ಸಮಾಚಾರ

ವಿರುಷ್ಕಾ ಜೋಡಿ ವಾಸಿಸುವ ಮುಂಬೈನ ದುಬಾರಿ ಫ್ಲಾಟ್ ರೆಂಟ್ ಎಷ್ಟು ಗೊತ್ತೇ.

ಇತ್ತೀಚಿಗೆ ವಿದೇಶದಲ್ಲಿ ಅದ್ದೂರಿಯಾಗಿ ವಿದೇಶದಲ್ಲಿ ಮದುವೆಯಾಗಿದ್ದ ವಿರಾಟ್ ಕೊಹ್ಲಿ ಹಾಗು ಅನುಷ್ಕಾ ಜೋಡಿ ಈಗ ಮುಂಬೈ ನಗರದಲ್ಲಿರುವ ಫ್ಲಾಟ್ ವೊಂದನ್ನು ಬಾಡಿಗೆ ಪಡೆದಿದ್ದಾರೆ ಈ ಮನೆಯ ಬಾಡಿಗೆ ಬೆಲೆ ಕೇಳಿದರೆ ಹುಬ್ಬೇರಿಸಬೇಕು ಅಷ್ಟೊಂದು ದುಬಾರಿಯಾಗಿದೆ.

 

 

ಮುಂಬೈ ನಗರದ ವರ್ಲಿ ಎಂಬ ಏರಿಯಾದಲ್ಲಿರುವ ರಹೀಜಾ ಲೆಜೆಂಡ್ಸ್ ಅಪಾರ್ಟ್‌ಮೆಂಟ್‌ ನಲ್ಲಿ ಫ್ಲಾಟ್ ಬಾಡಿಗೆ ಪಡೆದಿದ್ದಾರೆ. ಇದು ದುಬಾರಿ ಬಾಡಿಗೆ ಹೊಂದಿದ್ದು ಮುಂಬೈ ನಗರದಲ್ಲೇ ದುಬಾರಿ ಮತ್ತು ಐಷಾರಾಮಿ ಫ್ಲಾಟ್ ಎಂದು ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ಈ ಮನೆಯ ಒಪ್ಪನಾದಕ್ಕೆ ವಿರಾಟ್ ಕೊಹ್ಲಿ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

 

 

 

ಇನ್ನು ಈ ಮನೆಯ ದುಬಾರಿ ಅಡ್ವಾನ್ಸ್ ಕೂಡ ಬಾಡಿಗೆಯ ಹತ್ತು ಪಟ್ಟು ಇದೆ ಅಂದ್ರೆ 1.5 ಕೋಟಿ ಅಷ್ಟಿದೆ. ಸುಮಾರು ಎರಡು ವರ್ಷಗಳ ಕಾಲಾವಧಿವರೆಗೆ ವಿರುಷ್ಕ ಜೋಡಿ ಈ ಬಾಡಿಗೆ ಫ್ಲಾಟ್ ನಲ್ಲಿ ವಾಸ ಮಾಡಲಿದ್ದಾರೆ. ಎರಡು ವರ್ಷಗಳ ನಂತರ ತಮ್ಮ ಸ್ವಂತ ಮನೆಗೆ ಶಿಫ್ಟ್ ಅಗಲಿದ್ದಾರೆ ಎಂದು ತಿಳಿದು ಬಂದಿದೆ.

 

 

ಮದುವೆ ಆದ ಬಳಿಕ ವಿರಾಟ್ ಕೊಹ್ಲಿ ಹಾಗು ಅನುಷ್ಕಾ ಶರ್ಮ ತುಂಬಾ ಅನ್ಯೋನ್ಯವಾಗಿ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿಗೆ ಇಬ್ಬರು ಹಗ್ ಮಾಡಿರುವ ಚಿತ್ರವನ್ನು ಅನುಷ್ಕಾ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ಅದಾದ ಬಳಿಕ ಕಿಸ್ ಮಾಡುವ ಚಿತ್ರವನ್ನು ಕೂಡ ಶೇರ್ ಮಾಡಿದ್ದರು. ಕಳೆದ ವಾರ ಮಧ್ಯಪ್ರದೇಶದ ಶೂಟಿಂಗ್ ಮುಗಿಸಿ ಮುಂಬೈ ಗೆ ವಾಪಸಾದ ಅನುಷ್ಕಾ ಅವರನ್ನು ಆಹ್ವಾನ ಮಾಡಲು ಖುದ್ದು ವಿರಾಟ್ ಏರ್ ಪೋರ್ಟ್ ಗೆ ತೆರಳಿದ್ದರು ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top