ಭವಿಷ್ಯ

2018 ರ ಹೊಸ ವರ್ಷ ಯುಗಾದಿ ಯಾವ ರಾಶಿಗಳಿಗೆ ಶುಭ ಫಲ, ಅಶುಭ ಫಲ ಹಾಗು ಮಿಶ್ರ ಫಲ ನೀಡುತ್ತದೆ ತಿಳ್ಕೊಳ್ಳಿ

ಮಾರ್ಚ್ ಹದಿನೆಂಟನೇ ತಾರೀಖು ಹಿಂದೂಗಳಿಗೆ ಹೊಸ ವರ್ಷ ಅಂದರೆ ಯುಗಾದಿ ಹಬ್ಬ ಸೂರ್ಯ ಮತ್ತು ಶನಿ ರಾಜ ಮತ್ತು ಮಂತ್ರಿಯಾಗಲ್ಲಿದ್ದಾರೆ ಈ ವರ್ಷ.

ಮಾರ್ಚ್ ಹದಿನೆಂಟು ತಾರೀಖು ರವಿವಾರ ಶುಕ್ಲಪಕ್ಷ, ಉತ್ತರ ಭಾದ್ರಪದ ನಕ್ಷತ್ರ , ಚೈತ್ರ ಮಾಸ ,ಉತ್ತರಾಯಣ ವಿಳಂಬಿ ವಿರೋಧಿ ಕೃತ 2075 ವಿಕ್ರಮ ಸಂವತ್ಸರ ಇರುವುದು. ಇದೇ ತಿಂಗಳು ಹದಿನೆಂಟನೇ ತಾರೀಖು ಮಾರ್ಚ್ ಹಿಂದೂಗಳ ಹೊಸ ವರ್ಷ ಪ್ರಾರಂಭವಾಗುತ್ತಿದೆ. ಈ ವರ್ಷದ ಹೆಸರು ವಿರೋಧಿ ಕೃತ ಸಂವತ್ಸರ.

 

 

ಗ್ರಂಥಗಳ ಪ್ರಕಾರ ಅದರಲ್ಲಿ ಹೇಗೆ ಬರೆದಿದ್ದಾರೆ ಎಂದರೆ ಯಾವ ದಿನ ಸೃಷ್ಟಿಯ ಕಾಲ ಚಕ್ರ ಪ್ರಥಮ,  ದೇವರು ಅವತರಿಸಿದ ಆ ದಿನವೇ ಚೈತ್ರ ಶುದ್ಧಿ ಭಾನುವಾರವಾಗಿದ್ದು, ಈಗ ಬರುತ್ತಿರುವ ಸಂವತ್ಸರ 2075 ಕೂಡ ಅತ್ಯಂತ ಭಾಗ್ಯಶಾಲಿ ವರ್ಷವಾಗಿದೆ. ಯಾಕೆಂದರೆ ಈ ವರ್ಷವೂ ಸಹ ಚೈತ್ರ ಶುಕ್ಲ, ಪ್ರತಿಪದ ಭಾನುವಾರದ ದಿನವೇ ಬರುತ್ತಿದೆ . ಆದ್ದರಿಂದ ಇದು ಅತ್ಯಂತ ಶುಭ ಪ್ರದವಾಗಿದೆ ಮತ್ತು ಲಾಭದಾಯಕ, ಭಾಗ್ಯ ಶಾಲಿಯಾಗಿದೆ. ರಾಜ ಸೂರ್ಯ ದೇವನಾಗಿದ್ದಾನೆ ಶನಿಯು ಮಂತ್ರಿಯಾಗಲಿದ್ದಾನೆ, ಸಸ್ಯಾಧಿಪತಿ ಕುಜ, ಮೇಘಾಧಿಪತಿ ಶುಕ್ರ, ಧನಾಧಿಪತಿ ರವಿ, ಸೇನಾಧಿಪತಿ ಶುಕ್ರ  ,ರಾಸಾಧಿಪತಿ ಗುರು,ನಿರಾಸಾಧಿಪತಿ ಚಂದ್ರನಾಗುತ್ತಾನೆ.

ಚೈತ್ರ ಮಾಸದಲ್ಲಿ ಅನೇಕ ವ್ರತ ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ .ಹದಿನೆಂಟನೇ ತಾರೀಖು ಮಾರ್ಚ್ ಭಾನುವಾರ ಚೈತ್ರ ನವರಾತ್ರಿಯ ಕೂಡ ಶುಭಾರಂಭವಾಗಲಿದೆ. ಇದರ ನಂತರ ಚೈತ್ರ ಮಾಸದ, ಶುಕ್ಲಪಕ್ಷದ ,ನವಮಿ ತಿಥಿಯ ದಿನ ರಾಮನವಮಿಯೂ ಸಹ ಇದೆ. ಇನ್ನು ಈ ಯುಗಾದಿ ಸಂವತ್ಸರವು, ಹೊಸ ವರ್ಷವೂ ಯಾವ ರಾಶಿಗಳ ಮೇಲೆ ಎಂತಹ ಪ್ರಭಾವ ಬೀರಲಿದೆ ಎಂದು ನೋಡೋಣ ಬನ್ನಿ

 

ಮೇಷ (Mesha)

 

 

ಅಕ್ಟೋಬರ್ ತಿಂಗಳಿನವರೆಗೆ ಗುರುವಿನ ಪೂರ್ಣದೃಷ್ಟಿ ನಿಮ್ಮ ಮೇಲೆ ಇರುತ್ತದೆ. ಭೂಮಿ ಮತ್ತು ಜಮೀನಿಗೆ ಸಂಬಂಧಿಸಿದಂತೆ ಆದಾಯ ಹೆಚ್ಚಾಗುವುದು. ಬೇರೆ ಮೂಲಕ ಕೆಲ ಆದಾಯ ನಿಮಗೆ ಹರಿದು ಬರವುದು. ಯೋಚನೆಗಳಿಂದ ಬಚಾವಾಗಲು ಅವಸರ ಪ್ರಾಪ್ತಿಯಾಗಲಿದೆ. ವಿವಾದಗಳಿಂದ ಆದಷ್ಟು ದೂರವಿರಿ. ನಿಮಗೆ  ದೊರೆಯುವುದು. ಒಂದೇ ಬಾರಿಗೆ ಅನೇಕ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವ ಅವಕಾಶ ದೊರೆಯುವುದು. ಮಿತ್ರರ ಜೊತೆಗೆ ಪರಿವಾರದ ಸಹಯೋಗ ದೊರೆಯುವುದು.

 

ವೃಷಭ (Vrushabha)

 

 

ಶನಿಯ ಪ್ರಭಾವ ಈ ಸಂಪೂರ್ಣ ವರ್ಷ ನಿಮ್ಮ ಮೇಲೆ ಇದೆ ಮತ್ತು ಮುನ್ನ ಮನಸ್ಸು ವಿಚಲಿತವಾಗಲಿದೆ. ಚಿಕ್ಕ ವಿಷಯಗಳಿಗೆ ತುಂಬಾ ಕೋಪ ಗೊಳ್ಳುತ್ತೀರಿ. ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗಲಿದೆ .ಕುಟುಂಬದಲ್ಲಿ ಕಷ್ಟದ ಪರಿಸ್ಥಿತಿ ಎದುರಾಗಲಿದೆ ಆದ್ದರಿಂದ ನೀವು ಯಾವುದಾದರೂ ಬಡವರಿಗೆ ಕಂಬಳಿ ಮತ್ತು ಬೇರೆ ಕಪ್ಪು ಬಣ್ಣದ ವಸ್ತ್ರವನ್ನು ದಾನ ಮಾಡಬೇಕು .

 

ಮಿಥುನ (Mithuna)

 

 

ಈ ಸಂಪೂರ್ಣ ವರ್ಷವೂ ಎಲ್ಲಾ ಕೆಲಸಗಳಲ್ಲೂ ನಿಮಗೆ ಯಶಸ್ಸನ್ನು ತಂದುಕೊಡುವುದು. ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಹೆಚ್ಚಿನ ಯಶಸ್ಸಿನಿಂದ ನಿಮ್ಮ  ಆತ್ಮ ವಿಶ್ವಾಸವು ಇನ್ನೂ ಹೆಚ್ಚಾಗಲಿದೆ . ಆದಾಯದಲ್ಲಿ ವೃದ್ಧಿಯಾಗುವುದು. ಯಾವುದೋ ಒಂದು ದೊಡ್ಡ ಕಾರ್ಯವನ್ನು ಸಹ ನೀವು ಮಾಡಲಿದ್ದೀರಿ, ನೀವು ಯಾರಿಗಾದರೂ ಬಡವರಿಗೆ ಅಕ್ಕಿಯನ್ನು ಮತ್ತು ಬೇಳೆಯನ್ನು ದಾನ ಮಾಡಿ.

 

ಕರ್ಕ (Karka)

 

 

ಈ ರಾಶಿಯವರಿಗೆ ಆತ್ಮ ಬಲವು ತುಂಬಾ ದೃಢವಾಗಿರುತ್ತದೆ. ಆದರೆ ಚಿಂತೆಗಳು ಸ್ವಲ್ಪ ಹೆಚ್ಚಾಗಲಿವೆ. ಯಾವುದೇ ಕೆಲಸವನ್ನು ಅರ್ಧದಲ್ಲೇ ನಿಲ್ಲಿಸಬೇಡಿ. ಮನೆಯಲ್ಲಿ ನಡೆಯುವ ವಾದ ವಿವಾದಗಳಿಂದ ದೂರವಿರಲು ಪ್ರಯತ್ನಿಸಿ. ಡಿಸೆಂಬರ್ 2018  ನಿಂದ ಫೆಬ್ರವರಿ  2019 ವರೆಗೆ ಅಧಿಕವಾಗಿ ಹಣವು ವ್ಯಯವಾಗುವುದು ಮತ್ತು ಆದಾಯವೂ ಸಹ ಕುಂಠಿತವಾಗುವುದು.

 

ಸಿಂಹ (Simha)

 

 

ವರ್ಷಪೂರ್ತಿ ಗ್ರಹಗಳ ಪ್ರಭಾವ ನಿಮ್ಮ ರಾಶಿಯ ಮೇಲೆ  ಬಂದು ಹೋಗುತ್ತವೆ. ನಿಮ್ಮ ಆದಾಯದಲ್ಲಿ ವೃದ್ಧಿಯಾಗುವ ಸಂಭವ ಇದೆ. ಯಾವುದೇ  ದೊಡ್ಡ ಗ್ರಹದ ಪ್ರಭಾವ ಇಲ್ಲದಿರುವುದರಿಂದ ಕೆಲಸ ಮಾಡುವುದಕ್ಕೂ ಮುನ್ನ ಎಲ್ಲ ವಿಷಯಗಳನ್ನು ಕೂಲಂಕುಷವಾಗಿ ಯೋಚನೆ ಮಾಡಿ, ಪರಿಶೀಲಿಸಿ ಮುಂದುವರೆಯಿರಿ . ಈ ಸಮಯ ನಿಮಗೆ ಚಿಂತಾಜನಕ ಸ್ಥಿತಿಯನ್ನು ತಂದೊಡ್ಡಲಿದೆ .ನೀವು ಪ್ರತಿ ಭಾನುವಾರ ಯಾರಿಗಾದರೂ ಬಡವರಿಗೆ ಹಣವನ್ನು  ದಾನವಾಗಿ  ನೀಡಿ.

ಕನ್ಯಾರಾಶಿ (Kanya)

 

ಶನಿಯು ಹತ್ತನೇ ಮನೆಯಲ್ಲಿ ಸ್ಥಿತನಿರುವುದರಿಂದ, ಈ ಸಮಯ   ಅತ್ಯಂತ ಶ್ರೇಷ್ಠ ಸಮಯವಾಗಿದೆ. ದುಃಖ, ಕಷ್ಟದ ಸಮಯಗಳು ದೂರವಾಗಲಿವೆ. ಎಲ್ಲ ವರ್ಗಗಳಿಂದಲೂ ಶುಭ ಸುದ್ದಿಯನ್ನು ಕೇಳಲಿದ್ದೀರಿ.ಆಗಸ್ಟ್ ತಿಂಗಳಿನ ನಂತರ ಕೆಲಸದ ಒತ್ತಡ ಹೆಚ್ಚಾಗುವುದು. ಆದರೂ ಸಹ ಅನುಕೂಲಕರ  ವಾತಾವರಣ ಇರುವುದು, ಅವಶ್ಯಕತೆಗಳು ಸರಿಯಾದ ಸಮಯಕ್ಕೆ ತಕ್ಕಂತೆ ನಿಮ್ಮ ಆಸೆಗಳು ಕೂಡ ಈಡೇರುತ್ತದೆ .

 

ತುಲಾ (Tula)

 

 

ಹೊಸ ವರ್ಷದ ಪ್ರಾರಂಭದಿಂದಲೂ ಅನುಕೂಲತೆಗಳು ಪ್ರಾಪ್ತಿಯಾಗಲಿವೆ .ಶನಿಯು ವಕ್ರಿಯಾಗಿರುವುದರಿಂದ ನಿಮಗೆ ಸ್ವಲ್ಪ ಸಮಸ್ಯೆಗಳು ಕಾಡಲಿವೆ. ಅಕ್ಟೋಬರ್ ತಿಂಗಳಿನಿಂದ ನೀವು  ಸ್ವಲ್ಪ ಮಟ್ಟದ ಸುಧಾರಣೆ ಕಾಣಲಿದ್ದೀರಿ. ನಿಮ್ಮ ಆದಾಯದಲ್ಲಿ ಸುಧಾರಣೆ ಕಂಡುಬರುವುದು. ವಿವಾದಗಳ ವಿಷಯಗಳಲ್ಲಿ ನಿಮಗೆ ವಿಜಯ ದೊರೆಯಲಿದೆ. ಆದ್ದರಿಂದ ನಿಮಗೆ ಕಡ್ಲೆ ಹಿಟ್ಟು ಮತ್ತು ಹಳೆಯ ಬಟ್ಟೆಗಳನ್ನು ದಾನ ಮಾಡಿ.

ವೃಶ್ಚಿಕ (Vrushchika)

 

 

ಆರಂಭಿಕ ದಿನಗಳಲ್ಲಿ ಹೊಸ ವರ್ಷ ತುಸು ಕಷ್ಟಕರವಾಗಲಿದೆ. ಅಕ್ಟೋಬರ್ ನ ನಂತರ ಗುರು ನಿಮ್ಮ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಈ ಸಮಯ ಅನೇಕ ರೀತಿಯಲ್ಲಿ ಅನುಕೂಲಕರವಾಗಿರುವುದು. ಪರಿವಾರದಲ್ಲಿ ವರ್ಚಸ್ಸು ಹೆಚ್ಚಾಗುವುದು. ಎಲ್ಲ ಕಾರ್ಯಗಳಲ್ಲೂ  ಅನುಕೂಲತೆಗಳು ಹೆಚ್ಚಾಗುವವು . ಹೊಸ ಕಾರ್ಯಗಳನ್ನು ಪ್ರಾರಂಭಿಸುವ ಯೋಗವು ನಿಮಗಿದೆ.

 

ಧನು ರಾಶಿ (Dhanu)

 

 

ಮಂಗಳಗ್ರಹ ಮತ್ತು ಶನಿಗ್ರಹದ ಗೋಚಾರ ಈ ರಾಶಿಯ ಮೇಲಿದೆ. ನೀವು ನಿಮ್ಮ  ಸ್ವಂತ ಪ್ರಯತ್ನದಿಂದ ಮುಂದೆ ಬರಲು ಪ್ರಯತ್ನಿಸಿ. ಜನವರಿಯ  ನಂತರ ಒಳ್ಳೆಯ ಸಮಯ ಬರಲಿದೆ, ಬೇರೆಯವರ ಸಹಾಯ ಪಡೆಯದೆ ನೀವು ನಿಮ್ಮ ಕಾರ್ಯಗಳನ್ನು ಮಾಡಿ ಮುಗಿಸುವುದು ಉತ್ತಮ.

 

ಮಕರ (Makara)

 

 

ಈ ವರ್ಷ ಎಲ್ಲಾ ಕೆಲಸಗಳು ಸುಗಮವಾಗಿ ಸಾಗಲಿವೆ . ಯಾವುದೇ ಪ್ರಕಾರದಲ್ಲೂ ಬಾಧೆಗಳು ಬರುವ ಸಂಭವವಿಲ್ಲ. ಅಧಿಕಾರಿಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುವರು ಮತ್ತು ಅನಾವಶ್ಯಕ ಕೆಲಸಗಳಲ್ಲಿ ಸಮಯ ವ್ಯರ್ಥವಾಗಿ ಕಳೆಯಬೇಡಿ ಮತ್ತು ಧನಾಗಮನವು ಸಹ ಉತ್ತಮವಾಗಿದೆ.

 

ಕುಂಭರಾಶಿ (Kumbha)

 

 

ವರ್ಷಪೂರ್ತಿ ನಿಮ್ಮ ಮೇಲೆ ಶನಿ ಪ್ರಭಾವ ಇರುವುದರಿಂದ  ಇದೇ ಸ್ಥಿತಿ ಇರಲಿದೆ. ದನಕ್ಕೆ ಸಂಬಂಧಪಟ್ಟಂತೆ ಕಡಿಮೆ ಆದಾಯ ಇರಲಿದೆ. ಜೊತೆಗೆ  ಆತ್ಮ ಬಲವೂ ಉತ್ತಮವಾಗಿದೆ. ಭವಿಷ್ಯದ ಬಗ್ಗೆ ಯೋಚಿಸುತ್ತಾ ನಿಮ್ಮ ಕನಸುಗಳು ಹಾಗೆಯೇ  ಉಳಿಯಲಿವೆ. ಮಕ್ಕಳ ಜೊತೆ ಸಮಯ ಕಳೆಯುವ  ಯೋಗವೂ ಇದೆ.

 

ಮೀನರಾಶಿ (Meena)

 

 

 

ನೀಚ ಬುಧ , ಸೂರ್ಯ , ಚಂದ್ರ ಮತ್ತು ಉಚ್ಚ ಶುಕ್ರನ ಗೋಚಾರದಲ್ಲಿ ಈ ಸ್ಥಿತಿ ಇರಲಿದ್ದು, ಅನೇಕ ಕಾರಣಗಳಿಂದ ನಿಮ್ಮ ಸಮಸ್ಯೆಗಳು ಹೆಚ್ಚಾಗಲಿವೆ, ಕೆಲಸದಲ್ಲಿ  ನಿಮಗಿಂತಲೂ ಕೆಳ ವರ್ಗದವರಿಂದ ಕಿರಿ ಕಿರಿ ಅನುಭವಿಸಲಿದ್ದೀರಿ, ನಿರ್ಧಾರ ಮಾಡಿರುವ  ಗುರಿ ಮತ್ತು ಲಕ್ಷ್ಯಗಳನ್ನು ತಲುಪಲು  ನಿಮಗೆ ಅತ್ಯಂತ ಕಷ್ಟಕರವಾಗಿ ಪರಿಣಮಿಸಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top