ಕಿರುತೆರೆ

ಕನ್ನಡದ ಈ ನಟನ ಜೊತೆ ಮಾನ್ವಿತಾ ಮದುವೆಯಾಗ್ತಾರಂತೆ!

ಕೆಲವರಿಗೆ ಅದೃಷ್ಟ ಅನ್ನೋದೇ ಹಾಗೆ! ಕೆಲವೊಮ್ಮೆ ಸಾಕು ಸಾಕು ಅನ್ನೋವಷ್ಟು ಒದ್ದುಕೊಂಡು ಬರುತ್ತದೆ. ಯಾವುದನ್ನು ಒಪ್ಪೋದು ಯಾವುದನ್ನು ಬಿಡೋದು ಎಂದು ಗೊಂದಲ ಕಾಡುವ ಮಟ್ಟಕ್ಕೆ ಅವಕಾಶಗಳು ಬರುತ್ತವೆ. ಈಗ ಮಾನ್ವಿತಾ ಹರೀಶ್‌ಗೂ ಆಗಿರೋದು ಇದೇ.‘ಕೆಂಡಸಂಪಿಗೆ’ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿಕೊಟ್ಟು ಟಗರು ಚಿತ್ರದ ಮೂಲಕ ಸಿನಿರಸಿಕರ ಮನಸ್ಸನ್ನು ಕದ್ದಿರುವ ಮಾನ್ವಿತಾ ಹರೀಶ್ ತಮ್ಮ ಮದುವೆಯಬಗ್ಗೆ ಮಾತನಾಡಿದ್ದಾರೆ.

 

 

ಶಿವಣ್ಣ ನಡೆಸಿಕೊಡುತ್ತಿರುವ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಮೂಡಿಬರುತ್ತಿರುವ ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ನೆನ್ನೆಯ ಸಂಚಿಕೆಯಲ್ಲಿ ನಟ ಧನಂಜಯ್, ವಸಿಷ್ಠ ಮತ್ತು ನಟಿ ಮಾನ್ವಿತಾ ಕಾಮತ್ ಅಥಿತಿಗಳಾಗಿ ಭಾಗಿಯಾಗಿದ್ದರು..ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳನ್ನು ಮಾನ್ವಿತಾ ಹಂಚಿಕೊಂಡಿದ್ದಾರೆ.

 

 

ಹೌದು ಕಾರ್ಯಕ್ರಮದ ರ‍್ಯಾಪಿಡ್ ರೌಂಡ್ ಸುತ್ತಿನಲ್ಲಿ ಶಿವಣ್ಣ ” ಒಂದು ವೇಳೆ ಡೇಟಿಂಗ್ ಮಾಡ್ಬೇಕಂದ್ರೆ ನೀವು ಕನ್ನಡದ ಯಾವ ನಟನ ಜೊತೆ ಡೇಟಿಂಗ್ ಮಾಡ್ತೀರಾ? ಮದುವೆಯಾಗಬೇಕಂದ್ರೆ ಯಾವ ನಟನನ್ನ ಮದುವೆಯಾಗ್ತೀರಾ? ಲಾಂಗ್ ಡ್ರೈವ್ ಹೋಗಬೇಕಂದ್ರೆ ಯಾವ ನಟನ ಜೊತೆ ಲಾಂಗ್ ಡ್ರೈವ್ ಹೋಗ್ತೀರಾ?” ಎಂದು ಮಾನ್ವಿತರನ್ನು ಕೇಳಿದರು..

ಶಿವಣ್ಣ ಈ ಪ್ರಶ್ನೆಗೆ ಉತ್ತರಿಸಿದ ಮಾನ್ವಿತಾ ಪುನೀತ್ ರಾಜಕುಮಾರ್ ಜೊತೆ ಡೇಟಿಂಗ್ ಹೋಗುತ್ತೆನೆ, ಶಿವಣ್ಣ ಜೊತೆ ಮದುವೆ ಮಾಡ್ಕೋತೀನಿ ಮತ್ತು ಧನಂಜಯ್ ಜೊತೆ ಲಾಂಗ್ ಡ್ರೈವ್ ಹೋಗುವುದಾಗಿ ಹೇಳಿದರು..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top