ಸಮಾಚಾರ

ಖ್ಯಾತ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ವಿಧಿವಶ

ಖ್ಯಾತ ಭೌತಶಾಸ್ತ್ರ ವಿಜ್ಞಾನಿ ಪ್ರೊ. ಸ್ಟೀಫನ್ ಹಾಕಿಂಗ್ ಇಂದು ಬೆಳಿಗ್ಗೆ ಕೇಂಬ್ರಿಡ್ಜ್‌ನಲ್ಲಿರುವ ತಮ್ಮ ಮೆನೆಯಲ್ಲಿ ನಿಧನರಾಗಿದ್ದಾರೆ. ಅವರು ವಿಶ್ವವಿಜ್ಞಾನ ಮತ್ತು ಕ್ವಾಂಟಮ್‌ ಗುರುತ್ವಾಕರ್ಷಣೆ, ಅದರಲ್ಲಿಯೂ ಮುಖ್ಯವಾಗಿ ಕಪ್ಪು ರಂಧ್ರದ ವಿವರಗಳನ್ನು ಕುರಿತ ಅಧ್ಯಯನ ಮತ್ತು ಸಂಶೋಧನಾ ಕೊಡುಗೆ ನೀಡಿ ಅಪಾರ ಹೆಸರುವಾಸಿ ಆಗಿದ್ದರು.

 

 

ವಿಜ್ಞಾನಿ ಪ್ರೊ. ಸ್ಟೀಫನ್ ಹಾಕಿಂಗ್ ಅವರ ಮಕ್ಕಳಾದ ಲೂಸಿ, ರಾಬರ್ಟ್ ಮತ್ತು ಟಿಮ್ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ, ನಮ್ಮ ಪ್ರೀತಿಯ ತಂದೆ ವಿಧಿವಶರಾಗಿರುವುದಕ್ಕೆ ನಮಗೆ ತುಂಬಾ ದುಃಖವಾಗಿದೆ. ಅವರು ಮಹಾನ್ ವಿಜ್ಞಾನಿ ಮತ್ತು ಅಸಾಮಾನ್ಯ ವ್ಯಕ್ತಿಯಾಗಿದ್ದರು. ಅವರ ಕಾರ್ಯಗಳು ಮುಂದಿನ ಅನೇಕ ವರ್ಷಗಳವರೆಗೆ ಜೀವಂತವಾಗಿ ಇರುತ್ತವೆ. ಅವರ ಧೈರ್ಯ ಮತ್ತು ಪ್ರತಿಭೆ ಜಗತ್ತಿನಾದ್ಯಂತ ಅನೇಕರಿಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದ್ದಾರೆ.

 

 

8 ಜನವರಿ 1942ರಲ್ಲಿ ಜನಿಸಿದ್ದ ಸ್ಟೀಫನ್‌ ಹಾಕಿಂಗ್ ರವರು, ಬ್ರಿಟೀಷ್‌ ಸೈದ್ಧಾಂತಿಕ ಭೌತಶಾಸ್ತ್ರಜ್ಞ ತಜ್ಞರಾಗಿದ್ದರು, ತಮ್ಮ 40 ವರ್ಷ ಸುದೀರ್ಘ ಕಾಲ ವೈಜ್ಞಾನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದರ ಮೂಲಕ ವಿಶ್ವಪ್ರಸಿದ್ಧಿ ಹೊಂದಿದವರು. ಕಾಸ್ಮೋಲಜಿ ಬಗೆಗೆ ಸಿದ್ಧಾಂತ ಹೊರಡಿಸಿದ ಮೊದಲಿಗರು ಹಾಕಿಂಗ್

 

 

ನಿಧಾನ ಗತಿಯ ಅಮ್ಯೋಟ್ರಾಫಿಕ್ ಲ್ಯಾಟೆರಲ್ ಸ್ಕ್ಲೆರೋಸಿಸ್ ಇಂದಾಗಿ ಸ್ಟೀಫನ್ ಅವರು ಪಾರ್ಶ್ವವಾಯು ಇಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇವರು ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ ಏನುವ ಸ್ನಾಯುಚಾಲಕ ನರಕೋಶದ ಸಮಸ್ಯೆಗೆ ತುತ್ತಾಗಿದ್ದರು ವಿಪರೀತ ಅಶಕ್ತತೆಯನ್ನು ಇವರು ಹೊಂದಿದ್ದರು. ಕಳೆದ ಹಲವು ವರ್ಷಗಳಿಂದ ವ್ಹೀಲ್ ಚೇರ್ ಮೇಲೆ ಬದುಕು ಸಾಗಿಸುತ್ತಿದ್ದ ಅವರ ದೇಹದ ಕೆಲವೇ ಕೆಲವು ಭಾಗಗಳನ್ನು ಬಿಟ್ಟರೆ ಬೇರೆ ಯಾವ ಅಂಗ ಅಲುಗಾಡಿಸಲು ಅವರಿಗೆ ಆಗುತ್ತಿರುಲಿಲ್ಲ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top