ಆರೋಗ್ಯ

ರಸ್ತೆಬದಿಯಲ್ಲಿ ಬೆಳೆಯುವ ,ನಾವುಗಳು ತುಂಬಾ ತಿರಸ್ಕಾರವಾಗಿ ಕಾಣುವ ವಿಭೂತಿ ಗಿಡ ಎಷ್ಟೋ ಚರ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಗೊತ್ತಾ

ಸಾಮಾನ್ಯವಾಗಿ ರಸ್ತೆಬದಿಯಲ್ಲಿ ಬೆಳೆಯುವ ವಿಭೂತಿ ಗಿಡವು ಅನೇಕ ಚರ್ಮದ ಸಮಸ್ಯೆಗೆ ರಾಮಬಾಣ

 

 

ಔಷದಿಯ ಬಳಕೆಗೆ:

ಕಟ್ಟಿರುವ ಮೂತ್ರದ ಹರಿವನ್ನು ಸರಾಗವಾಗಿಸುತ್ತದೆ.
ವೈರಸ್ ನಿಂದ ಉಂಟಾದ ಚರ್ಮದ ಉರಿಯೂತವನ್ನು ತಡೆಗಟ್ಟಲು ಬಳಸಲಾಗುತ್ತದೆ.

 

 

ಕೀವು ಕಟ್ಟಿರುವ ಚರ್ಮದ ಭಾಗಗಳನ್ನು ಸರಿಪಡಿಸಲು ಬಳಸಲಾಗುತ್ತದೆ.
ಉರಿಯೂತ(ಬೊಯ್ಲ್ಸ್), ಗಂಟಿನಿಂದ ದೊಡ್ಡದಾಗಿರುವ ಗ್ರಂಥಿಗಳು(lymph-nodes ), ಕುರವು ,ಕೀವಿನಿಂದ ಉಂಟಾದ ದೊಡ್ಡ ಬೊಬ್ಬೆಗಳು,ಗಾಯಗಳು,

 

 

ಮೂಗೇಟುಗಳು, ಮತ್ತು ಚರ್ಮದ ಅಲರ್ಜಿ ಚಿಕಿತ್ಸೆಗೆ ಬಳಸಲಾಗುತ್ತದೆ.

ಚರ್ಮದ ಮೇಲೆ ಉಂಟಾದ ಸತ್ತ ಜೀವಕೋಶಗಳ ಬೊಬ್ಬೆಯನ್ನು ತೆಗೆದುಹಾಕಲು ಬಳಸಲಾಗುತ್ತದೆ.

 

ಬಳಸುವುದು ಹೇಗೆ:

ವೈರಸ್ ನಿಂದ ಉಂಟಾದ ಚರ್ಮದ ಉರಿಯೂತವನ್ನು ತಡೆಗಟ್ಟಲು ,ಕೀವು ಕಟ್ಟಿರುವ ಚರ್ಮದ ಭಾಗಗಳನ್ನು ಸರಿಪಡಿಸಲು,
ಉರಿಯೂತ(ಬೊಯ್ಲ್ಸ್), ಗಂಟಿನಿಂದ ದೊಡ್ಡದಾಗಿರುವ ಗ್ರಂಥಿಗಳು(lymph-nodes ) ಸರಿಪಡಿಸಲು ವಿಭೂತಿಗಿಡದ ಕಾಂಡವನ್ನು , ಟೊಂಗೆಗಳನ್ನು 20 ಗ್ರಾಂ ನಷ್ಟು ಸಂಗ್ರಹಿಸಿ ನೀರಿನಲ್ಲಿ ಕುದಿಸಿ ಈ ಕಷಾಯವನ್ನು ದಿನಕ್ಕೆ 4 ರಿಂದ 5 ಲೋಟಗಳು ಕುಡಿಯಬೇಕು.

 

ಕುರ್ರ ದ ಸಮಸ್ಯೆಗೆ ವಿಭೂತಿಗಿಡದ ಎಲೆಗಳಿಗೆ ಹರಳೆಣ್ಣೆ ಬಳಿದು ನಂತರ ೩ನಿಮಿಷ ಸುಟ್ಟು ಪಟ್ಟು ಹಾಕಿದರೆ ವಾಸಿಯಾಗುತ್ತದೆ.

ತಾಜಾ ಎಲೆಗಳ ರಸವನ್ನು ಗಾಯ, ಮೂಗೇಟುಗಳು,ಚರ್ಮದ ಅಲರ್ಜಿಯ ಪರಿಹಾರಕ್ಕೆ ಬಳಸಬಹುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top