ಸಿನಿಮಾ

ತಾತ ಮುತ್ತುರಾಜ್ ರಿಂದ ಆರಂಭವಾದ ಬದಲಾವಣೆ ಇಂದು ಗುರುವಿನ ತನಕ

 

ರಾಜ್ ಕುಟುಂಬ ಸರಳತೆಗೆ ಹೆಸರುವಾಸಿ ಎಂದು ಮತ್ತೆ ನಿರೂಪಣೆಯಾಗಿದೆ. ರಾಜಕುಮಾರ್ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕುತ್ತಿರುವ ರಾಜ್ ಕುಟುಂಬದ ಬಗ್ಗೆ ಸರಳತೆಯ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಡಾ.ರಾಜ್ ಕುಮಾರ್ ಸರಳತೆಯಲ್ಲಿ ಶ್ರೇಷ್ಠತೆ ಮೆರೆದ ನಟ ಅವರ ಮಕ್ಕಳೂ ಕೂಡ ತಂದೆಯಂತೆ ಸರಳ ಜೀವಿಗಳು ಈಗ ರಾಜ್ ಮೊಮ್ಮಕ್ಕಳೂ ಕೂಡ ಸರಳತೆಯ ಹಾದಿಯಲ್ಲೇ ಸಾಗುತ್ತಿದ್ದಾರೆ.

 

 

ರಾಘವೇಂದ್ರ ರಾಜಕುಮಾರ ಅವರ ಕಿರಿಯ ಪುತ್ರ ಗುರುರಾಜಕುಮಾರ್ ಚಿತ್ರರಂಗಕ್ಕೆ ಇನ್ನೂ ಕಾಲಿಟ್ಟಿಲ್ಲ ಆಗಲಿ ಜನಸಾಮನ್ಯರಲ್ಲಿ ಹೀರೋ ಆಗಿದ್ದಾರೆ. ಹೌದು ಕಳೆದ ವರ್ಷ ದೊಡ್ಮನೆ ವತಿಯಿಂದ ಐಎಎಸ್ ಮಾಡಬೇಕೆಂದು ಆಸೆ ಇಟ್ಟುಕೊಂಡಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳೊಗಾಗಿ ಐಎಎಸ್ ಕೋಚಿಂಗ್ ಅಕಾಡೆಮಿಯನ್ನು ಆರಂಭಿಸಿತ್ತು. ಈ ಅಕಾಡಮಿಯ ರೂವಾರಿಯೇ ದೊಡ್ಮನೆ ಕುಡಿ ಗುರುರಾಜ್‍ಕುಮಾರ್. ಅವರ ಕನಸಾಗಿದ್ದ ಐಎಎಸ್ ಕೋಚಿಂಗ್ ಅಕಾಡೆಮಿ ಈಗ ರಾಜ್ಯಾದ್ಯಂತ ಹೆಮ್ಮರವಾಗಿ ಬೆಳೆಯುತ್ತಿದೆ.

ಹೀಗೆ ತಮ್ಮ ಸಮಾಜ ಕೆಲಸಗಳಿಂದ ಆಗಾಗ ಸುದ್ದಿಯಲ್ಲಿರುವ ಗುರು ರಾಜ್ಕುಮಾರ್ ಮೊನ್ನೆ ಮೊನ್ನೆ ನಡೆದ ನಲಪಾಡ್ ಹಾಗೂ ವಿದ್ವತ್  ನಡುವಿನ ಜಗಳದಲ್ಲಿ ಏಟು ತಿಂದು ಮಲಗಿದ್ದ ವಿದ್ವತ್ ಸಹಾಯಕ್ಕೆ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು .

 

ಇದೀಗ ಹೊಸ ವಿಷಯ ಏನೆಂದರೆ ಗುರು ರಾಜ್ಕುಮಾರ್ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಗುರು ರಾಜ್ ಕುಮಾರ್ ತಮ್ಮ ಹೆಸರನ್ನು ಯುವ ರಾಜ್ ಕುಮಾರ್ ಎಂದು ಬದಲಾಯಿಸಿಕೊಂಡಿದ್ದಾರೆ ಡಾ ರಾಜ್ಕುಮಾರ್ ಸಹ ಸಿನಿಮಾ ರಂಗಕ್ಕೆ ಪ್ರವೇಶ ಪಡೆದಾಗ ಅವರ ಮೂಲ ಹೆಸರು ಸಿಂಗಾನಲ್ಲೂರು ಮುತ್ತುರಾಜ್ ಎಂಬ ಹೆಸರನ್ನು ಬದಲಾಯಿಸಿ ರಾಜ್ ಕುಮಾರ್ ಎಂದು ಮರುನಾಮಕರಣ ಮಾಡಿಕೊಂಡಿದ್ದರು ಈಗ ತಾನೇ ತಾತನ ಹಾದಿಯನ್ನೇ ಮೊಮ್ಮಗ ಗುರು ಸಹ ಹಿಡಿದಿದ್ದಾರೆ

ಈ ಬಗ್ಗೆ ಅವರು ಮಾಡಿದ ಪೋಸ್ಟ್ ನ ಒಕ್ಕಣೆ ಹೀಗಿದೆ 

“ನಮ್ಮ ತಾತ ಮುತ್ತುರಾಜ್ ರಿಂದ ಆರಂಭವಾದ ಹೆಸರು ಬದಲಾವಣೆ ಇಂದು ಗುರುವಿನ ತನಕ….. !

ಪ್ರೀತಿಯಿಂದ
ನಿಮ್ಮ ಯುವರಾಜ್ ”

ಇನ್ನು ಸಿನಿಮಾ ರಂಗಕ್ಕೆ ಪ್ರವೇಶ ನೀಡುತ್ತಾರೆ ಎಂಬ ಗುಮಾನಿ ಎಲ್ಲರಿಗೂ ಇದ್ದೇ ಇದೆ ಮುಂದೆ ಏನಾಗುತ್ತದೆ ಕಾದು ನೋಡೋಣ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top