಾಸನ್ನೇ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಸಿಂಧು ಬಿಂದಾಸಾಗಿ ಬದುಕುತ್ತಿದ್ದಾಳೆ. ಆದರೆ ಈ ಬಾರಿ ಇದುವರೆಗೆ ತಿಂದ ಹಡಬೇ ಕಾಸನ್ನೆಲ್ಲ ಕಾರಿಕೊಳ್ಳುವ ರೇಂಜಿಗೆ ಮನೋಜ್ ಕಾರ್ತಿಕನ ಬುಡಕ್ಕೆ ಲಾತಾ ಬಿದ್ದಿದೆ. ಫ್ರಾಡು ಮಾಡೋದನ್ನೇ ಬದುಕಾಗಿಸಿಕೊಂಡು, ಮದುವೆಯಾಗಿ ಕೈ ಎತ್ತುತ್ತಾ ಪ್ರತೀ ರಾತ್ರಿಯೂ ಹೊಸಾ ಚಿಟ್ಟೆ ಹುಡುಕುವ ಖಯಾಲಿಯ ಕಾರ್ತಿಕ್ ಬ್ಯಾಂಕಿಗೆ ವಂಚಿಸಿದ ಪ್ರಕರಣದಲ್ಲಿ ಅದ್ಯಾವ ಘಳಿಗೆಯಲ್ಲಿ ಪೊಲೀಸರಿಗೆ ತಗುಲಿಕೊಂಡನೋ… ಆ ಕ್ಷಣದಿಂದ ಇಲ್ಲೀವರೆಗೆ ಈತನ ಸರಣಿ ವಂಚನೆಯ ನಾನಾ ಮುಖಗಳು ಬಯಲಾಗುತ್ತಲೇ ಇವೆ!

 

 

ಸಿಂಧೂ ಮೆನನ್ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಬ್ಯುಸಿಯಾಗಿದ್ದಳಲ್ಲಾ? ಆ ಕಾಲದಲ್ಲಿ ಆಕೆಯ ಹೆಸರು ಬಳಸಿಕೊಂಡು ತಣ್ಣಗೆ ಫ್ರಾಡು ಕೆಲಸಗಳನ್ನು ಶುರುವಿಟ್ಟುಕೊಂಡಿದ್ದವನು ಕಾರ್ತಿಕ್ ಮೆನನ್. ಆ ಕಾಲದಲ್ಲಿಯೇ ಸಿಂಧೂ ತನ್ನಣ್ಣನ ಮುಸುಡಿಗೆ ಬಾರಿಸಿ ಬುದ್ಧಿ ಹೇಳೋ ಕೆಲಸ ಮಾಡಿದ್ದರೆ ಬಹುಶಃ ಕಾರ್ತಿಕ್ ಈ ಪರಿ ಪ್ರಳಯಾಂತಕ ವಂಚಕನಾಗೋದನ್ನು ತಪ್ಪಿಸಬಹುದಿತ್ತೇನೋ. ಆದರೆ ಅದೇಕೋ ಸಿಂಧೂ ಕೂಡಾ ಇಂಥಾ ಹಡಬೆ ಕಾಸಿನ ರುಚಿ ಹತ್ತಿಸಿಕೊಂಡು ಬಿಟ್ಟಿದ್ದಳು. ಅದರಿಂದಲೇ ಕೊಬ್ಬಿಕೊಂಡ ಕಾರ್ತಿಕ್ ಕಂಡೋರ ಕಟ್ಟಡಕ್ಕೆ ನಕಲಿ ದಾಖಲೆ ಸೃಷ್ಟಿಸಿ ಲೋನು ತೆಗೆದುಕೊಂಡು ಕಾಸು ಗುಂಜಿಕೊಳ್ಳುವಷ್ಟರ ಮಟ್ಟಿಗೆ ವಂಚಕನಾದ. ದುಬಾರಿ ಕಾರುಗಳ ಚಟ ಹತ್ತಿಸಿಕೊಂಡು ಒಂದೇ ಕಾರಿಗೆ ನಾಲಕೈದು ಬ್ಯಾಂಕುಗಳಿಂದ ಲೋನ್ ಕಾಸೆತ್ತಿ ಐಶಾರಾಮಿ ಜೀವನ ನಡೆಸಲಾರಂಭಿಸಿದ. ಹೀಗೆ ಬೆಲೆ ಬಾಳುವ ಕಾರಲ್ಲಿ ಓಡಾಡುತ್ತಾ ಪ್ರತಿಷ್ಟಿತ ಆಸಾಮಿ ಎಂಬಂತೆ ಪೋಸು ಕೊಡುತ್ತಾ ಬಂದಿರುವ ಕಾರ್ತಿಕನ ಫ್ರಾಡು ಪುರಾಣ ನಿಜಕ್ಕೂ ಕಂಗಾಲಾಗುವಂತಿದೆ.

ಸದ್ಯ ಕಾರ್ತಿಕ್ ಕಂಬಿ ಎಣಿಸುವಂತೆ ಮಾಡಿರೋದು ಬ್ಯಾಂಕ್ ಆಫ್ ಬರೋಡಕ್ಕೆ ನಕಲಿ ದಾಖಲೆ ತೋರಿಸಿ ಮೂವತ್ತಾರು ಲಕ್ಷಕ್ಕೆ ನಾಮ ಹಾಕಿದ ಪ್ರಕರಣ. ಬ್ಯಾಂಕ್ ಆಫ್ ಬರೋಡಾದಿಂದ ಕಾರು ಖರೀದಿಗಾಗಿ ಕಾರ್ತಿಕ್ ಸತ್ಯದ ತಲೆ ಮೇಲೆ ಹೊಡೆದಂತೆ ನಕಲಿ ದಾಖಲೆ ಸೃಷ್ಟಿಸಿದ್ದ. ಜ್ಯುಬಿಲೆಂಟ್ ಮೋಟಾರ್‍ಸ್ ಪ್ರೈವೇಟ್ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ಕೊಟ್ಟಿದ್ದ. ಇದರಿಂದಲೇ ಅಖಂಡ ಮೂವತ್ತಾರು ಲಕ್ಷ ರೂಪಾಯಿ ವಂಚನೆಯನ್ನೂ ಮಾಡಿದ್ದ. ಆದರೆ ಈ ಬಗ್ಗೆ ಬ್ಯಾಂಕಿನ ಮ್ಯಾನೇಜರ್ ಹರೀಶ್ ಪರಿಶೀಲನೆ ನಡೆಸಿದಾಗ ಕಾರ್ತಿಕ್ ಕೊಟ್ಟಿದ್ದ ದಾಖಲೆಗಳೆಲ್ಲವೂ ಫೇಕು ಎಂಬ ವಿಚಾರ ಗಮನಕ್ಕೆ ಬಂದಿದೆ. ಅವರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಆ ಕ್ಷಣವೇ ಪೊಲೀಸರು ಮಲ್ಲೇಶ್ವರದ ಐಶಾರಾಮಿ ಪ್ಲಾಟಿನಿಂದ ಕಾರ್ತಿಕ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.

 

 

ಹೀರೋ ಆಗಲು ಹೋಗಿದ್ದ!

ಬಹುಶಃ ಕಾರ್ತಿಕ್ ಈ ವರೆಗೂ ಮಾಡಿಕೊಂಡು ಬಂದಿರುವ ವಂಚನೆಗಳನ್ನು ಗಮನಿಸಿದರೆ ಈಗ ತಗುಲಿಕೊಂಡಿರುವ ಪ್ರಕರಣ ಏನೇನೂ ಅಲ್ಲ. ಅಷ್ಟಕ್ಕೂ ನಿಯತ್ತಾಗಿ ಬದುಕೋ ಕನಿಷ್ಟ ಮನುಷ್ಯತ್ವ ಇದ್ದಿದ್ದರೆ ಕಾರ್ತಿಕ್ ಈವತ್ತು ಈ ಪರಿ ಮಾನ ಕಳೆದುಕೊಂಡು ಜೈಲು ಪಾಲಾಗುವ ಅವಸ್ಥೆಯೂ ಬರುತ್ತಿರಲಿಲ್ಲ. ಅಷ್ಟಕ್ಕೂ ಈತ ಈಗೊಂದು ಹನ್ನೆರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಎಕ್ಸೈಜ್ ಡಿಪಾರ್ಟ್‌ಮೆಂಟಿನಲ್ಲಿ ಕೆಲಸ ಮಾಡಿಕೊಂಡಿದ್ದವನು. ಅಲ್ಲಿ ಕೈ ತುಂಬಾ ಸಂಬಳ ಬರುತ್ತಿತ್ತು. ಆದರೆ ಅದರಿಂದ ತನ್ನ ದುಬಾರಿ ಕಾರುಗಳ ಹುಚ್ಚು ಮತ್ತು ಐಶಾರಾಮಿ ಜೀವನ ನಡೆಸುವ ಖಯಾಲಿಯನ್ನು ನೀಗಿಕೊಳ್ಳಲು ಸಾಧ್ಯವಿಲ್ಲ ಎಂಬ ಅಸಹನೆಯ ಪಿಶಾಚಿ ಇವನ ಮನಸು ಹೊಕ್ಕು ಕೂತಿತ್ತು. ಆ ಕಾಲಕ್ಕೆಲ್ಲ ತಂಗಿ ಸಿಂಧೂ ನಟಿಯಾಗಿದ್ದಳಲ್ಲಾ? ತಾನೂ ನಾಯಕ ನಟನಾಗಿ ಮೆರೆದಾಡುತ್ತಾ ನಟಿಯರನ್ನು ಬಲೆಗೆ ಬೀಳಿಸಿಕೊಂಡು ಮಜಾ ಉಡಾಯಿಸಬೇಕೆಂಬ ತಹ ತಹವೂ ಕಾರ್ತಿಕನಿಗಿತ್ತು. ಆ ಆಸೆ ಅಚಾನಕ್ಕಾಗಿ ಕೈಗೂಡುವ ವಾತಾವರಣ ನಿರ್ಮಾಣವಾಗಿದ್ದು ಈಗ್ಗೆ ಹತ್ತು ವರ್ಷಗಳ ಹಿಂದೆ!

ಹತ್ತು ವರ್ಷಗಳ ಹಿಂದೆ ನಟಿ ಸಿಧೂ ಮೆನನ್‌ಳ ಅಣ್ಣ ಕಾರ್ತಿಕ್ ನಾಯಕನಟನಾಗಿದ್ದ `ಸುಕುಮಾರ’ ಎಂಬ ಸಿನಿಮಾ ಸೆಟ್ಟೇರಿತ್ತು. ಕಾನ್ಫಿಡೆಂಟ್ ಗ್ರೂಪ್‌ನ ಹಣದ ಕುಳ ಸಿ.ಜೆ. ರಾಯ್ ಆ ಚಿತ್ರದ ನಿರ್ಮಾಪಕನಾಗಿದ್ದ. ಕೇರಳದಲ್ಲಿ ದೊಡ್ಡ ಹೆಸರು ಮಾಡಿರುವ ರಾಜಸೇನನ್ ಈ ಚಿತ್ರವನ್ನು ನಿರ್ದೇಶಿಸಬೇಕಿತ್ತು. ಮಲಯಾಳಂನಲ್ಲಿ ಮೂವತ್ಮೂರು ಚಿತ್ರಗಳನ್ನು ನಿರ್ದೇಶಿಸಿರುವ ರಾಜಸೇನನ್ ಅವರ ಇಪ್ಪತ್ತೆಂಟು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಮಲಯಾಳಂನ ಖ್ಯಾತ ನಟ ಜಯರಾಮ್ ಅವರ ಹದಿನೆಂಟು ಸಿನಿಮಾಗಳನ್ನು ರಾಜಸೇನ್ ನಿರ್ದೇಶಿಸಿದ್ದರು. ಇಂಥ ರಾಜಸೇನ್‌ಗೂ ನಿರ್ಮಾಪಕ ರಾಯ್‌ಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅದೇನೋ ಕಿರಿಕಿರಿಯಾಗಿದ್ದರಿಂದ ಮುಹೂರ್ತವಾದಮೇಲೆ ಸಿನಿಮಾ ನಿಂತುಹೋಗಿತ್ತು. ಅಷ್ಟೊತ್ತಿಗಾಗಲೇ ಆ ಚಿತ್ರದ ಮ್ಯೂಸಿಕ್, ಹಾಡುಗಳೆಲ್ಲಾ ರೆಡಿಯಾಗಿಬಿಟ್ಟಿದ್ದವು. ಈ ಚಿತ್ರದಲ್ಲಿ ಅವಕಾಶ ಸಿಕ್ಕ ಉದ್ವೇಗದಲ್ಲಿ ಅದರ ನಾಯಕನಟನಾಗಿದ್ದ ಕಾರ್ತಿಕ್ ಸೆಂಟ್ರಲ್ ಎಕ್ಸೈಸ್‌ನ ಕೇಂದ್ರ ಸರ್ಕಾರದ ಹುದ್ದೆಗೆ ರಾಜೀನಾಮೆ ಕೊಟ್ಟುಬಿಟ್ಟಿದ್ದ. ಸಿನಿಮಾ ದಿಢೀರನೆ ನಿಂತುಹೋದ ಕಾರಣದಿಂದ ಕಾರ್ತಿಕ್ ಕುದ್ದುಹೋಗಿದ್ದ. ಕಾರ್ತಿಕ್‌ಗೆ ತಮ್ಮಿಂದ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಸಿ.ಜೆ. ರಾಯ್ ಆ ಚಿತ್ರದ ಕಥೆ ಸೇರಿದಂತೆ ಧ್ವನಿಮುದ್ರಿಕೆಯಗಳ ಹಕ್ಕನ್ನೂ ಆತನ ಹೆಸರಿಗೇ ಬರೆದು ಕೊಟ್ಟು. `ಇದನ್ನು ಇಟ್ಟುಕೊಂಡು ಯಾರ ಮೂಲಕವಾದರೂ ನೀನೇ ಸಿನಿಮಾ ಮುಂದುವರೆಸಿಕೋ’ ಎಂದು ಹೇಳಿ ಕೈತೊಳೆದುಕೊಂಡಿದ್ದರು.

 

 

ನಕಲಿ ದಾಖಲೆ ಸೃಷ್ಟಿಸೋದೇ ಇವನ ಅಸಲಿ ಕಸುಬು!

ನಂತರ ತಂಗಿ ಸಿಂಧುವಿನ ಪ್ರಭಾವಳಿಯಿಂದಲೇ ಯು-೨ ವಾಹಿನಿಯಲ್ಲಿ ನಿರೂಪಕನಾಗಿ ಮುಂದುವರೆದ ಕಾರ್ತಿಕ್ ಹೇಗಾದರೂ ಈ ಸಿನಿಮಾವನ್ನು ಮುಂದುವರೆಸಬೇಕು ಎಂದು ತಾನೇ ಸಿನಿಮಾ ಮಾಡಲು ಮುಂದಾಗಿದ್ದ. ಒಂದಷ್ಟು ಕಲಾವಿದರಿಗೆ ಅಡ್ವಾನ್ಸ್ ನೀಡಿ ಇನ್ನೇನು ಸಿನಿಮಾ ಆರಂಭಿಸಲು ಪ್ಲಾನು ಮಾಡಿದ್ದ. ಆದರೆ ಆ ಪ್ರಾಜೆಕ್ಟೂ ನೆಗೆದು ಬಿದ್ದಿತ್ತು. ಆ ನಂತರ ಕಾರ್ತಿಕ್ ಅಚ್ಚುಕಟ್ಟಾಗಿ ಕ್ರಿಮಿನಲ್ ಮೈಂಡು ಉಪಯೋಗಿಸಿ ಸಿಕ್ಕವರನ್ನೆಲ್ಲ ಮುಂಡಾಯಿಸಲಾರಂಭಿಸಿದ್ದ. ಪ್ರೀತಿಯನ್ನೂ ಕೂಡಾ ಫ್ರಾಡಿಗೆ ಬಳಸಿಕೊಂಡಿದ್ದು ಈತನ ಪ್ರಳಯಾಂತಕ ಬುದ್ಧಿಗೆ ಪಕ್ಕಾ ಉದಾಹರಣೆ. ಈತನಿಗೆ ಹುಡುಗೀರ ಖಯಾಲಿ ಆರಂಭದಿಂದಲೂ ತುಸು ಹೆಚ್ಚೇ ಇತ್ತು. ಇಂಥವನು ಗಾಯತ್ರೀನಗರದ ಸ್ಥಿತಿವಂತ ಕುಟುಂಬದ ಹುಡುಗಿಯನ್ನು ೨೦೦೧ರ ಸುಮಾರಿನಲ್ಲಿಯೇ ಬಲೆಗೆ ಬೀಳಿಸಿಕೊಂಡಿದ್ದ. ಕಡೆಗೊಂದು ದಿನ ಆಕೆಯೊಂದಿಗೆ ಓಡಿ ಹೋಗಿದ್ದ. ಸ್ವಲ್ಪ ಸಮಯದಲ್ಲಿಯೇ ಆಕೆ ಕಾರ್ತಿಕನ ಕಾಟ ತಡೆಯಲಾಗದೆ ಮನೆ ಸೇರಿಕೊಂಡಿದ್ದಳು. ಅಷ್ಟರಲ್ಲಿಯೇ ಈತ ಆ ಹುಡುಗಿಯಿಂದ ಯಾವ ಪರಿ ಕಾಸು ಕಿತ್ತಿದ್ದನೆಂದರೆ ಅದೇ ಕಾಸಲ್ಲಿ ಎಸ್ಟೀಮ್ ಕಾರು ತೆಗೆದುಕೊಂಡಿದ್ದ!

ಇಂಥಾ ಕಾರ್ತಿಕನಿಗೆ ತನ್ನ ತವರೂರಾದ ಕೇರಳದಲ್ಲಿಯೂ ಒಂದು ಮದುವೆಯಾಗಿದೆ. ಆ ಸಂಬಂಧ ಯಾವತ್ತೋ ಮುರಿದು ಬಿದ್ದಿದೆ. ಮನೋಜ್ ಕಾರ್ತಿಕ ಈಗ ಅದ್ಯಾರೋ ಅನು ಎಂಬಾಕೆಯ ಜೊತೆಗೆ ಮಲ್ಲೇಶ್ವರದ ಎಂಇಎಸ್ ಕಾಲೇಜು ಸಮೀಪವಿರುವ ಅಪಾರ್ಟ್‌ಮೆಂಟಿನಲ್ಲಿ ವಾಸವಿದ್ದಾನೆ. ಹೇಳಿಕೊಳ್ಳಲಿಕ್ಕೊಂದು ನೆಟ್ಟಗಿನ ಯಾವ ಕೆಲಸವನ್ನೂ ಮಾಡದ ಕಾರ್ತಿಕನಿಗೆ ವಂಚನೆಯೇ ಸಂಪಾದನೆಯ ಮೂಲ ಮಂತ್ರ. ಇಂಥಾ ವಂಚನೆಗಳಿಂದಲೇ ಈತನ ಒಡೆತನದಲ್ಲಿರುವ ಕಾರುಗಳ ಕಥೆ ಕೇಳಿದರೆ ಎಂಥವರೂ ಕಂಗಾಲಾಗುವುದು ಗ್ಯಾರೆಂಟಿ. ಆಡಿ, ಫಾರ್ಚುನರ್, ಬಿಎಂಡಬ್ಲ್ಯೂ, ಇನ್ನೋವಾ ಮತ್ತು ಸ್ವಿಫ್ಟ್‌ನಂಥಾ ಐಶಾರಾಮಿ ಕಾರುಗಳು ಕಾರ್ತಿಕನ ಒಡೆತನದಲ್ಲಿವೆ. ಅಂದಹಾಗೆ ಇಂಥಾ ಐಶಾರಾಮಿ ಕಾರುಗಳನ್ನೇ ಈತ ವಂಚನೆಗೆ ಅಸ್ತ್ರವಾಗಿಸಿಕೊಂಡಿದ್ದಾನೆ. ಈ ಸ್ವಿಪ್ಟ್ ಕಾರಿನ ಮೇಲೇ ಕಾರ್ತಿಕ ಎರಡ್ಮೂರು ಬ್ಯಾಂಕುಗಳಿಂದ ಲೋನ್ ಗುಂಜಿಕೊಂಡಿದ್ದಾನೆಂದರೆ ಆತನ ಕರಾಮತ್ತು ಎಂಥಾದ್ದಿರಬಹುದೆಂದು ಯಾರಿಗಾದರೂ ಅರ್ಥವಾಗುತ್ತದೆ!

 

 

ರಾಧಿಕಾ ಅಣ್ಣಂಗೂ ಸಿಂಧೂ ತಮ್ಮಂಗೂ ಏನು ಸಂಬಂಧ?

ಇಷ್ಟೆಲ್ಲಾ ಕೀರ್ತಿ ಪತಾಕೆ ಹೊಂದಿರುವ ಕಾರ್ತಿಕ್ ಏನನ್ನೇ ಮಾಡಿದರೂ ಯಾಮಾರಿಸುವ ಉದ್ದೇಶದಿಂದಲೇ ಮಾಡುತ್ತಾನೆ. ಇಂಥವನಿಗೆ ನಟಿ ರಾಧಿಕಾಳ ಅಣ್ಣ ರವಿರಾಜ್ ಎಂಬಾತ ಖಾಸಾ ದೋಸ್ತ. ರವಿರಾಜ್ ಮತ್ತು ಕಾರ್ತಿ ಒಟ್ಟಾಗಿಯೇ ಬಹುತೇಕ ವಂಚನೆಗಳನ್ನು ನಡೆಸುತ್ತಾರೆ. ಇವರಿಬ್ಬರೂ ಎಂಎಸ್ ರಾಮಯ್ಯ ಕಾಲೇಜಿನ ಎದುರಲ್ಲಿಯೇ ಮಗ್‌ಶಾಟ್ ಎಂಬ ಐಶಾರಾಮಿ ಪಬ್ ನಡೆಸುತ್ತಿದ್ದಾರೆ. ಪಕ್ಕಾ ಹೈಟೆಕ್ ಶೈಲಿಯ ಈ ಪಬ್ಬಿನ ಇಂಟೀರಿಯರ್ ಡೆಕೋರೇಷನ್ನಿಗೇ ಮೂರು ಕೋಟಿಗೂ ಹೆಚ್ಚು ಖರ್ಚಾಗಿದೆ. ಈ ಇಂಟೀರಿಯರ್ ಡೆಕೋರೇಷನ್ ಮಾಡಿದ್ದು ಕೇರಳ ಮೂಲದ ನತದೃಷ್ಟ. ಆತನಿಗೆ ಕಾರ್ತಿಕ್ ಮತ್ತು ರವಿರಾಜ್ ಜೋಡಿ ಭರ್ತಿ ಮೂರು ಕೋಟಿಗೆ ನಾಮ ತೀಡಿದೆ. ಈ ಬಗ್ಗೆ ಕೇರಳದವನು ಪೊಲೀಸರಿಗೂ ದೂರು ನೀಡಿದ್ದಾನೆ!

 

 

ಹುಡುಗೀರ ಹುಚ್ಚ!

ಇಂಥಾ ಕಾರ್ತಿಕ್ ಪರ್ಸನಲ್ ಆಗಿ ಒಂದೇ ಕಾರಿನ ಮೇಲೆ ನಕಲಿ ದಾಖಲೆ ಸೃಷ್ಟಿಸಿ ಮೂರ್ನಾಲಕ್ಕು ಬ್ಯಾಂಕುಗಳಿಂದ ಲೋನ್ ಪಡೆಯೋದನ್ನ ದಂಧೆ ಮಾಡಿಕೊಂಡಿದ್ದಾನೆ. ತೀರಾ ಒಂದು ಕಾರಿಗೆ ಲೋನ್ ಸಿಗುವುದು ಕಷ್ಟ. ಅಂಥಾದ್ದರಲ್ಲಿ ಈತ ಒಂದೇ ಕಾರಿನ ಮೇಲೆ ಮೂರು ಮೂರು ಕಡೆಗಳಲ್ಲಿ ಲೋನ್ ತೆಗೆದುಕೊಳ್ಳುತ್ತಾನೆಂದರೆ ಈತ ಎಂಥಾ ಕ್ರಿಮಿನಲ್ ಎಂಬುದು ಎಂಥವರಿಗಾದರೂ ಅರ್ಥವಾಗುತ್ತದೆ. ಇಷ್ಟವಾದ ಹೆಣ್ಣೊಬ್ಬಳು ಸಿಗೋದಾದರೆ ಲಕ್ಷ ಲಕ್ಷ ಸುರಿಯಲೂ ಕಾರ್ತಿಕ್ ಹಿಂದೆ ಮುಂದೆ ನೋಡುವವನಲ್ಲ. ಇಂಥಾ ರವಿರಾಜ್ ಮತ್ತು ಕಾರ್ತಿಕ್ ಹೆಣ್ಣುಮಕ್ಕಳನ್ನು ಕರೆದು ಕೊಂಡು ಔಟಿಂಗ್ ಹೋಗಿ ಪದೇ ಪದೆ ಮೋಜು ಮಸ್ತಿ ಮಾಡುತ್ತಾರೆ ಎನ್ನುವ ಮಾತಿದೆ. ಈ ತರಹದ ಸ್ವಭಾವ ಹೊಂದಿರುವ ಕಾರ್ತಿಕನ ಫ್ರಾಡುಗಳಿಗೆ ಆರಂಭ ಕಾಲದಿಂದಲೂ ತಂಗಿ ಕಂ ನಟಿ ಸಿಂಧೂ ಮೆನನ್ ಸಪೋರ್ಟ್ ಇದ್ದೇ ಇದೆ. ಫ್ರಾಡು ಮಾಡಿದ ಲಕ್ಷ ಲಕ್ಷ ಕಾಸು ಲಂಡನ್ನಿನಲ್ಲಿರುವ ಸಿಂಧೂ ಖಾತೆಗೆ ಜಮೆಯಾಗಿದ್ದೇ ಅದಕ್ಕೆ ಉದಾಹರಣೆ. ಇದೀಗ ಜೈಲು ಪಾಲಾಗಿರುವ ಕಾರ್ತಿಕನ ವಂಚನೆಯ ಪ್ರಕರಣಗಳು ದಂಡಿ ದಂಡಿಯಾಗಿ ಹೊರ ಬರುತ್ತಿವೆ. ಇಷ್ಟರಲ್ಲೇ ಸಿಂಧೂ ಮೆನನ್ ಜೈಲು ಪಾಲಾದರೂ ಅಚ್ಚರಿಯೇನಿಲ್ಲ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top