ವಿಶೇಷ

ತಮ್ಮ ವಿಚಿತ್ರವಾದ ದೇಹಾಕೃತಿಗಳಿಂದ ವರ್ಲ್ಡ್ ಫೇಮಸ್ ಆದ ಈ 7 ಹೆಣ್ಮಕ್ಕಳ ಬಗ್ಗೆ ನೀವು ತಿಳ್ಕೊಳ್ಳೆಬೇಕು

ಪ್ರಕೃತಿಯಲ್ಲಿ ಅಂದ ಎಂದು ಕೇಳಿದರೆ ಮೊದಲು ನಮಗೆ ಕಾಣಸಿಗುವುದು ಹೆಣ್ಣು ಹೆಣ್ಣು ತನ್ನ ವಿಶಿಷ್ಟ ದೇಹಾಕೃತಿ ಹಾಗೂ ಇತರ ಗುಣ ಸ್ವಭಾವಗಳಿಂದ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಸಹ ವಿಶಿಷ್ಟ ಸ್ಥಾನಮಾನವನ್ನು ಹೊಂದಿದ್ದಾಳೆ ಈ ರೀತಿ ಇಂದು ಗಂಡಿಗೆ ಸಮವಾಗಿ ಹೆಣ್ಣು ದುಡಿಯುತ್ತಾ ಮನೆಯ ಮಕ್ಕಳು ಹಾಗೂ ತನ್ನ ಕೆಲಸದ ಜವಾಬ್ದಾರಿಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಾಳೆ ಆದ್ದರಿಂದಲೇ ಹೆಣ್ಣನ್ನು ಪರಿಪೂರ್ಣಳು ಎಂದು ಕರೆಯುತ್ತಾರೆ .

ಇನ್ನು ತಮ್ಮ ವಿಶಿಷ್ಟ ದೇಹ ಕೃತಿಗಳಿಂದ ಪ್ರಪಂಚದಾದ್ಯಂತ ಖ್ಯಾತಿಯನ್ನು ಹೊಂದಿರುವ ಕೆಲವು ಮಹಿಳೆಯರ ಬಗ್ಗೆ ನೀವು ತಿಳಿದುಕೊಳ್ಳುತ್ತೀರಿ ಮುಂದೆ ಓದಿ .

ಜ್ಯೋತಿ ಆಮ್ಗೆ 

 

ಹೀಗೆ ಪ್ರಪಂಚದಲ್ಲಿಯೇ ಅತ್ಯಂತ ಕುಬ್ಜ ಮಹಿಳೆ ಈಕೆಯ ಎತ್ತರ ಅರುವತ್ತ ಮೂರು ಸೆಂಟಿಮೀಟರ್ ಗಳು ತನ್ನ ಎತ್ತರದಿಂದಲೇ ಪ್ರಪಂಚದಾದ್ಯಂತ ಖ್ಯಾತಿಯಾಗಿದ್ದಾರೆ ಈಕೆ ಇಪ್ಪತ್ತ್ ನಾಲ್ಕು ವರ್ಷಗಳಾದರೂ ಸಹ ಆಕೆಯ ಎತ್ತರದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ

ಮೈಕೆಲ್

ನಲವತ್ತ ಮೂರು ವರ್ಷದ ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ಸೇರಿದ ಈ ಮಹಿಳೆ ತನ್ನ ದೊಡ್ಡ ನಡುವಿನಿಂದ ಪ್ರಪಂಚಾದ್ಯಂತ ಖ್ಯಾತಿ ಹೊಂದಿದ್ದಾಳೆ ಈಕೆಯ ದೇಹದ ತೂಕ ನೂರಾ ತೊಂಬತ್ತು ಕೆಜಿ ಗಳು ಆದರೆ ಈಕೆಯ ನಡುವಿನ ಸುತ್ತಳತೆ ಎಂಟು ಅಡಿಗಳು ಈಕೆ ಲಿಪಿ ಡೇರಿಯ ಎಂಬ ಸಮಸ್ಯೆಯಿಂದ ಬಳಲುತ್ತಿದ್ದು ತಮ್ಮ ಇಪ್ಪತ್ತನೇ ವರ್ಷದಲ್ಲಿ ಮೊದಲ ಮಗುವಿನ ಹೆರಿಗೆಯ ಸಂದರ್ಭದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗಿತ್ತು .

ಬ್ರಿಟನಿ ಹಾಗೂ ಎಪಿ ಸಯಾಮಿ ಅವಳಿ ಮಕ್ಕಳು 

 

ಈ ಇಬ್ಬರು ಸಯಾಮಿ ಅವಳಿಗಳು ಪ್ರಪಂಚದಾದ್ಯಂತ ತಮ್ಮ ದೇಹದಿಂದಲೇ ಬಹಳಷ್ಟು ಖ್ಯಾತಿಯನ್ನು ಹೊಂದಿದ್ದವರು ಇವರ ತಲೆ ಹಾಗೂ ಎದೆಯ ಭಾಗ ಬೇರೆ ಬೇರೆಯಾಗಿದೆ ಆದರೆ ದೇಹದ ಕೆಳಗಿನ ಭಾಗ ಮಾತ್ರ ಇವರಿಬ್ಬರಿಗೂ ಒಂದೇ ಇದೆ .

ಮೇರಿ ಹಿಲ್ಸ್

ಜರ್ಮನಿ ದೇಶಕ್ಕೆ ಸೇರಿದ ಈ ಮಹಿಳೆ ಪ್ರಪಂಚದಲ್ಲಿ ತನಗೆ ವಿಶಿಷ್ಟ ಸ್ಥಾನಮಾನ ದೊರಕಬೇಕೆಂಬ ಆಸೆ ಪಟ್ಟು ತನ್ನ ವಕ್ಷ ಸ್ಥಳಗಳನ್ನು ಹತ್ತು ಹತ್ತು ಕೆಜಿ ಬರುವಂತೆ ಬೆಳೆಸಿಕೊಂಡಿದ್ದಾಳೆ ಹಾಗೆಯೇ ಆಕರ್ಷಕ ಕೇಂದ್ರ ಬಿಂದುವಾಗಿ ಇಂದು ಆಕೆಯ ವಕ್ಷ ಸ್ಥಳಗಳು ಕಾರ್ಯನಿರ್ವಹಿಸುತ್ತಿದೆ

ಬೇಲೇರಿಯ ಲಿಪಿನೋವಾ 

 

ಬಾರ್ಬಿ ಡಾಲ್ ಯಾರಿಗೆ ಇಷ್ಟ ಇಲ್ಲ ಹೇಳಿ ಬಾರ್ಬಿ ಡಾಲ್ ತರಾನೇ ತನ್ನ ದೇಹವೂ ಕಾಣಿಸಬೇಕೆಂದು ಅನೇಕ ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡು ಈ ರೀತಿ ತಯಾರಾಗಿದ್ದಾಳೆ ಈ ಮಹಿಳೆ ಇದೇ ಈಕೆಗೆ ಗೊಂಬೆಯಂತಹ ಮಹಿಳೆ ಎಂಬ ಕೀರ್ತಿಯನ್ನು ತಂದುಕೊಟ್ಟಿವೆ .

ಆಶಾ ಮಂಡೇಲಾ 

 

ಅತ್ಯಂತ ಉದ್ದವಾದ ಜಡೆಯನ್ನು ಹೊಂದಿರುವ ಮಹಿಳೆಯಾಗಿ ಈಕೆ ಹೊರಹೊಮ್ಮಿದ್ದಾರೆ ಈಕೆಯ ಹತ್ತೊಂಬತ್ತು ಅಡಿ ಆರು ಇಂಚಿನ ಉದ್ದದ ಜಡೆ ದಾಖಲೆಯನ್ನು ಇದುವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗಲಿಲ್ಲ ಹೀಗೆ ಏಕೆ ಪ್ರಪಂಚದಲ್ಲೇ ಅತಿ ಹೆಚ್ಚು ಉದ್ದದ ಕೂದಲನ್ನು ಹೊಂದಿರುವ ಮಹಿಳೆ ಎಂದು ಖ್ಯಾತಿ ಪಡೆದಿದ್ದಾರೆ ಇದಕ್ಕಾಗಿ ಈಕೆ ಇಪ್ಪತ್ತೈದು ವರ್ಷಗಳಿಂದ ತಮ್ಮ ಕೂದಲನ್ನು ಬೆಳೆಸುವಲ್ಲಿ ನಿರತರಾಗಿದ್ದಾರೆ .

ಮರಿಯಾ ಕ್ರಿಸ್ಟಿನಾ

 

ಮೆಕ್ಸಿಕೊ ದೇಶಕ್ಕೆ ಸೇರಿದ ಈ ಮಹಿಳೆ ವಾಂಪೈರ್ ರೀತಿಯಲ್ಲಿ ತನ್ನ ರೂಪವನ್ನು ಬದಲಾಯಿಸಿಕೊಂಡಿದ್ದಾರೆ , ಈಕೆ ಮೊದಲು ತುಂಬಾ ಸುಂದರವಾಗಿಯೇ ಇದ್ದಳು ಈಕೆಗೆ ಒಂದು ಸಂಸಾರ ಕೂಡ ಇತ್ತು ಒಂದು ಮಗುವಿಗೆ ಜನ್ಮ ನೀಡಿದ ನಂತರ ಕೆಲವು ದಿನಗಳ ಕಾಲ ತನ್ನ ಸಂಸಾರದಲ್ಲಿ ಬಿರುಕು ಮೂಡಿ ಈಕೆ ಗಂಡನಿಂದ ಡೈವೋರ್ಸ್ ಪಡೆದುಕೊಂಡಳು ಇದಾದ ಬಳಿಕ ಆಕೆಯ ನೆರೆಹೊರೆಯವರು ಆಕೆಗೆ ಕಾಟ ಕೊಡಲು ಶುರು ಮಾಡಿದ್ದರು ಇದರಿಂದ ಬೇಸತ್ತ ಮರಿಯ ದೆವ್ವದ ರೀತಿ ತನ್ನ ವೇಷವನ್ನು ಬದಲಾಯಿಸಿಕೊಂಡು ಆಗ ಆ ಜನರು ಇವಳ ಹತ್ತಿರ ಬರುವುದಕ್ಕೂ ಹೆದರುತ್ತಿದ್ದರು ಸಮಾಜದ ಮೇಲೆ ಈಕೆಗೆ ಭಾರಿ ವಿರಕ್ತಿ ಇದೇ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top