ಮನೋರಂಜನೆ

ಶ್ರೀಮುರುಳಿ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮಾಸ್ ಚಿತ್ರಗಳ ನಂತರ ಕ್ಲಾಸ್ ಚಿತ್ರದತ್ತ ಮುಖಮಾಡಿದ ರೋರಿಂಗ್ ಸ್ಟಾರ್.

ಉಗ್ರಂ, ರಥಾವರ, ಮಾಫ್ತಿ ಸಿನಿಮಾಗಳು ಹಿಟ್ ಆದ ನಂತರ ರೋರಿಂಗ್ ಸ್ಟಾರ್ ಶ್ರೀಮುರುಳಿ ಯಾವ ಚಿತ್ರದಲ್ಲಿ ಅಭಿಮಾನಯಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಬೆಟ್ಟದ ಹಾಗೆ ಬೆಳೆದುಕೊಂಡಿದೆ..ಈ ಬಗ್ಗೆ ಸದ್ಯದಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿರುವ ಶ್ರೀಮುರುಳಿ ಯುಗಾದಿ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಪಕ್ಕ ಸುದ್ದಿಯೊಂದನ್ನು ನೀಡಲಿದ್ದಾರಂತೆ…

 

 

ಸಾಲಾಗಿ ಮೂರು ಮಾಸ್ ಚಿತ್ರಗಳನ್ನೇ ಮಾಡಿದ್ದ ಶ್ರೀಮುರುಳಿ ಈ ಭಾರಿ ಕ್ಲಾಸ್ ಸಿನಿಮಾ ಮಾಡುವ ಕಡೆ ಗಮನ ಹರಿಸಿದ್ದಾರೆ ಎನ್ನುವ ಸುದ್ದಿಗಳು ಗಾಂಧಿನಗರದ ಮೂಲೆಗಳಿಂದ ಕೇಳಿಬರುತ್ತಿವೆ.. ಶ್ರೀಮುರುಳಿ ಇದುವರೆಗೂ ಅನೇಕ ನಿರ್ದೇಶಕರ ಬಳಿ ಮೂವತ್ತಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದು ಯಾವುದನ್ನೂ ಅಂತಿಮವಾಗಿ ಒಪ್ಪಿಕೊಂಡಿಲ್ಲವಂತೆ. ಒಳ್ಳೆಯ ಕಥೆಗಾಗಿ ಕಾಯುತ್ತಿರುವ ಶ್ರೀಮುರುಳಿ ಶೀಘ್ರದಲ್ಲೇ ತಮ್ಮ ಮುಂದಿನ ಚಿತ್ರದ ಬಗ್ಗೆ ಅಧಿಕೃತವಾಗಿ ಮಾಹಿತಿಗಳನ್ನು ನೀಡಲಿದ್ದಾರೆ.

ಈ ಮದ್ಯೆ ಬಹದ್ದೂರ್, ಭರ್ಜರಿ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಜೊತೆ ಮುಂದಿನ ಸಿನಿಮಾದಲ್ಲಿ ಶ್ರೀಮುರುಳಿ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು ಅಲ್ಲದೆ ಈ ಚಿತ್ರ ಕ್ಲಾಸ್ ಹಿನ್ನಲೆಯ ಚಿತ್ರವಾಗಿರಲಿದೆಯಂತೆ. ಶ್ರೀ ಮುರುಳಿ ತಮ್ಮ ಸ್ನೇಹಿತನ ಜೊತೆಗೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಕೂಡ ಆರಂಭಿಸಲಿದ್ದಾರೆ ಎನ್ನುವ ಸುದ್ದಿ ಕೂಡ ಚಾಲ್ತಿಯಲ್ಲಿದೆ. ಈ ಬ್ಯಾನರ್ ಮೂಲಕ ಅನೇಕ ಚಿತ್ರಗಳನ್ನು ಸ್ಟಾರ್ಟ್ ಮಾಡಬೇಕೆಂದು ಯೋಚಿಸಿರುವ ಶ್ರೀಮುರುಳಿ ಯುಗಾದಿ ಹಬ್ಬದಂದು ತಮ್ಮ ಹೊಸ ಚಿತ್ರಗಳ ಬಗ್ಗೆ ಮಾಹಿತಿ ನೀಡಲಿದ್ದಾರಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top