ಕ್ರಿಕೆಟ್

ತ್ರಿಕೋನ ಟ್ವೆಂಟಿ-20 ಸರಣಿ: ಬಾಂಗ್ಲಾವನ್ನು ಬಗ್ಗು ಬಡಿದು ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ.

ಶ್ರೀಲಂಕಾದಲ್ಲಿ ನಡೆಯುತ್ತಿರುವ ನಿಧಹಸ್ ತ್ರಿಕೋನ ಟ್ವೆಂಟಿ-20 ಸರಣಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿದೆ.. ಇಂದು ನಡೆದ ಪಂದ್ಯದಲ್ಲಿ ಎದುರಾಳಿ ಬಾಂಗ್ಲಾದೇಶಕಣ್ಣು ಬಗ್ಗು ಬಡಿಯುವ ಮೂಲಕ ಟೂರ್ನಿಯಲ್ಲಿ ಮೂರನೇ ಗೆಲುವು ಸಾಧಿಸಿದ ಭಾರತ ಹಂತಿಮ ಹಂತಕ್ಕೆ ತಲುಪಿದ್ದು ಇದೇ ಭಾನುವಾರ ಶ್ರೀಲಂಕಾ ಅಥವಾ ಬಾಂಗ್ಲಾ ವಿರುದ್ಧ ಸೆಣೆಸಾಡಲಿದೆ.

 

 

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟಿರುವ ಟೀಮ್ ಇಂಡಿಯಾ, ನಾಯಕ ರೋಹಿತ್ ಶರ್ಮಾ (89) ಹಾಗೂ ಹಿರಿಯ ಅನುಭವಿ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ (47) ಅವರ ಭರ್ಜರಿ ಬ್ಯಾಟಿಂಗ್ ಬಲದಿಂದಾಗಿ ನಿಗದಿತ 20 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ 176 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು..

ಭಾರತ ನೀಡಿದ 177ರನ್ ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 40 ರನ್ ಗಳಾಗುವಷ್ಟರಲ್ಲಿಯೇ ತಂಡ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ನಂತರ ಜೊತೆಯಾದ ಮುಷ್ಫಿಕರ್ ರಹೀಮ್(72) ಮತ್ತು ಶಬ್ಬೀರ್ ರೆಹಮಾನ್(27) ಭಾರತಕ್ಕೆ ಪ್ರತಿರೋಧ ಒಡ್ಡಿದರಾದರು ಗುರಿಮುಟ್ಟುವಲ್ಲಿ ವಿಫಲರಾದರು.. ಅಂತಿಮವಾಗಿ ಬಾಂಗ್ಲಾದೇಶ ಆರು ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 159ರನ್ನುಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಈ ಮೂಲಕ ಭಾರತ ೧೭ ರನ್ ಗಾಲ ರೋಚಕ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆಯಿಟ್ಟಿತು.

ಭಾರತದ ಪರ ಮೊಹಮದ್ ಸಿರಾಜ್ 2 , ಚಾಹಲ್ 2, ಸುಂದರ್ 1 ವಿಕೆಟ್ ಕಬಳಿಸಿ ಭಾರತದ ಗೇಯುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top