ಸಿನಿಮಾ

ಸುದೀಪ್ ಚಿತ್ರರಂಗದ ಪಯಣಕ್ಕೆ ಮಹತ್ವದ ತಿರುವು ಕೊಟ್ಟ ಚಿತ್ರವಿದು.

ಕನ್ನಡ ಚಿತ್ರರಂಗದ ಹೆಸರಾಂತ ನಟನಾಗಿರುವ ಕಿಚ್ಚ ಸುದೀಪ್ ತಮ್ಮ ಅಮೋಘ ಅಭಿನಯದ ಮೂಲಕ ಕೋಟ್ಯಂತರ ಕನ್ನಡಿಗರ ಮನಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಸದಾ ವಿಭಿನ್ನ ಚಿತ್ರಗಳಲ್ಲಿ ಅಭಿನಯ ಮಾಡುವ ಕಿಚ್ಚ ಸುದೀಪ್ ಅವರ ಪ್ರತಿ ಸಿನಿಮಾ ಬಿಡುಗಡೆ ಸಮಯದಲ್ಲೂ ಅಭಿಮಾನಿಗಳು ಕಾತುರರಾಗಿ ಕಾಯುತ್ತಾರೆ.

 

 

 

ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್‌ ಜೊತೆಗೆ ಟಾಲಿವುಡ್‌, ಕಾಲಿವುಡ್‌ ಹಾಗು ಬಾಲಿವುಡ್‌ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇಷ್ಟೆಲ್ಲಾ ಹೆಸರು ಗಳಿಸಿರುವ ಕಿಚ್ಚ ಸುದೀಪ್ ಚಿತ್ರರಂಗದ ಜೀವನಕ್ಕೆ ತಿರುವು ಕೊಟ್ಟ ಚಿತ್ರ “ಹುಚ್ಚ” ಸಿನಿಮಾ . ಈ ಚಿತ್ರ ಕಿಚ್ಚನ ಕರಿಯರ್‌ ನಲ್ಲಿ ಮ್ಯಾಜಿಕ್ ಮಾಡಿತ್ತು.

 

 

17 ವರ್ಷಗಳ ಹಿಂದೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಚಿತ್ರ ‘ಹುಚ್ಚ’. ಜನಮಾನಸಲ್ಲಿ ಅಚ್ಚಳಿಯದೆ ಈ ಚಿತ್ರ ಉಳಿದು ಬಿಟ್ಟಿದ್ದೆ. ಸುದೀಪ್ ಕೂಡ ಈ ಚಿತ್ರವನ್ನು ಇಂದಿಗೂ ನೆನಪಿಸುತ್ತಾರೆ. ಅವರ ಜೀವನದಲ್ಲಿ ಮ್ಯಾಜಿಕ್ ಮಾಡಿದ ಚಿತ್ರವಿದು ಇದನ್ನು ಸುದೀಪ್ ಕೂಡ ಒಪ್ಪುತ್ತಾರೆ.

 

 

ಹುಚ್ಚ -2 ಸಿನೆಮಾದ ಆಡಿಯೋ ಬಿಡುಗಡೆ ನಿನ್ನೆ ನಡೆಯಿತು ಈ ವೇಳೆ ಮಾತನಾಡಿದ ಸುದೀಪ್ ಹುಚ್ಚ ಚಿತ್ರ ಬಿಡುಗಡೆಗೊಂಡು 17 ವರ್ಷ ಕೆಳೆದಿರುವುದು ನನಗೆ ನಂಬಲಾಗುತ್ತಿಲ್ಲ ಎಂದರು. ನಿನ್ನೆ ಮೊನ್ನೆ ತೆಗೆದ ಹಾಗೆ ಅನುಸುತ್ತಿದೆ. ಎಲ್ಲ ಚಿತ್ರಗಳು ಈ ರೀತಿ ಆಗುವುದಿಲ್ಲ. ಈ ಸಿನಿಮಾ ಯಶಸ್ವಿಯಾದ ಕಾರಣಕ್ಕೆ ನಾನು ಇಲ್ಲಿದ್ದೇನೆ ಎಂದು ಅವರು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top