ಸಮಾಚಾರ

ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಎಸ್‏ಬಿಐ: ಪ್ರತಿಯೊಬ್ಬ ಎಸ್‏ಬಿಐ ಗ್ರಾಹಕನೂ ಇದನ್ನು ತಿಳ್ಕೊಳ್ಳೆಬೇಕು .

ಕಳೆದ ವರ್ಷ ತನ್ನ ಅಧೀನ ಬ್ಯಾಂಕುಗಳನ್ನು ತನ್ನೊಂದಿಗೆ ವಿಲೀನ ಮಾಡಿಕೊಂಡ ನಂತರದಿಂದ ಸರ್ವಾಧಿಕಾರಿ ದೋರಣೆ ತೋರುತ್ತಿರುವ ಸರ್ಕಾರೀ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಂದು ಹೆಸರು ಪಡೆದಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.

 

Image result for state bank of india

 

ಕಳೆದ ಏಪ್ರಿಲ್‌ನಿಂದ ಈ ವರ್ಷದ ಜನವರಿವರೆಗೆ ಖಾತೆಯಲ್ಲಿ ಮಾಸಿಕ ಸರಾಸರಿ ಬ್ಯಾಲೆನ್ಸ್ ನಿರ್ವಹಿಸದ ಸುಮಾರು 41.16 ಲಕ್ಷ ಉಳಿತಾಯ ಖಾತೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರದ್ದುಪಡಿಸಿದೆ ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ.. ಹೀಗಾಗಿ ಕನಿಷ್ಠ ಬ್ಯಾಲೆನ್ಸ್ ಹೊಂದಿರದ ಉಳಿತಾಯ ಖಾತೆಗಳು ನಿಷ್ಕ್ರಿಯಗೊಳಿಸುವ ಮೂಲಕ ಮೂಲಕ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.

ಪ್ರಸ್ತುತ ಮೆಟ್ರೊ ಪಾಲಿಟನ್ ನಗರಗಳಲ್ಲಿ 5 ಸಾವಿರ, ನಗರ ಪ್ರದೇಶಗಳಲ್ಲಿ 3 ಸಾವಿರ, ಇತರೆ ಉಪ ನಗರ ಪ್ರದೇಶಗಳಲ್ಲಿ 2 ಸಾವಿರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂಪಾಯಿ ಕನಿಷ್ಠ ಠೇವಣಿ ನಿಗದಿ ಮಾದಲಾಗಿದ್ದು ಈ ಪೈಕಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬ್ಯಾಂಕುಗಳ ಉಳಿತಾಯ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಅನ್ನು 1000 ಇಳಿಸಲು ಆಡಳಿತ ಮಂಡಳಿ ಚಿಂತನೆ ನಡೆಸುತ್ತಿದೆ. ಕನಿಷ್ಟ ಬ್ಯಾಲೆನ್ಸ್ ಇಲ್ಲದ ಖಾತೆದಾರರಿಂದ ಪಡೆಯಲಾಗಿದ್ದ ಶುಲ್ಕಗಳಿಂದ ಎಸ್.ಬಿ.ಐ ಗೆ 1700 ಕೋಟಿ ಹಣ ಸಂಗ್ರವಾಗಿತ್ತು.

 

 

ಶುಲ್ಕಗಳಿಂದ ಸಂಗ್ರವಾದ ಹಣ ಎಸ್ಬಿಐ ತ್ರೈಮಾಸಿಕ ಆದಾಯಕ್ಕಿಂತಲೂ ಜಾಸ್ತಿಇರುವುದು ವಿತ್ತ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯಿಂದ ಬಹಿರಂಗವಾಗಿದೆ.. ಎಸ್ ಬಿಐನ ದುಬಾರಿಯಾದ ಶುಲ್ಕ ಕುರಿತು ಗ್ರಾಹಕರು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ತೀವ್ರ ಒತ್ತಡದ ಮೇರೆಗೆ ಎಸ್ ಬಿಐ ತನ್ನ ಕನಿಷ್ಟ ಬ್ಯಾಲೆನ್ಸ್ ಮೇಲಿನ ಶುಲ್ಕದಲ್ಲಿ ಕಡಿತ ಮಾಡಲು ಚಿಂತನೆ ನಡೆಸುತ್ತಿದೆ.

 

 

ಕನಿಷ್ಠ ಠೇವಣಿ ಇಲ್ಲದವರ ಮೇಲೆ ಹಾಕುವ ದಂಡದ ಜೊತೆಗೆ, ನಿರ್ವಹಣಾ ಶುಲ್ಕವನ್ನು ವಿಷಿಸುತ್ತಾ ಬಂದಿರುವ SBI ನಗರ ಪ್ರದೇಶ, ಗ್ರಾಮಾಂತರ ಪ್ರದೇಶಗಳಿಗೆ ಬೇರೆ ಬೇರೆ ರೀತಿಯ ನಿರ್ವಹಣಾ ಶುಲ್ಕಗಳನ್ನು ವಿಧಿಸುತ್ತಾ ಬಂದಿದೆ. ಸದ್ಯ ನಿಗದಿಪಡಿಸಲಾಗಿದ್ದ ನಿರ್ವಹಣಾ ಶುಲ್ಕವನ್ನು ನಗರ ಪ್ರದೇಶಗಳಲ್ಲಿ 75 ರಿಂದ 25ರುಗೆ ಮತ್ತು ಗ್ರಾಮೀಣ ಪ್ರದೇಶಗಲ್ಲಿ 40 ರಿಂದ 20 ರುಗಳಿಗೆ ಇಳಿಸಲಾಗಿದೆ. ಅಲ್ಲದೆ ಪ್ರಧಾನಿ ಅವರ ಜನಧನ ಯೋಜನೆಗೆ ಅನುಗುಣವಾಗಿ ಸಣ್ಣ ಖಾತೆ, ಮಕ್ಕಳ ಖಾತೆ, ಹಿರಿಯ ನಾಗರಿಕರ ಖಾತೆ, ಪಿಂಚಣಿದಾರ ಖಾತೆಗಳನ್ನು ವಿಧಿಸಲಾಗುತ್ತಿದ್ದ non-maintenance of Monthly Average Balance ಶುಲ್ಕದಿಂದ ಮುಕ್ತಿಗೊಳಿಸಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top