ಸಮಾಚಾರ

ಎಲೆಕ್ಷನ್ ಬಂದ್ರೆ ಗೂಬೆ, ಆಮೆ ಹಾಗೂ ಕಾಡುಪಾಪಗಳ ಪ್ರಾಣ ತೆಗೆಯುತ್ತಾರಂತೆ ಕೆಟ್ಟಾ ಕೊಳಕು ರಾಜಕಾರಣಿಗಳು.. ಇದು ಬೆಚ್ಚಿ ಬೀಳಿಸುವ ಘೋರ ಸತ್ಯ!

ಸದ್ಯ ರಾಜ್ಯದಲ್ಲಿ ಚುನಾವಣಾ ಕಾವೇರಿದ್ದು ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಸೆಳೆಯಲು ನಾ ಮುಂದು ತಾ ಮುಂದು ಎಂದು ರಾಜಕೀಯ ಪಕ್ಷಗಳು ರಂಗು ರಂಗಿನ ನಾಟಕ ಮಂಡಳಿಗಳನ್ನು ಶುರುವಿಟ್ಟಿದ್ದಾರೆ.. ಪಕ್ಷ ತೊರೆಯುವುದು, ಮತ್ತೊಂದು ಪಕ್ಷವನ್ನು ಸೇರಿಕೊಳ್ಳುವುದು, ಹೊಗಳುವುದು ತೆಗಳುವುದು, ಸೇರಿದಂತೆ ನಾನಾ ದೊಂಬರಾಟಗಳನ್ನು ನಡೆಸುತ್ತಿರುವ ಕೆಟ್ಟಾ ಕೊಳಕು ರಾಜಕಾರಣಿಗಳು ಶತಾಯಗತಾಯ ಗೆಲ್ಲಲೇಬೇಕೆಂಬ ಪಣತೊಟ್ಟು ಕಚ್ಚಿ ಕಟ್ಟಿ ನಿಂತುಬಿಟ್ಟಿದ್ದಾರೆ..

 

 

ಎಲ್ಲರಿಗೂ ಗೊತ್ತಿರೋ ಹಾಗೆ ರಾಜಕಾರಣಿಗಳು ಎಲೆಕ್ಷನ್ ಮುಗಿಯುವವರೆಗೆ ತಾನು ಒಳ್ಳೆಯವನು ಅಂತ ತೋರಿಸಿಕೊಳ್ಳೋದಕ್ಕೆ ನಾನಾ ಕಸರತ್ತುಗಳನ್ನು ನಡೆಸುತ್ತಾನೆ. ಮತದಾರನ ಕೃಪಾಕಟಾಕ್ಷದಿಂದ ಏನಾದರೂ ಒಮ್ಮೆ ಗೆದ್ದುಬಿಟ್ಟರೆ ಮತ್ತೆ ಪ್ರತ್ಯಕ್ಷವಾಗುವುದು ಮುಂದಿನ ಐದು ವರ್ಷಕ್ಕೇನೆ! ಈ ಐದು ವರ್ಷದ ಅವಧಿಯಲ್ಲಿ ಯಾರಿಗೆ ಎಷ್ಟೇ ಕಷ್ಟ ಬಂದರೂ ಅವರು ನಾಟ್ ರೀಚಬಲ್ ಆಗಿರುತ್ತಾರೆ. ಇಂತಹ ರಾಜಕಾರಣಿಗಳಿಂದ ಗೂಬೆ, ಆಮೆ ಹಾಗೂ ಕಾಡುಪಾಪಗಳಿಗೆ ಪ್ರಾಣಭಯ ಉಂಟಾಗುತ್ತದೆ? ಕೇಳೋದಕ್ಕೆ ಕೊಂಚ ಆಶ್ಚರ್ಯ ಅನಿಸಿದ್ರೂ ಇದು ಘೋರ ಸತ್ಯ!

ಚುನಾವಣೆಯಲ್ಲಿ ಎದುರಾಳಿಯನ್ನು ಸೋಲಿಸಲು ನಡೆಸುವ ತಂತ್ರಗಾರಿಕೆಗಳಲ್ಲಿ ಮಾಟ ಮಂತ್ರ ಕೂಡ ಒಂದು.. ಗೆಲ್ಲಲೇ ಬೇಕು ಎಂದು ಪಣ ತೊಡುವ ಪರಸ್ಪರ ಎದುರಾಳಿಗಳು ತಮ್ಮ ವಿರುದ್ಧ ಸ್ಪರ್ಧಿಸಿರುವವರ ಮೇಲೆ ಮಾಟ ಮಂತ್ರ ಮಾಡಿಸುವ ಕೃತ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಇಂತಹ ಕೊಳಕು ರಾಜಕಾರಣಿಗಳ ಸ್ವಾರ್ಥಕ್ಕಾಗಿ ವಿಲ ವಿಲನೆ ಒದ್ದಾಡಿ ತಮ್ಮ ಪ್ರಾಣ ಬಿಡುವ ಆಮೆ, ಗೂಬೆ, ಕಾಡುಪಾಪಗಳು ಅವೆಷ್ಟೋ? ಇದು ನಾವ್ ಹೇಳ್ತಿರೋ ಸುದ್ದಿಯಲ್ಲ ಸ್ವತಃ ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋದವರು ನೀಡಿರುವ ಶಾಕಿಂಗ್ ಸುದ್ದಿಯಾಗಿದೆ.

 

 

ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಬೆಂಗಳೂರಿನಲ್ಲಿ ಗೂಬೆಗಳನ್ನು ಮಾರಾಟ ಮಾಡುವ ಮಾಫಿಯಾ ಜೋರಾಗಿ ನಡೆಯುತ್ತದೆ. ಕಾಡುಪಾಪ, ಆಮೆಗಳನ್ನು ಕೂಡ ಪಂಜರದಲ್ಲಿ ಕೂಡಿ ಹಾಕಿ ರಾಜಕೀಯ ವ್ಯಕ್ತಿಗಳ ಮನೆಗೆ ಪಾರ್ಸಲ್ ಕಳಿಸೋದಕ್ಕೆ ಈ ದಂಧೆಯ ದೊಡ್ಡ ತಂಡವೇ ಸಿದ್ದವಾಗಿ ನಿಂತಿವೆ ಎಂಬ ಬೆಚ್ಚಿ ಬೀಳಿಸುವ ಸ್ಪೋಟಕ ಮಾಹಿತಿಯೊಂದು ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋದಿಂದ ತೂರಿಬಂದಿದೆ..ಇಂತಹ ಕೆಲಸಗಳನ್ನು ಎಲ್ಲಾ ಪಕ್ಷಗಳು ಯಾವುದೇ ಪಕ್ಷವಿಲ್ಲದೆ ನಾಮುಂದು ತಾಮುಂದು ಎಂದು ಮಾಡುತ್ತಾರೆ ಎಂದು ಸಂಸ್ಥೆ ಬಹಿರಂಗಪಡಿಸಿದೆ.

ಗೂಬೆ, ಆಮೆ ಹಾಗೂ ಕಾಡುಪಾಪಗಳನ್ನೂ ಕೇವಲ ಮಾಟ ಮಂತ್ರಗಳಿಗೆ ಮಾತ್ರವಲ್ಲದೆ ಎದುರಾಳಿಯ ವಿಶ್ವಾಸವನ್ನು ಕುಗ್ಗಿಸಲು ಬಳಸಲಾಗುತ್ತಂತೆ? ಅದು ಹೇಗೆ ಅಂತೀರಾ ಮುಂದೆ ಓದಿ. ಸಾಮಾನ್ಯವಾಗಿ ಗೂಬೆ ಅಂದ್ರೆ ಅಪಶಕುನ ಎಂದು ಹಲವಾರು ಭಾವಿಸಿರುತ್ತಾರೆ ಎಲೆಕ್ಷನ್ ಟೈಮ್ ನಲ್ಲಿ ಎದುರಾಳಿಯ ವಿಶ್ವಾಸವನ್ನು ಕುಗ್ಗಿಸಲು, ಗೂಬೆಗಳ ರೆಕ್ಕೆ ಕತ್ತರಿಸಿ ಅದನ್ನು ಪ್ರತಿಸ್ಪರ್ದಿ ರಾಜಕೀಯ ವ್ಯಕ್ತಿಗಳ ಮನೆಯ ಹತ್ತಿರವೋ ಅಥವಾ ಅವರ ಕಚೇರಿಗೋ ಬಿಟ್ಟು ಬಿಡುತ್ತಾರಂತೆ. ಹೀಗೆ ಮಾಡೋದ್ರಿಂದ ಧೃತಿಗೆಟ್ಟ ರಾಜಕೀಯ ವ್ಯಕ್ತಿಗಳು ಜ್ಯೋತಿಷ್ಯ, ದೇವರ ಮೊರೆ ಹೋಗಿ ಸಮಯ ವ್ಯರ್ಥ ಮಾಡುತ್ತಾರಂತೆ. ಬೆಂಗಳೂರಿನ ಶಿವಾಜಿನಗರ ಟ್ಯಾನರಿ ರೋಡ್‍ನಲ್ಲಿ ಗೂಬೆಗಳನ್ನು ಒಟ್ಟುಹಾಕುವ ಕೆಲಸವನ್ನು ಈಗಾಗಲೇ ದಂಧೆಯವರು ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

 

 

ಗೂಬೆಗಳ ರೀತಿಯಲ್ಲೆ ಕಾಡುಪಾಪ, ಆಮೆಗಳಿಗೂ ಕೂಡ ಸಂಕಷ್ಟ ಎದುರಾಗುತ್ತಿದ್ದು ಚುನಾವಣೆಯಲ್ಲಿ ತನ್ನ ವಿರುದ್ಧ ಸ್ಫರ್ಧಿಸಿರುವ ಎದುರಾಳಿಯನ್ನು ಮಾನಸಿಕವಾಗಿ ನೋಯಿಸೋಕೆ ಆಮೆ,ಕಾಡುಪಾಪಗಳನ್ನೂ ಮಾಟ ಮಂತ್ರಕ್ಕೆ ಕೆಲವು ಬಳಸಿಕೊಳ್ಳುತ್ತಾರೆ. ಆಮೆ ಅಥವಾ ಕಾಡುಪಾಪದ ಕೈ, ಕಾಲುಗಳನ್ನು ಹಗ್ಗ ಅಥವಾ ವೈರ್‍ನಿಂದ ಕಟ್ಟಿ ಅವಕ್ಕೆ ಆಹಾರ ನೀರು ಕೊಡದೆ ಚಿತ್ರ ಹಿಂಸೆ ಕೊಡುತ್ತಾರೆ.. ಇಲ್ಲಿ ಕಟ್ಟಿಹಾಕಿರೋ ಆಮೆ ಅಥವಾ ಕಾಡುಪಾಪ ಹಿಂಸೆ ಅನುಭವಿಸಿದಷ್ಟು ಎದುರಾಳಿಗೆ ಹಿಂಸೆಯಾಗುತ್ತದೆ ಎಂಬ ವಿಚಿತ್ರ ನಂಬಿಕೆ ರಾಜಕಾರಣಿಗಳದ್ದು.

ಅದೇನೇ ಇರಲಿ ತಮ್ಮ ಸುಳ್ಳು, ಟೊಳ್ಳು ಆಸ್ವಾಸನೆಗಳನ್ನು ನೀಡಿ ಅಧಿಕಾರದ ಗದ್ದುಗೆ ಹಿಡಿದು ದೇಶವನ್ನು ಕೊಳ್ಳೆಹೊಡೆದು ಜನಕ್ಕೆ ಉಂಡೆನಾಮ ತೇದಿಟ್ಟ ರಾಜಕಾರಣಿಗಳು ಅಧಿಕಾರದ ವ್ಯಾಮೋಹದಿಂದ ಇಂತಹ ಅಮಾಯಕ ಜೀವಸಂಕುಲದ ನಾಶಕ್ಕೆ ಇಳಿದಿರುವುದು ನಿಜಕ್ಕೂ ಖಂಡನಾರ್ಹ.. ಇದನ್ನು ಪ್ರಶ್ನಿಸಲು ಹೋದವರಿಗೆ ಇಂತಹ ಪರಿಸ್ಥಿತಿ ಬರುತ್ತದೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ, ಇದು ವ್ಯವಸ್ಥೆಯ ವಿಪರ್ಯಾಸ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top