ಮನೋರಂಜನೆ

ಅಂಬಿ ಅಡ್ಡದಲ್ಲಿ ಕಬ್ಬಡ್ಡಿ ಅಖಾಡಕ್ಕೆ ಇಳಿದ ಕಿಚ್ಚ!

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಕಾರಣಕ್ಕೆ ಆರಂಭಕ್ಕೂ ಮುಂಚೆಯೇ ಸಾಕಷ್ಟು ಹೆಸರು ಮಾಡಿದ್ದ ಚಿತ್ರ `ಅಂಬಿ ನಿಂಗ್ ವಯಸ್ಸಾಯ್ತೋ’. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಇದೀಗ ಕಿಚ್ಚ ಸುದೀಪ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.. ಚಿತ್ರದ ವಿಶೇಷ ಪಾತ್ರದಲ್ಲಿ ಸುದೀಪ್ ಅವರು ಅಭಿನಯಿಸುತ್ತಿದ್ದು ನೆನ್ನೆ ರಾತ್ರಿಯೆಲ್ಲಾ ಭರದಿಂದ ಶೂಟಿಂಗ್ ಸಾಗಿದೆ.

 

 

ಅಂಬಿ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸುದೀಪ್ ಅವ್ರು ಅಂಬಿಯ ಯಂಗ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಸುದೀಪ್‌ ಯಾವ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಬೆಂಗಳೂರಿನ ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ಹಾಕಿದ್ದ ಹಳ್ಳಿ ಸೆಟ್‌ನಲ್ಲಿ ಸುದೀಪ್‌ ಕಬ್ಬಡ್ಡಿ ಆಡುವ ಎಂಟ್ರಿ ಸೀನ್‌ನ ಚಿತ್ರೀಕರಣ ನಡೆದಿದೆ.

 

 

ಕಿಚ್ಚ ಕ್ರಿಯೇಶನ್ಸ್ ಅರ್ಪಿಸಿ, ಕೆ.ಎಸ್.ಕೆ. ಶೋ ರೀಲ್ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರವನ್ನು ಕಿಚ್ಚನ ಶಿಷ್ಯ ಗುರುದತ್ ಗಾಣಿಗ ಎಂಬ 26ರ ಪೋರ ನಿರ್ದೇಶಿಸುತ್ತಿದ್ದಾನೆ. ಈ ಚಿತ್ರವನ್ನು ಕಿಚ್ಚ ಸುದೀಪ್ ಮತ್ತು ಮಂಜುನಾಥ್ ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಅಂಬರೀಷ್ ಜೋಡಿಯಾಗಿ ಸುಹಾಸಿನಿ ನಟಿಸುತ್ತಿದ್ದು ಸುಹಾಸಿನಿಯವರ ಯಂಗ್ ಪಾತ್ರವನ್ನು ಶ್ರುತಿ ಹರಿಹರನ್ ಮಾಡುತ್ತಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top