ಸಮಾಚಾರ

ಸಾವಿರ ಕೋಟಿ ಆಸ್ತಿ ಘೋಷಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದ ಜಯಾ ಬಚ್ಚನ್ ಹೇಳಿದ್ದೇನು

ಸಾವಿರ ಕೋಟಿ ಆಸ್ತಿ ಹೊಂದಿದ ದೇಶದ ಶ್ರೀಮಂತ ಸಂಸದೆ ಎಂದು ಚರ್ಚೆಗೆ ಗ್ರಾಸವಾಗಿದ್ದ ಜಯಾ ಬಚ್ಚನ್ ಈಗ ಸ್ಪಷ್ಟನೆ ನೀಡಿದ್ದಾರೆ. ತನ್ನ ಹಾಗು ಪತಿ ಅಮಿತಾಬ್ ಅವರ ಒಟ್ಟು ಆಸ್ತಿಯನ್ನು ಸೇರಿಸಿ ಆಸ್ತಿ ಮೌಲ್ಯವನ್ನು ಘೋಷಣೆ ಮಾಡಿರುವುದಾಗಿ ಹೇಳಿದ್ದಾರೆ.

 

 

ರಾಜ್ಯಸಭಾ ಚುನಾವಣೆ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಕೆ ಮಾಡಿರುವ ಜಯಾ ಬಚ್ಚನ್, ತಮ್ಮ ಪತಿಯ ಆಸ್ತಿಯನ್ನು ಸೇರಿಸಿ ದಾಖಲೆಯಲ್ಲಿ ಸೇರಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 2012 ರ ಚುನಾವಣೆ ಸಂಧರ್ಭದಲ್ಲಿ ತಮ್ಮ ಆಸ್ತಿಯನ್ನು 493 ಕೋಟಿ ಎಂದು ಘೋಷಣೆ ಮಾಡಿಕೊಂಡಿದ್ದ ಜಯಾ ಅವರ ಆಸ್ತಿ 6 ವರ್ಷಗಳಲ್ಲಿ ದ್ವಿಗುಣವಾಗಿದೆ ಎಲ್ಲರು ನಿಬ್ಬೆರಗಾಗಿದ್ದಾರೆ. ಈ ಕುರಿತು ಮಾಧ್ಯಮಕ್ಕೆ ತಮ್ಮ ಆಸ್ತಿಯ ಬಗ್ಗೆ ಸ್ಪಷ್ಟನೆ ನೀಡಿದ ಜಯಾ ಬಚ್ಚನ್ ಇದು ನನ್ನ ಹಾಗು ಪತಿ ಅಮಿತಾಬ್ ಬಚ್ಚನ್ ಒಟ್ಟು ಆಸ್ತಿ ಎಂದು ಹೇಳಿದ್ದಾರೆ.

 

 

ಚುನಾವಣಾ ನಾಮಪತ್ರದಲ್ಲಿ ತಮ್ಮ ಆಸ್ತಿಯ ಬಗ್ಗೆ ವಿವರಣೆ ನೀಡಿರುವ ಜಯಾ ಬಚ್ಚನ್ ಫ್ರಾನ್ಸ್, ಭೋಪಾಲ್, ನೋಯ್ಡಾ, ದೆಹಲಿ, ಪುಣೆ, ಮುಂಬೈ, ಗಾಂಧಿನಗರ, ಅಹಮದಾಬಾದ್‌‌‌ನಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

 

 

ಈ ಹಿಂದೆ 2014ರಲ್ಲಿ ಬಿಜೆಪಿ ಸಂಸದ ರವೀಂದ್ರ ಕಿಶೋರ್ ರಾಜ್ಯಸಭೆಗೆ ಪ್ರವೇಶ ಮಾಡಿದಾಗ ತಮ್ಮ ಆಸ್ತಿಯ ಮಔಲ್ಯವನ್ನು 800 ಕೋಟಿ ರೂ ಎಂದು ಘೋಷಣೆ ಮಾಡಿದ್ದರು. ಇದೀಗ ಜಯಾ ಬಚ್ಚನ್‌ ಅವರಿಗಿಂತಲೂ ಶ್ರೀಮಂತ ಸಂಸದೆ ಎಂಬ ಖ್ಯಾತಿಯನ್ನು ಪಡೆದಿದ್ದಾರೆ. 2012ರಲ್ಲಿ ಜಯಾ ಬಚ್ಚನ್ ಹಾಗು ಪತಿ ಅಮಿತಾಭ್‌ 152 ಕೋಟಿ ರೂಪಾಯಿ ಬೆಲೆಯ ಸ್ಥಿರಾಸ್ಥಿ ಇತ್ತು. ಈಗ ಅದರ ಬೆಲೆ 460 ಕೋಟಿ ರೂ.ಗಳಾಗಿದೆ. ಅದೇ ರೀತಿ 2012ರಲ್ಲಿ 343 ಕೋಟಿ ರೂ ಬೆಲೆಯ ಚರಾಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದ ಅವರು, ಈಗ 540 ಕೋಟಿ ರೂ ಚರಾಸ್ತಿ ಇರುವುದಾಗಿ ಹೇಳಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top