ಸಮಾಚಾರ

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ

ಅಪಾರ ಕೇಂದ್ರ ಸರ್ಕಾರಿ ನೌಕರರು ಇಟ್ಟಿರುವ ಬೇಡಿಕೆ ಈಗ ಮಂಜೂರಾಗುವ ಸಮಯ ಹತ್ತಿರ ಬಂದಿದೆ. ಮೂಲಗಳ ಪ್ರಕಾರ ಮುಂದಿನ ತಿಂಗಳು ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರವು ನೌಕರರಿಗೆ ಗುಡ್ ನ್ಯೂಸ್ ನೀಡುವ ಸಂಭವ ಇದೆ. 7ನೇ ವೇತನ ಆಯೋಗ ನೀಡಿರುವ ವರದಿಯ ಪ್ರಕಾರ ಕನಿಷ್ಠ ವೇತನವನ್ನು ಏರಿಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

 

 

ಪ್ರಸ್ತುತ ಸರ್ಕಾರಿ ನೌಕರರ ಕನಿಷ್ಠ 18,000 ಇದೆ. ಇದು 21,000 ಇದೆ ರೂಪಾಯಿಗೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ. ಒಟ್ಟು ಮೂರೂ ಸಾವಿರ ಕನಿಷ್ಠ ವೇತನ ಹೆಚ್ಚಳ ಮಾಡಿದಂತಾಗುತ್ತದೆ.

 

 

ಕಳೆದ ವರ್ಷ ಕನಿಷ್ಠ ವೇತನವನ್ನು 7000-18,000 ರೂಪಾಯಿಗೆ ಏರಿಕೆ ಮಾಡಬೇಕೆಂಬ ಆಯೋಗದ ಶಿಫಾರಸನ್ನು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಮಾಡಿತ್ತು. ಗರಿಷ್ಠ ಸಂಬಳವನ್ನು 2.5 ಲಕ್ಷ ರೂಪಾಯಿಗೆ ಏರಿಕೆ ಸಹ ಮಾಡಿದ್ದರು. ಆದರೆ ಕನಿಷ್ಟ ವೇತನವನ್ನು 26,000 ರೂಪಾಯಿಗೆ ಹೆಚ್ಚಳ ಮಾಡಬೇಕೆಂದು ನೌಕರರು ಒತ್ತಾಯ ಮಾಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top