ಮನೋರಂಜನೆ

ಥಿಯೇಟರ್’ನಲ್ಲಿ ಬರುವ “ಧೂಮ್ರಪಾನ ಮಾಡದಿರಿ” ಜಾಹಿರಾತಿನ ಬಾಲಕಿ ಈಗ ಕನ್ನಡ ಚಿತ್ರವೊಂದಕ್ಕೆ ಹೀರೋಯಿನ್!

ಸಾಮಾನ್ಯವಾಗಿ ಜಾಹಿರಾತುಗಳು ನೋಡುಗರಿಗೆ ಕಿರಿಕಿರಿ ಉಂಟುಮಾಡಿದರೂ ಕೆಲವು ಜಾದು ಮಾಡಿದಂತೆ ನೋಡುಗರ ಮನಸಿನಲ್ಲೇ ಉಳಿದುಕೊಂಡುಬಿಡುತ್ತವೆ ಅವುಗಳ ಸಾಲಿಗೆ ಪ್ರತಿ ಥಿಯೇಟರ್’ಗಳಲ್ಲೂ ಸಿನಿಮಾ ಪ್ರಾರಂಭವಾಗುವುದಕ್ಕೂ ಮುನ್ನ ಪ್ರಸಾರವಾಗುವ “ಧೂಮ್ರಪಾನ ಮಾಡದಿರಿ ಮಾಡಲು ಬಿಡದಿರಿ” ಎಂಬ ಘೋಷವಾಕ್ಯದ ಧೂಮಪಾನ ಮಾಡಬಾರದು ಎಂದು ಸಂದೇಶ ಸಾರುವ ಜಾಹಿರಾತು ಕೂಡ ಒಂದು.. ಈಗ ಏಕೆ ಆ ವಿಚಾರ ಅಂತೀರಾ? ವಿಷ್ಯ ಇದೆ. ಆ ಜಾಹಿರಾತುವಿನಲ್ಲಿ ಒಂದು ಪುಟ್ಟ ಹುಡುಗಿ ಇರ್ತಾಳಲ್ಲ ಆಕೆ ಈಗ ಬೆಳೆದಿದ್ದು? ಸದ್ಯ ಈಕೆ ಸಿನಿಮಾ ಹೀರೋಯಿನ್ ಆಗುತ್ತಿದ್ದಾಳೆ ಅದೂ ಕೂಡ ನಮ್ಮ ಕನ್ನಡ ಚಿತ್ರಕ್ಕೆ!

 

 

ಈಕೆಯ ಹೆಸರು ಸಿಮ್ರಾನ್ ನಟೇಕರ್ ಅಂತ, ಮುಂಬೈನಲ್ಲಿರುವ ಒಬೇರಾಯ್ ಹೋಟೆಲ್‌ನ ಮ್ಯಾನೇಜರ್ ಪುತ್ರಿಯಾಗಿರುವ ಮುಂಬೈನಲ್ಲಿ ಹುಟ್ಟಿ ಬೆಳೆಡಿದ್ದು ಸದ್ಯ ಹತ್ತನೇ ತರಗತಿ ಓದುತ್ತಿದ್ದಾಳೆ.. ಧೂಮಪಾನದ ಜಾಹಿರಾತಿನ ಮೂಲಕ ದೇಶಾದ್ಯಂತ ಗುರುತಿಸಿಕೊಂಡಿರುವ ಚೆಲುವೆ ಆ ಜಾಹಿರಾತಿನ ನಂತರ ಬೆಳ್ಳೆತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ,, ಆದರೆ ಕಳೆದ ವರ್ಷ ರಿಲೀಸ್ ಆಗಿದ್ದ ಬೆಸ್ಟ್ ಆ ಲಾಕ್ ಲಾಲು ಎಂಬ ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಈಕೆ ಈಗ ಮತ್ತೆ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾಳೆ.

 

 

 

ನಿರ್ದೇಶಕ ಸುಮಂತ್ ಕ್ರಾಂತಿ ಆಕ್ಷನ್ ಕಟ್ ಹೇಳುತ್ತಿರುವ ಕನ್ನಡದ ‘ಕಾಜಲ್’ ಚಿತ್ರಕ್ಕೆ ಹೀರೋಯಿನ್ ಸಿಮ್ರಾನ್ ಆಗಿ ಆಯ್ಕೆಯಾಗಿದ್ದಾಳೆ. ಗಣಪ ಖ್ಯಾತಿಯ ಸಂತೋಷ್ ನಾಯಕನಾಗಿರುವ ಈ ಚಿತ್ರವನ್ನು ಆನೇಕಲ್ ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಮಾರ್ಚ್ ೩೧ಕ್ಕೆ ಕಾಜಲ್ ಚಿತ್ರದ ಫರ್ಸ್ಟ್ ಲುಕ್ ಬಿಡುಗಡೆಗೊಳ್ಳುತ್ತಿದ್ದು ಕುಲು ಮನಾಲಿ, ಊಟಿ, ಜಮ್ಮು ಮತ್ತು ಕಾಶ್ಮೀರ ಮುಂತಾದ ಕಡೆ ಚಿತ್ರೀಕರಣ ನಡೆಸಲು ನಿರ್ದೇಶಕರು ಯೋಜಿಸಿದ್ದಾರೆ.

“ನಾನು ಇತ್ತೀಚೆಗೆ ಥಿಯೇಟರ್ ನಲ್ಲಿ ಸಿನಿಮಾವೊಂದನ್ನು ನೋಡುತ್ತಿದ್ದಾಗ ಧೂಮಪಾನದ ಜಾಹೀರಾತಿನಲ್ಲಿ ಕಂಡ ಆ ಹುಡುಗಿ ಈಗ ಹೇಗಿರಬಹುದು ಅಂತ ಹುಡುಕಿದಾಗ ಆಕೆ ಹೆಸರು, ಊರು ಎಲ್ಲಾ ವಿಚಾರಗಳು ತಿಳಿಯಿತು… ಇವಳನ್ನು ನಮ್ಮ ಚಿತ್ರಕ್ಕೆ ಯಾಕೆ ಹೀರೋಯಿನ್ ಆಗಿ ಮಾಡಬಾರದು ಎಂದು ಯೋಚಿಸಿ ನಾನೇ ಮುಂಬೈಗೆ ಹೋಗಿ ಸಿಮ್ರಾನ್ ನಟೇಕರ್ ಬಳಿ ಮಾತುಕತೆ ನಡೆಸಿದೆ.. ಆದರೆ ಈಗಾಗಲೇ ಆಕೆ ಒಂದೆರೆಡು ಕತೆಗಳನ್ನು ಕೇಳಿ ಒಪಿಕೊಂಡಿಬಿಟ್ಟಿದ್ದಳು, ನಂತರ ಅವರ ತಾಯಿಯನ್ನು ಭೇಟಿ ಮಾಡಿ ನಾನೇ ಕತೆ ಹೇಳಿದ ನಂತರ ಕತೆಯನ್ನು ಅವರು ತುಂಬಾ ಇಷ್ಟ ಪಟ್ರು. ನನ್ನ ಚಿತ್ರವನ್ನು ಒಪ್ಪಿಕೊಂಡರು.’ ಎನ್ನುತ್ತಾರೆ ನಿರ್ದೇಶಕ ಸುಮಂತ್ ಕ್ರಾಂತಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top