ಸಮಾಚಾರ

ನಾಡಗೀತೆಗೆ ಅವಮಾನ ಮಾಡಿದರಾ ಸಿಎಂ ಸಿದ್ದರಾಮಯ್ಯ?

ನಾಡಗೀತೆಯ ಸಾಲುಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಪ್ರತಿ ಪಕ್ಷಗಳಿಗೆ ತರಾಟೆ ತೆಗೆದುಕೊಳ್ಳುವ ಸಿಎಂ ಸಿದ್ಧರಾಮಯ್ಯ ನೆನ್ನೆ ದಾವಣಗೆರೆಯಲ್ಲಿ ನಡೆದ ಸರ್ಕಾರೀ ಕಾರ್ಯಕ್ರಮವೊಂದರಲ್ಲಿ ನಾಡಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

 

 

ತಾಲೂಕಿನ ಅಸುಂಡಿ ಗ್ರಾಮದಲ್ಲಿ ಅಸುಂಡಿ ಕೆರೆ ಸೇರಿದಂತೆ 17 ಕೆರೆಗಳನ್ನು ತುಂಬಿಸುವ 92 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಗೆ ಮಂಗಳವಾರ ಚಾಲನೆ ನೀಡುವ ಸಲುವಾಗಿ ಸರಕಾರ ಆಯೋಜಿತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ನಾಡಗೀತೆ ಹಾಡುವ ವೇಳೆ ಅಡಕೆ, ಎಲೆ ಹಾಕಿ​ಕೊಂಡು ಮೆಲ್ಲು​ತ್ತಾ ನಿಂತಿದ್ದರು. ನಾಡಗೀತೆಯ ಕೊನೆವರೆಗೂ ಜಗಿಯುವುದು ನಡೆದಿತ್ತು ಎಂಬ ಮಾತುಗಳು ಕೇಳಿಬರುತ್ತಿದೆ.

ಸರ್ಕಾರಿ ಪ್ರೌಢಶಾಲಾ ಮೈದಾ​ನ​ದಲ್ಲಿ ನಿಗ​ದಿತ ಸಮ​ಯ​ಕ್ಕಿಂತಲೂ ತಡ​ವಾ​ಗಿಯೇ ಆರಂಭ​ಗೊಂಡ ಸಮಾರಂಭಕ್ಕೆ ಬಂದಿದ್ದ ಸಿಎಂ ಸಿದ್ದ​ರಾ​ಮಯ್ಯ ಕಾರ್ಯಕ್ರಮದ ಆರಂಭ​ದಲ್ಲಿ ನಾಡ​ಗೀ​ತೆ ಹಾಡ​ಲಾ​ರಂಭಿ​ಸಿ​ದಾಗ ಎಲ್ಲರೂ ಎದ್ದು ನಿಂತರು. ಅದೇ ರೀತಿ ಸಿಎಂ ಸಿದ್ದು ಕೂಡ ಎದ್ದು ನಂಬಿನಂತಿದ್ದರು ಆದರೆ ತಮ್ಮ ಬಾಯಲ್ಲಿ ಬೀಡವನ್ನು ಜಗಿಯುತ್ತಲೇ ಇದ್ದರು ಎಂದು ಆರೋಪಿಸಲಾಗಿದ್ದು ಸಿಎಂ ಸಿದ್ದು ಅವರ ಈ ವರ್ತನೆ ಸಾರ್ವಜನಿಕರಿಗೆ ಬೇಸರವನ್ನುಂಟುಮಾಡಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top