ಉಪಯುಕ್ತ ಮಾಹಿತಿ

ಈ ಹನ್ನೊಂದು ಗುಣಗಳನ್ನು ನಿಮ್ಮ ಪ್ರೇಯಸಿಯಲ್ಲಿ ಕಂಡರೆ ಎಂಥ ಸಂದರ್ಭದಲ್ಲೂ ಆ ಹುಡುಗಿಯನ್ನು ಕಳೆದುಕೊಳ್ಳಬೇಡಿ

ಜೀವನದಲ್ಲಿ ಯಾವಾಗ್ಲೋ ಒಂದೊಂದು ಸರಿ ನಮ್ಮ ಜೀವಸಂಗಾತಿ ಸಿಗುತ್ತಾಳೆ.

ನಿಮ್ಮ ಕನಸಿನ ರಾಣಿ ಸಿಗುವುದು ಜೀವನದಲ್ಲಿ ಒಂದು ಬಾರಿ .

ಅಕಸ್ಮಾತ್ ನಿಮ್ಮ ಪ್ರಿಯತಮೆಗೆ ಈ ಕೆಳಗಿನ 11 ಗುಣಗಳಿದ್ದರೆ ಅವಳನ್ನು ಎಂದು ಹೋಗಲು ಬಿಡಬೇಡಿ , ಅವಳೇ ನಿಮ್ಮ ಜೀವ ಸಂಗಾತಿ.

 

 

1.ಅವಳು ನಿಮಗೆಂದಿಗು ಬೆಂಬಲ

ಪ್ರತಿಯೊಬ್ಬನಿಗೂ ತನ್ನ ಬೆಂಬಲಕ್ಕೆ ಒಂದು ಹೆಣ್ಣು ಬೇಕು . ಪ್ರತಿಯೊಬ್ಬನ ಯಶಸ್ಸಿನ ಹಿಂದೆ ಒಂದು ಹೆಣ್ಣು ಇರುತ್ತಾಳೆ . ನಿಮ್ಮ ಬಾಳ ಸಂಗಾತಿ ನಿಮ್ಮ ಬುದುಕಿಗೆ ಒಂದು ಅರ್ಥ ಕೊಡುತ್ತಾಳೆ ಹಾಗೂ ಜೀವಕ್ಕೆ ಮುದ ನೀಡುತ್ತಾಳೆ

 

 

2. ಅವಳು ಅಪ್ರತಿಮ ಸುಂದರಿ

ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಅಡಗಿರುತ್ತದೆ . ಅವಳು ನಿಮ್ಮ ಕಣ್ಣಿಗೆ ಮಾತ್ರ ಅಪ್ರತಿಮ ಸುಂದರಿಯಾಗಿ ಕಾಣುತ್ತಾಳೆಯೆ ? ಹಾಗಿದ್ದರೆ ಅವಳನ್ನೆಂದು ಬಿಡಬೇಡಿ.

 

 

3. ಅವಳು ಕರುಣಾಮಯಿ ಹಾಗೂ ನಿಮ್ಮ ಬಗ್ಗೆ ಗಮನವಿರಿಸುತ್ತಾಳೆಒಬ್ಬ ಹೆಣ್ಣುಮಗಳು ಹೃದಯವಂತೆ ಹಾಗೂ ಕರುಣಾಮಯಿ ಅಲ್ಲದಿದ್ದರೆ ಹೇಗೆ ತಾನೇ ಆದರ್ಶ ಯುವತಿ ಆದಾಳು ?

ಅವಳು ನಿಮ್ಮ ಬಗ್ಗೆ ಗಮನ ಹರಿಸಬೇಕು ಹಾಗೂ ನಿಮ್ಮ ರಕ್ಷಣೆಗೆ ಸದಾ ನಿಲ್ಲಬೇಕು .

 

 

4.ಅವಳು ಉತ್ಸಾಹದ ಚಿಲುಮೆ

ಎಷ್ಟೋ ಬಾರಿ ಜೀವನ ಬೋರ್ ಆಗುತ್ತದೆ , ಕಷ್ಟ ಎನಿಸುತ್ತದೆ . ಅಂತ ಸಮಯದಲ್ಲಿ ನಿಮ್ಮನ್ನು ಹುರಿದುಂಬಿಸುವ ಉತ್ಸಾಹಿ ಸಂಗತಿಯಿದ್ದಾರೆ ಜೀವನ ಸುಗಮ.

 

 

5.ಅವಳು ನಿಮ್ಮನು ಬಹಳ ಪ್ರೀತಿಸುತ್ತಾಳೆ

ಇದು ಎಲ್ಲದ್ದಕ್ಕಿಂತ ಮುಖ್ಯ . ಯಾವಾಗ ಒಂದು ಹೆಣ್ಣು ಒಬ್ಬರನ್ನು ಪ್ರೀತಿಸುತ್ತಾಳೊ , ಅವಳು ತನ್ನನು ತಾನು ಅವರಿಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾಳೆ.

 

 

6.ಅವಳಿಗೆ ರಾಜಿ ಆಗುವ ವಿಧಾನ ಗೊತ್ತು

ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮೊಂಡು . ನಮಗೆ ನಾವೇ ಸರಿ , ಬೇರೆಯವರ ದೃಷ್ಟಿಕೋನದಲ್ಲಿ ನೋಡುವ ಗೋಜಿಗೆ ಹೋಗುವುದಿಲ್ಲ. ಆದರೆ ಒಂದು ಸಂಬಂಧ ಬೆಳೆಯುವುದೇ ರಾಜಿಯ ಮೇಲೆ . ನಿಮ್ಮ ಪ್ರೇಯಸಿ ರಾಜಿ ಆಗಲು ಸಿದ್ದ ಎಂದರೆ ಅವಳೇ

ನಿಮ್ಮ ಬಾಳ ಸಂಗಾತಿಯೆಂದರ್ಥ .

 

 

7.ಅವಳು ನಿಮ್ಮ ಬದುಕನ್ನು ಸುಂದರವಾಗಿಸುತ್ತಾಳೆ

ಕೆಲವೊಬ್ಬರೇ ಹಾಗೆ , ಅವರ ಸಾನಿಧ್ಯವೆ ನಮಗೆ ಮುದ ಕೊಡುತ್ತದೆ , ಅವರ ಬಳಿಯಲ್ಲಿದ್ದಾರೆ ಪ್ರಪಂಚವೇ ನಮ್ಮ ಕಾಲ್ ಬಳಿಯಲ್ಲಿದೆ ಎಂದು ಭಾಸವಾಗುತ್ತದೆ .  ಅಂಥವಳು ನಿಮ್ಮವಳಾಗಿದ್ದಾರೆ ಸ್ವರ್ಗಕ್ಕೆ ಮೂರೇ ಗೇಣು

 

 

8. ಅವಳು ನಿಮ್ಮ ತಪ್ಪನ್ನು ನಿಮಗೆ ತಿಳಿಸಲು ಹಿಂಜರಿಯುವುದಿಲ್ಲ

ಯಾರಾದರೂ ನಮ್ಮನ್ನು ಹೊಗಳುತ್ತಾರೆ , ಆದರ ನಮ್ಮ ಒಳಿತ್ತನ್ನು ಬಯಸಿ ನಮ್ಮ ತಪ್ಪನ್ನು ನಮಗೆ ತೋರಿಸಿ ತಿದ್ದುತ್ತಾರಲ್ಲ ಅವರು ಜೀವನಕ್ಕೆ ಅತ್ಯಗತ್ಯ

 

 

9.ಅವಳ ನಡತೆಯೇ ಅವಳ ಅಸ್ತ್ರ

ಎಲ್ಲರೂ ಮಾದರಿ ಹೆಣ್ಣನು ಪಡೆಯಲು ಬಯಸುತ್ತಾರೆ , ಆ ಮಾದರಿ ಹೆಣ್ಣಿಗೆ ಸ್ತ್ರೀಯತೆ ಹಾಗೂ ಶಕ್ತಿ ಬಹಳ ಮುಖ್ಯ . ಶಕ್ತಿ ಎಂದರೆ ಅವಳ ನಡತೆ . ಅಂತ ಹೆಣ್ಣು ಎಲ್ಲರ ಕನಸು , ಆ ಕನಸು ನಿಮ್ಮ ಬಳಿಯಿದ್ದಾರೆ ನೀವೇ ಅದೃಷ್ಟವಂತರು

 

 

10. ಅವಳು ಪ್ಯಾಶನೇಟ್

ನಮ್ಮ ಜೀವನಕ್ಕೆ ಹುರುಪು ಬರುವುದೇ ನಾವು ಪ್ಯಾಶನೇಟ್ ಆಗಿದ್ದಾಗ . ಅದು ನಮ್ಮನ್ನು ಕಾಯುವ ಹೃದಯದ ಕಿಡಿ . ಆ ಕಿಡಿ ನಮ್ಮನ್ನು ಜೀವಂತವಾಗಿರಿಸುತ್ತದೆ . ಅಂತ ಹೆಣ್ಣು ನಿಮ್ಮ ಜೊತೆಯಲ್ಲಿದ್ದರೆ ನಿಮ್ಮದೇ ಆದರ್ಶ ಜೀವನ .

 

 

11.ಅವಳು ನಿಮ್ಮ ಸರ್ವಸ್ವ

ಕೆಲವೊಂದು ಬಾರಿ ಕೆಲವರನ್ನು ಹುಚ್ಚರಂತೆ ಪ್ರೀತಿಸುತ್ತೇವೆ , ಕಾರಣ ಇರುವುದಿಲ್ಲ . ಈ ಕಾರಣವಿಲ್ಲದೆ ಹುಟ್ಟುವ ಪ್ರೀತಿ ನಿಜವಾದ ಪ್ರೀತಿ , ಕಾರಣವಿದ್ದು ಹುಟ್ಟುವ ಪ್ರೀತಿ ಸ್ವಾರ್ಥ . ನಿಮ್ಮ ಸಂಗತಿಯನ್ನು ನೀವು ಕಾರಣವಿಲ್ಲದೆ ತುಂಬಾ ಪ್ರೀತಿಸುತ್ತೀರಾ? ಅವಳಿಲ್ಲದ ಬದುಕು ಊಹೆಗೂ ನಿಲುಕುವುದಿಲ್ಲವ ? ಹಾಗಿದ್ದರೆ ಅವಳನ್ನೆಂದು ಬಿಡಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top