ಸಿನಿಮಾ

ಟಗರು ಡಾಲಿ ಪಾತ್ರಕ್ಕೆ ಫಿದಾ ಆದ ಮಹಿಳಾ ಅಭಿಮಾನಿ ಮಾಡಿದ್ದೇನು ಗೊತ್ತೇ

ಸೂರಿ ನಿರ್ದೇಶನದ ಟಗರು ಚಿತ್ರದಲ್ಲಿ ಡಾಲಿಯಾಗಿ ಅಬ್ಬರಿಸಿರುವವರು ಧನಂಜಯ್. ಬಹುಶಃ ಅಂಥಾದ್ದೊಂದು ಪಾತ್ರವನ್ನು ಧನಂಜಯ್ ನಿರ್ವಹಿಸಿದ್ದಾರೆಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಸೂರಿ ರೂಪಿಸಿರೋ ಆ ಪಾತ್ರದಲ್ಲಿನ ಅಬ್ಬರದ ನಟನೆಯ ಮೂಲಕ ಧನಂಜಯ್ ಸಿನಿಮಾ ಜೀವನದ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳೋ ಲಕ್ಷಣಗಳೂ ದಟ್ಟವಾಗಿವೆ. ಬಹುಶಃ ಆ ಪಾತ್ರವನ್ನು, ನಟನೆಯನ್ನು ಮೆಚ್ಚಿಕೊಳ್ಳದವರೇ ಇಲ್ಲವೇನೋ. ಈವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಧನಂಜಯ್ ಅವರಿಗೆ ಟಗರು ಚಿತ್ರ ಬೇರೆಯದ್ದೇ ಐಡೆಂಟಿಟಿಯನ್ನು ಕೊಡ ಮಾಡಿದೆ.

 

 

 

ಅಭಿಮಾನಿಗಳಲ್ಲಿ ಧನಂಜಯ ಅವರ ಡಾಲಿ ಪಾತ್ರ ಕ್ರೇಜ್ ಶುರು ಮಾಡಿದೆ ಇನ್ನೂ ಟಗರು ಚಿತ್ರ ವೀಕ್ಷಣೆ ಮಾಡಿದ ಮಹಿಳಾ ಅಭಿಮಾನಿಯೊಬ್ಬರು ತಮ್ಮ ಭುಜದ ಮೇಲೆ ಡಾಲಿ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದು ಧನಂಜಯ ರವರ ಪಕ್ಕ ಅಭಿಮಾನಿ ಆಗಿದ್ದಾರೆ. ಮೈಸೂರು ನಗರದ ಸೌಂದರ್ಯ ಶಾನ್ವಿ ಎಂಬ ಯುವತಿ ತನ್ನ ಭುಜದ ಮೇಲೆ ಡಾಲಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾಳೆ. ಈ ಯುವತಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದೂ ಈಗ ವೈರಲ್ ಆಗಿದೆ.

 

 

ತನ್ನ ಸಿನಿಮಾ ಪಯಣದೊಳಗೆ ಎಲ್ಲ ಕಡೆಯೂ ಘಟಾನುಘಟಿಗಳ ಗರಡಿಯೊಳಗೆ ಪಳಗುವ ಅವಕಾಶಗಳನ್ನೇ ಕಸಿದುಕೊಂಡ ಯುವನಟ ಧನಂಜಯ್. ಧನು ಹುಟ್ಟಿದ್ದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿ ಅನ್ನೋ ಗ್ರಾಮದಲ್ಲಿ, ತಂದೆ ಪ್ರೈಮರಿ ಮೇಷ್ಟ್ರು, ಜೊತೆಗೆ ಕೃಷಿಕರು. ಅತ್ಯಂತ ಸಾರ್ಥಕದ ಬಾಲ್ಯ, ಹರೆಯವನ್ನು ಕಳೆದ ಧನುಗೆ ತನ್ನ ಜೀವನದ ಬಗ್ಗೆ ಹೆಮ್ಮೆ ಇದೆ ಅಂತಾರೆ. ನಿಮ್ಮ ಸಿನಿಮಾ ಆಕರ್ಷಣೆಗೆ ಸ್ಪೂರ್ತಿ ಯಾರು ಅಂದ್ರೆ ನಂಗೆ ಮಾತ್ರ ಅಲ್ಲ, ಕನ್ನಡದ ಬಹುತೇಕ ಜನರಿ ಅಣ್ಣಾವ್ರೆ ಸ್ಪೂರ್ತಿ ಹಾಗೆ ನಂಗು ಕೂಡ, ಭಕ್ತ ಪ್ರಹ್ಲಾದ, ಬಬ್ರುವಾಹನ, ಯಾವತ್ತಿಗೂ ನನ್ನ ಮೆಚ್ಚಿನ ಸಿನಿಮಾಗಳು ಅಂತಾರೆ. ೬ ಅಡಿ ಎತ್ತರದ, ಕಟ್ಟು ಮಸ್ತಾದ ದೇಹ ಇವರನ್ನ ಹೀರೊ ತರ ಪ್ರೆಸೆಂಟ್ ಮಾಡತ್ತೆ. ಜೊತೆಗೆ ಗಾಢವಾದ ರಂಗಭೂಮಿ ಹಿನ್ನೆಲೆ, ಮೈಮ್ ರಮೇಶ್, ಕ್ರಿಶ್ಚಿಯನ್ ಸ್ಟುಕಲ್ ಅವರಿಂದ ಪಡೆದ ನಟನ ತರಬೇತಿ ಇವರನ್ನ ಪ್ರಬುದ್ಧ ನಟನ್ನನಾಗಿ ಮಾಡಿದೆ. ಆಟೋ ಡ್ರೈವರ್‌ಗಳೆ ನಂಗೆ ಆದರ್ಶ ಎನ್ನುತ್ತ ಸಿನಿಮಾ ನಿರ್ದೇಶಕನಾಗೊ ಕನಸು ಕಂಡಿರೊ ಧನುಗೆ ಇಲ್ಲಿ ಸಿಕ್ಕಿರುವ ಅನುಭವೀ ನಿರ್ದೇಶಕರಿಂದ ಕ್ಯಾಮರಾ ಮುಂದಿನ ನಟನೆ ಕಲಿಯೋದರ ಜೊತೆಗೆ ನಿರ್ದೇಶನದ ಪಟ್ಟುಗಳನ್ನು ಗಮನಿಸುತ್ತ ನಿರಂತರ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top