ಸಿನಿಮಾ

ಸ್ಯಾಂಡಲ್‌ವುಡ್‌ ನಿಂದ ಐಪಿಎಲ್‌ ಮಾದರಿ ಕ್ರಿಕೆಟ್‌: ಸಮಾರಂಭಕ್ಕೆ ಮುಖ್ಯಮಂತ್ರಿಗೆ ಆಹ್ವಾನಿಸಿದ ಕಿಚ್ಚ ಸುದೀಪ್

ಕನ್ನಡ ಚಿತ್ರರಂಗದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಂತೆ ನಟ ಸುದೀಪ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದ್ದಾರೆ. ‘ಕೆಸಿಸಿಟಿ-10’ ಕ್ರಿಕೆಟ್ ಲೀಗ್ ಆಯೋಜನೆ ಮಾಡಲು ಕಿಚ್ಚ ಸುದೀಪ್ ಹಾಗು ತಂಡ ತಯಾರಿ ಮಾಡಿಕೊಂಡಿದೆ.

 

 

ಕೆಸಿಸಿಟಿ-10′ ವಿಶೇಷತೆ.

ಸಿಸಿಎಲ್ ಕ್ರಿಕೆಟ್ ನಲ್ಲಿ ಆಡಿರುವ ನಟರು ಕೆಸಿಸಿ ಟಿ 10ರಲ್ಲಿ ಪಾಲ್ಗೊಳ್ಳುತ್ತಿದ್ದು , ಒಟ್ಟು ಆರು ತಂಡಗಳನ್ನು ರಚನೆ ಮಾಡಲಾಗಿದೆ. ಇನ್ನು ಕನ್ನಡ ಚಿತ್ರರಂಗದಲ್ಲಿರುವ ಉತ್ತಮ ಕ್ರಿಕೆಟ್ ಆಟಗಾರರನ್ನು ಇದರಲ್ಲಿ ಆಡಿಸಲಾಗುತ್ತದೆ ಇದು 20 ಓವರ್ ಪಂದ್ಯ ಅಲ್ಲ ಬದಲಾಗಿ 10 ಓವರ್ ಪಂದ್ಯ.

 

 

ಪ್ರತಿ ತಂಡದಲ್ಲೂ ಸಿಸಿಎಲ್ ಆಡಿರುವ ಮೂವರು ಆಟಗಾರರು ಇರಲಿದ್ದಾರೆ ಇವರನ್ನು ಲಕ್ಕಿ ಡ್ರಾ ಮೂಲಕ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇನ್ನು ಕರ್ನಾಟಕ ರಣಜಿ ಆಟಗಾರರನ್ನು ಪ್ರತಿಯೊಂದು ತಂಡದಲ್ಲಿ ಇಬ್ಬರು ಆಟಗಾರರನ್ನು ಆಡಿಸಲಾಗುತ್ತದೆ. ಇವರನ್ನು ಕೂಡ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿಕೊಳ್ಳಾಗುವುದು ಎಂದು ತಿಳಿಸಿದ್ದಾರೆ.

 

 

ಅರ್ಜುನ್ ಜನ್ಯ, ಸೂರಪ್ಪಬಾಬು, ಶೇಖರ್ ಚಂದ್ರ, ನಾಗೇಂದ್ರ ಪ್ರಸಾದ್, ಡಿಫರೆಂಟ್ ಡ್ಯಾನಿ, ಇಮ್ರಾನ್ ಸರ್ದಾರಿಯಾ ಮತ್ತು ಕೆಂಪರಾಜು ಅವರನ್ನು ಪರಾಮರ್ಶೆ ಸಮಿತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಶಿಸ್ತಿನ ಸಮಿತಿಯಲ್ಲಿ ರಾಜೇಂದ್ರ ಸಿಂಗ್ ಬಾಬು ಇರಲಿದ್ದಾರೆ.

ಮುಂದಿನ ತಿಂಗಳು ಏಪ್ರಿಲ್ 7 ರಂದು ಈ ಲೀಗ್ ಪ್ರಾರಂಭವಾಗಲಿದೆ. ಐಪಿಎಲ್ ಹಾಗು ಕೆಸಿಸಿಟಿ-10′ ಕ್ರಿಕೆಟ್ ಲೀಗ್ ಎರಡು ಒಮ್ಮೆಲೇ ಆರಂಭವಾಗುತ್ತಿರುವುದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಕಾತುರತೆ ಹೆಚ್ಚಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top