ಸಿನಿಮಾ

ನಟ ಕಾರ್ತಿಕ್ ಹಲ್ಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

‘ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು’ ಚಿತ್ರದ ನಾಯಕನಾಗಿರುವ ಕಾರ್ತಿಕ್ ಮೇಲೆ ಹಲ್ಲೆ ನಡೆಸಿ ಆತನ ಬಳಿ ಇದ್ದ ಕಾರು, ಹಣ ಹಾಗು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ ಎಂದು ನಿನ್ನೆ ವರದಿಯಾಗಿತ್ತು. ಆದ್ರೆ ಇಂದು ಘಟನೆಗೆ ಟ್ವಿಸ್ಟ್ ಸಿಕ್ಕಿದೆ.

 

 

ಆದರೆ ಮೂಲಗಳ ಮಾಹಿತಿ ಪ್ರಕಾರ ಕಾರ್ತಿಕ್ ಕುಡಿದ ಮತ್ತಿನಲ್ಲಿ ಕಾರ್ ಚಲಾವಣೆ ಮಾಡಿ ಇನ್ನೊಂದು ಕಾರಿಗೆ ಗುದ್ದಿರುವ ಬಗ್ಗೆ ತಿಳಿದು ಬಂದಿದೆ. ನಿನ್ನೆ ರಾತ್ರಿ ಸಮಯದಲ್ಲಿ ಈ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ನಾಳೆ ಬಂದು ಕಾರನ್ನು ರಿಪೇರಿ ಮಾಡಿಸಿ ಕೊಡುತ್ತೇವೆ. ಕಾರು, ಮೊಬೈಲ್, ಲ್ಯಾಪ್ ಟ್ಯಾಪ್ ನೀವೇ ಇಟ್ಟುಕೊಳ್ಳಿ ಎಂದು ಹೇಳಿ ಆಸ್ಪತ್ರೆಗೆ ಕಾರ್ತಿಕ್ ದಾಖಲಾಗಿದ್ದರು ಎಂದು ತಿಳಿದು ಬಂದಿದೆ.

 

 

ಚಿತ್ರನಟ ಕಾರ್ತಿಕ್ ವಿಕ್ರಂ ‘ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು’ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯ ಮಾಡುತ್ತಿದ್ದಾರೆ. ಮೊದಲು ಈ ಚಿತ್ರಕ್ಕೆ ‘ಆಪ್ತಮಿತ್ರ 2’ ಎಂಬ ಹೆಸರಿಡಲಾಗಿದ್ದು, ನಂತರ ಅದನ್ನು ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು ಎಂದು ಬದಲಾವಣೆ ಮಾಡಲಾಗಿತ್ತು. ಈಗಾಗಲೇ ಈ ಚಿತ್ರದ ಶೂಟಿಂಗ್ ಮುಗಿದಿದೆ. ಸಿನಿಮಾ ರಿಲೀಸ್ ಆಗಲು ಸಿದ್ಧವಾಗಿದೆ.

 

 

ತನ್ನ ಮೇಲೆ ದರೋಡೆಕೋರರು ಹಲ್ಲೆ ಮಾಡಿರುವುದಾಗಿ ಹಾಗು ಹಣ, ಕಾರು, ಮೊಬೈಲ್ ಕಳ್ಳತನ ಮಾಡಿದ್ದಾರೆ ಎಂದು ಕಾರ್ತಿಕ್ ಬಸವೇಶ್ವರ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದರು. ಬೆಳಗ್ಗೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ ಏನು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top