ಸಿನಿಮಾ

ಶ್ರೀದೇವಿ ತಂಗಿದ್ದ ಹೋಟೆಲ್ ರೂಮ್ ಈಗ ಬಿಕೋ ಅನ್ನುತ್ತಿದೆ, ಫ್ರೀ ಆಗಿ ಕೊಟ್ರು ಬರುವವರಿಲ್ಲ

ಹಿರಿಯ ನಟಿ ಶ್ರೀದೇವಿಯ ಅವರ ಅಕಾಲಿಕ ಸಾವು ಇಡೀ ಭಾರತೀಯ ಚಿತ್ರರಂಗಕ್ಕೆ ಆಘಾತವನ್ನುಂಟುಮಾಡಿತ್ತು ಅಪರೂಪದ ನಟಿ ಶ್ರೀದೇವಿ ನಿಧನಕ್ಕೆ ಬಾಲಿವುಡ್, ಕಾಲಿವುಡ್, ಟಾಲಿವುಡ್ ಮಾತ್ರವಲ್ಲ ಸ್ಯಾಂಡಲ್‌ವುಡ್ ಸಹಿತ ಕಂಬನಿಯನ್ನು ಮಿಡಿದಿತ್ತು. ದುಬೈನಲ್ಲಿ ಅಕಾಲಿಕ ಮರಣ ಹೊಂದಿದ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟಿ ಶ್ರೀದೇವಿ ಅವರಿಗೆ ಮುಂಬೈನ ವಿಲೇಪಾರ್ಲೆಯ ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಿದರು ಅವರ ಪಾರ್ಥಿವ ಶರೀರದ ಮೇಲೆ ರಾಷ್ಟ್ರ ಧ್ವಜವನ್ನು ಹೊದಿಸಿ ಸರ್ಕಾರಿ ಗೌರವ ಸಲ್ಲಿಸಿದರು.

 

 

ಶ್ರೀದೇವಿ ಅವರು ದುಬೈನ ಬಾತ್ ರೂಮ್ ಟಬ್ ನಲ್ಲಿ ಮುಳುಗಿ ಸತ್ತಿದ್ದು. ಈ ಕಾರಣ ದುಬೈನ ಫೈ ಸ್ಟಾರ್ ಹೋಟೆಲ್ ಜುಮೇರಾ ಎಮಿರೇಟ್ಸ್ ಟವರ್ಸ್ ನ ರೂಮ್ ಸಂಖ್ಯೆ 2201 ವನ್ನು ಯಾರು ಬಾಡಿಗೆ ತೆಗದುಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ತಿಳಿದು ಬಂದಿದೆ.

 

 

ಶ್ರೀದೇವಿ ಸಾವನಪ್ಪಿದ ಬಳಿಕ ಸುದ್ದಿಯು ಅಂತರಾಷ್ಟ್ರಿಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಅದರಲ್ಲಿ ಹೋಟೆಲ್ ನ ರೂಮ್ ನಂಬರ್ ನಮೂದಿಸಲಾಗಿತ್ತು. ಈ ಕಾರಣಕ್ಕೆ ಅಲ್ಲಿ ಯಾರು ಬರುತ್ತಿಲ್ಲ. ಈಗ ಹೋಟೆಲ್ ಮಾಲೀಕರು ಆ ರೂಮ್ ನಲ್ಲಿರುವ ವಸ್ತುಗಳ ನವೀಕರಣ ಮಾಡಲು ತೀರ್ಮಾನ ಮಾಡಿದ್ದಾರೆ. ಶ್ರೀದೇವಿ ತಂಗಿದ್ದ ಹೋಟೆಲ್ ರೂಮ್ ಬಾಡಿಗೆ ದಿನಕ್ಕೆ 35,000 ಎಂದು ತಿಳಿದು ಬಂದಿದೆ.

 

 

ಇಪ್ಪತ್ತ್ನಾಲ್ಕು ನೇ ತಾರೀಖು ಶನಿವಾರ ದುಬೈನ ಹೋಟೆಲ್ ವೊಂದರ ಬಾತ್ಟಬ್ನಲ್ಲಿ ಸತ್ತುಹೋದ ನಟಿ ಶ್ರೀ ದೇವಿಯವರ ಪಾರ್ಥಿಕ ಪಾರ್ಥಿವ ಶರೀರ ಭಾರತಕ್ಕೆ ಮರಳಲು ನಾಲ್ಕು ದಿನಗಳು ಬೇಕಾಯಿತು. ಮೊದಲಿಗೆ ಇದು ಕೊಲೆಯೋ ಅಥವಾ ಸಹಜ ಸಾವು ಎಂದು ತನಿಖೆ ಮಾಡಿದ ದುಬೈ ಪೊಲೀಸರು ಶ್ರೀದೇವಿಯವರ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರುವವರೆಗೂ ಕಾದಿದ್ದು ಆ ನಂತರ ಬೋನಿ ಕಪೂರ್ ಅವರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದರೂ ತದನಂತರ ವಿಚಾರಣೆಯ ಸಂಪೂರ್ಣ ಮಾಹಿತಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top