ಉಪಯುಕ್ತ ಮಾಹಿತಿ

ಮನೆಯಲ್ಲಿ ದೊಡ್ಡವರು ಹೇಳುತ್ತಾರೆ ಸಂಜೆಯಾದ ಮೇಲೆ ಹೂವು-ಮೊಗ್ಗು, ಎಲೆಗಳನ್ನು ಕೀಳಬಾರದು ಎಂದು ಅದಕ್ಕೆ ಅಸಲಿ ಕಾರಣ ಏನು ಅಂತ ಗೊತ್ತಾ ?ಇಲ್ಲಿ ತಿಳ್ಕೊಳ್ಳಿ …

ಧಾರ್ಮಿಕವಾಗಿ ಕತ್ತಲಾದ ಮೇಲೆ ಹೂವು-ಮೊಗ್ಗು, ಎಲೆಗಳನ್ನು ಏಕೆ ಕೀಳಬಾರದು ಎಂಬುದಕ್ಕೆ ಉತ್ತರ ಹೀಗಿದೆ :

 

 

ಸೂರ್ಯಾಸ್ತದ ನಂತರ ವಾತಾವರಣದಲ್ಲಿ ಕೆಟ್ಟ ಶಕ್ತಿಗಳ ಪ್ರಭಾವವು ಹೆಚ್ಚಾಗುತ್ತದೆ. ಇದರಿಂದ ವಾತಾವರಣದಲ್ಲಿ ತೊಂದರೆದಾಯಕ ತರಂಗಗಳು ಹೆಚ್ಚಾಗುತ್ತವೆ. ಇದರಿಂದ ಮೊಗ್ಗುಗಳಲ್ಲಿ ರಜ-ತಮ ಕಣಗಳು ಆವೇಶಿತವಾಗುತ್ತವೆ. ದೇವತೆಗಳ ತತ್ತ್ವವನ್ನು ಆಕರ್ಷಿಸುವ ಅವುಗಳ ಕ್ಷಮತೆಯು ಕಡಿಮೆಯಾಗುತ್ತದೆ. ಆದುದರಿಂದ ಆದಷ್ಟು ಸೂರ್ಯಾಸ್ತದ ನಂತರ ಮೊಗ್ಗುಗಳನ್ನು ಕೀಳಬಾರದು.

 

 

ಪುಷ್ಪ ಕೀಳುವ ಬಗ್ಗೆ ಕೆಲವು ಮಹತ್ವಪೂರ್ಣ ಅಂಶಗಳು
೧. ಸ್ನಾನ ಮಾಡದೆ ಪುಷ್ಪಗಳನ್ನು ಕೀಳಬಾರದು.
೨. ಪಾದರಕ್ಷೆಗಳನ್ನು ಧರಿಸಿ ಪೂಜೆಗಾಗಿ ಪುಷ್ಪ ಕೀಳಬಾರದು.
೩. ಪುಷ್ಪವನ್ನು ಕೀಳುವ ಮೊದಲು, ಯಾವ ಗಿಡದ ಪುಷ್ಪ ಕೀಳುವುದಿದೆಯೋ ಅದಕ್ಕೆ ಕೃತಜ್ಞತೆ ವ್ಯಕ್ತಪಡಿಸಬೇಕು.
೪. ಪೂಜಾವಿಧಿಗೆ ಪುಷ್ಪ ಆರಿಸುವಾಗ, ಪುಷ್ಪವನ್ನು ಅರ್ಪಿಸುವ ಉದ್ದೇಶವು ಸಫಲವಾಗಲಿ ಎಂದು ಪ್ರಾರ್ಥನೆ ಮಾಡಬೆಕು.
೫. ನಮ್ಮ ಇಷ್ಟದೇವರ ನಾಮಜಪ ಮಾಡುತ್ತಾ ಪುಷ್ಪ ಕೀಳಬೇಕು.

 

 

ಆದರೆ ವೈಜ್ಞಾನಿಕವಾಗಿ ಅಥವಾ ತಾರ್ಕಿಕವಾಗಿ ಹೇಳಬೇಕೆಂದರೆ :
ರಾತ್ರಿಯವೇಳೆ ಕ್ರಿಮಿ ಕೀಟಗಳ ಹಾವಳಿ ಹೆಚ್ಚಾಗಿದ್ದು ,ಹಸಿರು ಬಣ್ಣದ ಹುಳು ಉಪ್ಪಟೆಗಳು ಮರದ ಅಥವಾ ಗಿಡದ ಬಣ್ಣವನ್ನೇ ಹೊಂದಿದ್ದು ,
ಬರಿಗಣ್ಣಿಗೆ ಕಾಣಿಸದ ಸೂಕ್ಷ್ಮಜೀವಿಗಳು ಹೂವು ಕೀಳಲು ಹೋದಾಗ ಅಪಾಯ ಉಂಟು ಮಾಡಬಹುದು ಎಂಬುದಾಗಿದೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top