ಹೆಚ್ಚಿನ

ಚಿಂತಕರ ಚಾವಡಿಯೊ ಕೋಟ್ಯಾಧಿಪತಿಗಳ ಚಾವಡಿಯೊ ?

ಕನಿಷ್ಠ ಅರ್ಹತೆಯೂ ಕೂಡ ಇಲ್ಲದಿರುವ, ಸಮಸ್ಯೆಗಳ ಬಗ್ಗೆ ಮಾತೂ ಆಡದ ಅನೇಕರು ಇಂದು ರಾಜ್ಯಸಭಾ ಸಂಸದರಾಗುತ್ತಿದ್ದಾರೆ. ರಾಜ್ಯಸಭೆ ಅಕ್ಷರಶಃ ‘ಶ್ರೀಮಂತರ ಅರಮನೆ’ ಆಗುತ್ತಿದೆ, ಶ್ರೀಮಂತರ ಲಾಸ್ಟ್‌ ರೆಸಾರ್ಟ್‌ ಆಗುತ್ತಿದೆ. ನೆಹರು, ಸರ್ವಪಳ್ಳಿ ರಾಧಾಕೃಷ್ಣನ್‌, ಅಟಲ್‌ ಬಿಹಾರಿ ವಾಜಪೇಯಿಗಳಂಥ ರಾಜ್ಯಸಭೆ ಘನತೆ ಎತ್ತಿಹಿಡಿದ ಮಹಾನ್ ನಾಯಕರ ಜಾಗದಲ್ಲಿ ಈಗ ಹಣ, ಹೆಂಡದ ದೊರೆ, ಜೂಜಿನ ರಾಜರು ಜೇಂಡಾ ಊರಿದ್ದಾರೆ. ಇವರು ಯಾವತ್ತೂ ಕರ್ನಾಟಕದ ಸಮಸ್ಯೆಗಳ ಕುರಿತು ಮಾತನಾಡಿಲ್ಲ.

 

 

ನಮ್ಮ ಇನ್ನೊಂದು ದೌರ್ಭಗ್ಯವೆಂದರೆ ಈ ಶ್ರೀಮಂತ ಸದಸ್ಯರು ಬಹುತೇಕ ಮಂದಿ ರಾಜ್ಯಸಭೆಯ ಯಾವ ಕಲಾಪದಲ್ಲೂ ಭಾಗವಹಿಸಲ್ಲ. ಒಮ್ಮೆ ಆರಿಸಿ ಕಳಿಸಿದರೆ ಸಾಕು ಐದು ವರ್ಷ ಸರ್ಕಾರಿ ಸೌಲಭ್ಯ ಪಡೆದು ಹಾಯಾಗಿ ಸುತ್ತುತ್ತ ತಮ್ಮ ಉದ್ಯಮ ಬೆಳೆಸುತ್ತಾರೆ ಹೊರತು ಜನರ ಸಮಸ್ಯೆಗಳನ್ನು ರಾಜ್ಯಸಭೆಯಲ್ಲಿ ಎತ್ತಿಹಿಯುವ ಕೆಲಸ ಮಾಡುವುದಿಲ್ಲ. ತಮ್ಮ ಉದ್ಯಮಗಳಿಗೆ ಲಾಭಿ ಮಾಡುವ ಸಲುವಾಗಿ ಇವರು ಕೋಟ್ಯಂತರ ರೂಪಾಯಿ ರಾಜಕೀಯ ಪಕ್ಷಗಳಿಗೆ ಸುರಿದು ರಾಜ್ಯಸಭೆಯನ್ನು ಪ್ರವೇಶ ಮಾಡುತ್ತಾರೆ.

 

 

ರಾಜಕೀಯ ಪಕ್ಷಗಳು ಹಣದ ಆಸೆಗೆ ಶ್ರೀಮಂತರಿಗೆ ಟಿಕೆಟ್ ಕೊಡುತ್ತಾರೆ. ದೇಶ ಬದಲಾಗಬೇಕು, ಅಭಿವೃದ್ಧಿಯಾಗಬೇಕು ಅಂತ ನಾವು ಇಲ್ಲೇ ಕುಳಿತು ಮಾತನಾಡುತ್ತೆ ಆದರೆ ಚುನಾವಣೆ ಸಮಯದಲ್ಲಿ ಸರಿಯಾದ ವ್ಯಕ್ತಿಗಳನ್ನು ಆರಿಸುವುದನ್ನು ಮರೆತು ಬಿಡುತ್ತೇವೆ. ಬಿಡಿ ಕಾಸಿನ ಆಸೆಗಾಗಿ ಭಷ್ಟರನ್ನು ಗದ್ದುಗೆ ಏರಿಸಿ ಬಿಡುತ್ತೇವೆ. ಈ ಭಷ್ಟ ನಾಯಕರು ಶ್ರೀಮಂತರ ಬಳಿ ದುಡ್ಡು ಪಡೆದು ಅವರನ್ನು ರಾಜ್ಯಸಭೆ ಸದಸ್ಯರಾಗಿ ಮಾಡುತ್ತಾರೆ.

 

 

ರಾಜ್ಯಸಭಾ ಸದಸ್ಯರಿಗೆ ಕಳಪೆ ಹಾಜರಾತಿ ಕಡ್ಡಾಯಗೊಳಿಸಬೇಕು ಆವಾಗಲೇ ಮಾತ್ರ ಅಭಿವೃದ್ಧಿ ಸಾಧ್ಯ. ಮುಂದಿನ ದಿನಗಳಲ್ಲಿ ಅರ್ಹ ವ್ಯಕ್ತಿಗಳು ರಾಜ್ಯ ಸಭೆ ಸೇರಲಿ ಎಂದು ಆಶಿಸೋಣ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top