ಉಪಯುಕ್ತ ಮಾಹಿತಿ

ಯಾವುದೇ ಕಾರಣಕ್ಕೂ ಈ ಹೂವುಗಳು ಮತ್ತು ಇಲ್ಲಿಯ ಹೂವುಗಳನ್ನೂ ದೇವರ ಪೂಜೆಗೆ ಬಳಸಬಾರದು!!ಬಳಸಿದ್ದಾರೆ ಅಷ್ಟ ಕಷ್ಟಗಳು ಬರುತ್ತದೆ …

ಪೂಜೆಯಲ್ಲಿ ಯಾವ ಹೂಗಳನ್ನು, ಎಲ್ಲಿಯ ಹೂಗಳನ್ನು ಬಳಸಬಾರದು

 

 

ಪುಷ್ಪದ ಮೂಲಕ ದೇವತಾತತ್ತ್ವಗಳ ಮತ್ತು ಪವಿತ್ರಕಗಳ ಪ್ರಕ್ಷೇಪಣೆಯು ಸೂಕ್ಷ್ಮ ಸ್ತರದಲ್ಲಿ ಅಂದರೆ ಆಧ್ಯಾತ್ಮಿಕ ಸ್ತರದಲ್ಲಾಗುವ ಪ್ರಕ್ರಿಯೆಯಾಗಿದೆ. ಇದರ ಪರಿಣಾಮವು ವಿವಿಧ ಪ್ರಕಾರದಲ್ಲಿ ಆಗುತ್ತದೆ. ಇದರಲ್ಲಿ ಒಂದು, ವಾತಾವರಣದಲ್ಲಿರುವ ರಜ-ತಮ ಪ್ರಧಾನ ತತ್ತ್ವಗಳ ಪ್ರಭಾವ ಕಡಿಮೆಯಾಗುವುದು. ಸಾತ್ತ್ವಿಕ ಪುಷ್ಪಗಳಿಂದ ಪ್ರಕ್ಷೇಪಿತವಾಗುವ ದೇವತಾತತ್ತ್ವದ ಪವಿತ್ರಕಗಳ ಕಾರಣದಿಂದ ವಾತಾವರಣದಲ್ಲಿರುವ ಅನಿಷ್ಟ ಶಕ್ತಿಗಳಿಗೆ ತೊಂದರೆಯಾಗುತ್ತದೆ. ಅವುಗಳ ತಮಪ್ರಧಾನ ಶಕ್ತಿ ಅಂದರೆ ಕಪ್ಪು ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ ಅಥವಾ ನಾಶವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಸಾತ್ತ್ವಿಕ ಪುಷ್ಪ, ದೇವತಾತತ್ತ್ವದ ತರಂಗಗಳನ್ನು ಪ್ರಕ್ಷೇಪಿಸಿ ವಾತಾವರಣದಲ್ಲಿರುವ ಕೆಟ್ಟ ಶಕ್ತಿಗಳೊಂದಿಗೆ ಒಂದು ಪ್ರಕಾರ ಯುದ್ಧವನ್ನೇ ಮಾಡುತ್ತದೆ.

 

 

ಪೂಜೆಯಲ್ಲಿ ನಿಷಿದ್ಧ ಪುಷ್ಪಗಳು
೧. ಅಪವಿತ್ರ ಸ್ಥಳದಲ್ಲಿ ಬೆಳೆದ ಪುಷ್ಪ
೨. ಅರಳದಿರುವ ಪುಷ್ಪ ಅಂದರೆ ಮೊಗ್ಗು
೩. ಎಸುಳುಗಳು ಉದುರಿದ ಪುಷ್ಪ
೪. ಗಂಧವಿಲ್ಲದ ಅಥವಾ ಉಗ್ರ ಗಂಧದ ಪುಷ್ಪ
೫. ಆಘ್ರಾಣಿಸಿದ ಪುಷ್ಪ
೬. ನೆಲದ ಮೇಲೆ ಬಿದ್ದ ಹೂವು
೭. ಎಡಗೈಯಿಂದ ತಂದಿರುವ
೮. ಬೇರೆಯವರನ್ನು ಅಪ್ರಸನ್ನಗೊಳಿಸಿ ತರಲಾದ ಪುಷ್ಪಗಳನ್ನು ದೇವತೆಗೆ ಅರ್ಪಿಸುವುದು ನಿಷಿದ್ಧವಾಗಿದೆ.

 

 

ಪುಷ್ಪ ನಿಷೇಧದ ಕೆಲವು ಅಪವಾದಗಳು
೧. ದೇವತೆಗೆ ಮೊಗ್ಗುಗಳನ್ನು ಅರ್ಪಿಸುವುದಿಲ್ಲ, ಆದರೆ ಈ ನಿಷೇಧವು ಕಮಲಕ್ಕೆ ಅನ್ವಯಿಸುವುದಿಲ್ಲ.
೨. ಹೂವುಗಳನ್ನು ನೀರಿನಲ್ಲಿ ಮುಳುಗಿಸಿ ತೊಳೆಯುವುದಿಲ್ಲ. ಆದರೆ ಹೂವುಗಳ ಮೇಲೆ ನೀರನ್ನು ಸಿಂಪಡಿಸಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top