ಸಿನಿಮಾ

ಜಾಹ್ನವಿ ಕಪೂರ್ ಅಭಿನಯದ ‘ಧಡಕ್’ ಚಿತ್ರತಂಡಕ್ಕೆ ಮೊಬೈಲ್ ಬಳಕೆ ನಿಷೇಧಿಸಿ ಖಡಕ್ ಆದೇಶ ಹೊರಡಿಸಿದ ಕರಣ್ ಜೋಹರ್

ಇತ್ತೀಚಿಗೆ ದುಬೈ ನಲ್ಲಿ ಸಾವನಪ್ಪಿದ ನಟಿ ಶ್ರೀದೇವಿ ಅವರ ಮಗಳಾದ ಜಾಹ್ನವಿ ಅವರು ಧಡಕ್ ಸಿನಿಮಾ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮಗಳ ಭವಿಷ್ಯದ ಬಗ್ಗೆ ಅಪಾರವಾದ ಕನಸನ್ನು ಕಂಡಿದ್ದ ಶ್ರೀದೇವಿ ಮಗಳನ್ನು ಚಿತ್ರರಂಗಕ್ಕೆ ಪರಿಚಯ ಮಾಡುವ ಆಸೆ ಅವರಿಗಿತ್ತು ಅವ್ರ ಆಸೆಯಂತೆ ಮರಾಠಿಯ ಯಶಸ್ವಿ ಚಿತ್ರ ಸೈರಾಟ್ ಚಿತ್ರಕಥೆಯ ಬಾಲಿವುಡ್ ನ ಧಡಕ್ ಆಯ್ಕೆ ಮಾಡಿಕೊಂಡಿದ್ದರು.

 

 

ಕಳೆದ ತಿಂಗಳಷ್ಟೇ ಸೆಟ್ಟೇರಿದ್ದ ಧಡಕ್ ಚಿತ್ರ ಭರ್ಜರಿಯಾಗಿ ಶೂಟಿಂಗ್ ಮುಂದುವರೆಸಿತ್ತು. ಜಾಹ್ನವಿ ಕೂಡ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದರು. ಅಷ್ಟರಲ್ಲಿ ವಿಧಿ ಬಂದು ಅಪ್ಪಳಿಸಿತ್ತು. ಜಾಹ್ನವಿ ತಾಯಿ ಶ್ರೀದೇವಿ ತೀರಿಕೊಂಡಿದ್ದರು. ಆದ ಕಾರಣ ನಿಂತು ಹೋಗಿದ್ದ ಶೂಟಿಂಗ್ ಈಗ ಮತ್ತೆ ಪ್ರಾರಂಭವಾಗಿದೆ. ತಾಯಿ ಅಗಲಿದ ದುಃಖದ ಮಾಡುವಿನಲ್ಲಿರುವ ಜಾಹ್ನವಿ ಈಗ ವಿಧಿ ಇಲ್ಲದೆ ಶೂಟಿಂಗ್ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

 

 

ಚಿತ್ರದ ಶೂಟಿಂಗ್ ಈಗ ಪ್ರಾರಂಭವಾಗಿದ್ದು ಚಿತ್ರೀಕರಣ ವೇಳೆ ನಿರ್ಮಾಪಕ ಕರಣ್ ಜೋಹರ್ ಯಾರಿಗೂ ಮೊಬೈಲ್ ಫೋನ್ ಬಳಕೆ ಮಾಡಬಾರದು ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಇದಕ್ಕೆ ಕಾರಣ ತಿಳಿದು ಬಂದಿದ್ದು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ದೃಶ್ಯಗಳನ್ನು ವಿಡಿಯೋ ಮಾಡಿ ಲೀಕ್ ಮಾಡಲಾಗುತ್ತಿದೆ. ಆದ್ದರಿಂಗ್ ಇದು ಚಿತ್ರದ ಗಳಿಕೆ ಮೇಲೆ ವಿಪರೀತ ಪರಿಣಾಮ ಆಗುತ್ತಿದೆ. ಇದನ್ನು ತಡೆಗಟ್ಟಲು ನಿರ್ದೇಶಕ ಕರಣ್ ಜೋಹರ್ ಈ ನಿರ್ಧಾರ ಮಾಡಿದ್ದಾರೆ.

 

 

ಜಾಹ್ನವಿ ಶೂಟಿಂಗ್ ಮಾಡಲು ತೆರಳಿದ್ದಾರೆ. ಅಮ್ಮನ ನೆನಪು ಅವಳನ್ನು ಆಳವಾಗಿ ಕಾಡುತ್ತಿದ್ದರು. ಮನಸಿನಲ್ಲಿ ನೋವು ನುಂಗುತ್ತ ನಗುಮುಖದಲ್ಲಿ ಶೂಟಿಂಗ್ ಮಾಡುತ್ತಿದ್ದಾಳೆ. ಜಾಹ್ನವಿಗೆ ಬಾಲಿವುಡ್ ಸ್ಟಾರ್ ನಟ ನಟಿಯರು ಧೈರ್ಯ ಹೇಳಿದ್ದರು. ಜಾಹ್ನವಿ ಈಗ ಉತ್ಸಾಹದಾಯಕವಾಗಿ ಶೂಟಿಂಗ್ ಕಾರ್ಯ ನಿರ್ವಹಣೆ ಮಾಡುತ್ತಿದ್ದಾಳೆ. ಸದ್ಯ ಮುಂಬೈ ನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಕೆಲವು ದಿನಗಳ ನಂತರ ಕೋಲ್ಕತ್ತಾ ಹಾಗು ದೇಶದ ವಿವಿದೆಡೆ ಶೂಟಿಂಗ್ ನಡೆಯಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top