ಸಮಾಚಾರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಕ್ಕೆ ಹೀರೋಯಿನ್ ಆಗ್ತಾಳಾ ಡಾ.ರಾಜ್ ಮೊಮ್ಮಗಳು?

ಡಾ. ರಾಜ್‌ಕುಮಾರ್ ಕುಟುಂಬವೇ ಒಂದು ಕಲಾವಿದರ ಕುಟುಂಬ. ಡಾ.ರಾಜ್ ಬಳಿಕ ಅವರ ಮಕ್ಕಳು ನಂತರ ಈಗ ಮೊಮ್ಮಕ್ಕಳು ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ. ಈಗಾಗಲೇ ವಿನಯ್​ ರಾಘವೇಂದ್ರ ರಾಜ್​ ಕುಮಾರ್​ , ರಾಮ್​ ಕುಮಾರ್​ ಅವರ ಮಗ, ಪಾರ್ವತಮ್ಮ ರಾಜ್ ಕುಮಾರ್ ಅವರ ತಮ್ಮನ ಮಗ ಸೂರಜ್ ಚಿತ್ರರಂಗಕ್ಕೆ ಧುಮುಕಿದ್ದು ಮತ್ತೊಂದು ರಾಜ್ ಕುಂಟುಂಬದ ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಕಾಲ ಸನ್ನಿಹಿತವಾಗಿದೆ.

 

 

ರಾಜ್ ಪುತ್ರಿ ಪೂರ್ಣಿಮಾ ಮತ್ತು ನಟ ರಾಮ್​ಕುಮಾರ್​ ದಂಪತಿಗಳ ಮಗ ಧೀರೆನ್​ ರಾಮ್​ಕುಮಾರ್​ ತಮ್ಮ ಮೊದಲ ಸಿನಿಮಾಸಿತಯಾರಿಯಲ್ಲಿರುವಾಗಲೇ ತಮ್ಮ ಪುತ್ರಿ ಧನ್ಯ ರಾಮ್​ಕುಮಾರ್​ ಅವರನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸುವ ಸೂಚನೆ ನೀಡುತ್ತಿದ್ದಾರೆ.. ಅಣ್ಣನಿಗೆ ಪೈಪೋಟಿ ನೀಡುವ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿರುವ ಧನ್ಯ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಸಿಗ್ನಲ್ ನೀಡಿದ್ದಾರೆ.. ಸಿಕ್ಕಾಪಟ್ಟೆ ಹಾಟ್’ಆಗಿ ಕಾಣಿಸಿಕೊಂಡಿರುವ ಧನ್ಯ ಫೋಟೋಗಳು ಪಡ್ಡೆಹುಡುಗರ ಕಣ್ಣು ಕುಕ್ಕುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

 

 

ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಧನ್ಯ ರಾಮಕುಮಾರ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಸಿಗದಿದ್ದರೂ ಸುದ್ದಿಯನ್ನು ತಳ್ಳಿಹಾಕುವಂತಿಲ್ಲ..ಧನ್ಯ ದರ್ಶನ್ ಜೊತೆ ನಾಯಕಿಯಾಗ್ತಾರಾ ಎನ್ನುವ ವಿಚಾರ ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಧನ್ಯ ಈ ರೀತಿ ಮಾಡ್ರನ್ ತುಂಡುಡುಗೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವುದು ಕೆಲ ರಾಜ್ ಕುಟುಂಬದ ಅಭಿಮಾನಿಗಳಿಗೆ ಬೇಸರವನ್ನುಂಟುಮಾಡಿದ್ದು ರಾಜ್ ಮೊಮ್ಮಗಳು ಸಾಂಪ್ರದಾಯಿಕ ಸ್ಟೈಲ್​ ನಲ್ಲಿ ಕಾಣಿಸಿಕೊಂಡಿದ್ರೆ ಚೆನ್ನಾಗಿರುತ್ತಿತ್ತು ಈ ರೀತಿಯಲ್ಲಿ ಫೋಟೋ ಅಪ್ಲೋಡ್ ಮಾಡಬಾರದಿತ್ತು ಎಂತೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top