ಸಣ್ಣ ಕಥೆ

ಪ್ರಪಂಚಕ್ಕೆ ನೀತಿ ಹೇಳ್ತಿದ್ದ ಚಾಣುಕ್ಯನ ಸಾವು ಇನ್ನೊಬ್ಬರ ಕುತಂತ್ರದಿಂದ ಹೇಗೆ ನಡೆಯಿತು ಎನ್ನುವ ರೋಚಕ ಕಥೆ ತಿಳ್ಕೊಳ್ಳಿ

ಚಾಣುಕ್ಯನ ಸಾವು ಹೇಗಾಯಿತು ಗೊತ್ತೇ ? ಅವರದ್ದು ಸಹಜ ಸಾವೇ ಅಥವಾ  ಕೊಲೆಯೋ ?

 

 

ಪ್ರಾಚೀನ ಭಾರತದಲ್ಲಿ ಅತ್ಯಂತ ನೆನಪಿನಲ್ಲಿ ಮತ್ತು ಅಸಾಧಾರಣವಾದ ವ್ಯಕ್ತಿತ್ವಗಳಲ್ಲಿ ಚಾಣುಕ್ಯರು ಕೂಡ ಒಬ್ಬರಾಗಿದ್ದರು.ಇವರು ಮಹಾ ಮೇಧಾವಿಯಷ್ಟೇ ಅಲ್ಲದೆ ಭಾರತದ ಅರ್ಥಶಾಸ್ತ್ರಕ್ಕೆ ಇವರ ಕೊಡುಗೆ ಅಪಾರ. ಈ ಮಹಾ ತತ್ವಜ್ಞಾನಿಯ  ಸಾವು ಹೇಗಾಯಿತು ? ಅದು ಕೊಲೆಯೋ ಅಥವಾ ಇಚ್ಛೆಯಂತೆ ನಡೆದ ಸಾವೋ  ಎಂಬುದು ನಿಗೂಢ ರಹಸ್ಯವಾಗಿದೆ. ಇದೀಗ  ಆದರ ಬಗ್ಗೆ ನಾವು ತಿಳಿಯೋಣ ಬನ್ನಿ

ಏನು ಗತಿ ಇಲ್ಲದ ಚಂದ್ರ ಗುಪ್ತರನ್ನು ನಂದ ವಂಶದ  ವಿರುದ್ದದ  ಸೇಡಿನ ಫಲವಾಗಿ ಚಾಣುಕ್ಯರು ತಾವಾಗಿಯೇ ಬೆಳೆಸಿ ನಂದರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸಲಹೆ ನೀಡಿ ಮಹಾನ್ ಸಾಮ್ರಾಜ್ಯದ ಆಡಳಿತಗಾರರನ್ನಾಗಿ  ಮಾಡಿದರು. ಚಂದ್ರ ಗುಪ್ತ  ಮೌರ್ಯನು ಚಾಣುಕ್ಯರ ಮಾರ್ಗದರ್ಶನದಲ್ಲಿ ಮಹಾನ್ ಚಕ್ರವರ್ತಿಯಾಗಿ  ಬೆಳೆದು ಚಾಣಕ್ಯನನ್ನು ತಮ್ಮ ರಾಜಸ್ಥಾನದ ಮಾರ್ಗದರ್ಶಿಯಾಗಿ ಮಾಡಿಕೊಂಡಿದ್ದರು.

 

 

ಚಂದ್ರಗುಪ್ತ ಆಡಳಿತದ ನಂತರ ಮಗ ಬಿಂದು ಸಾರನು ಆಡಳಿತವನ್ನು ನಡೆಸುತ್ತಿದ್ದನು . ಚಾಣುಕ್ಯರು ಬಿಂದು ಸಾರನ  ಮುಖ್ಯ ಸಲಹೆಗಾರರಾಗಿ ಮುಂದುವರಿದರು ಚಾಣುಕ್ಯರು ಬಿಂದು ಸಾರನೊಂದಿಗೆ ಹೊಂದಿರುವ ಬಾಂಧವ್ಯವನ್ನು ಮಂತ್ರಿಯಾಗಿದ್ದ ಸುಬಂಧುವಿಗೆ ಸಹಿಸಿಕೊಳ್ಳಲು ಆಗಲಿಲ್ಲ . ಇವರಿಬ್ಬರ ನಡುವೆ ತಂದು ಇಡಲು ಭಯಾನಕ ಬಲೆಯೊಂದನ್ನು  ಸೃಷ್ಟಿ ಮಾಡಿದನು.

ಅದೇನಪ್ಪಾ ಅಂದ್ರೆ ಚಾಣುಕ್ಯರು ಬಿಂದು  ಸಾರನ ತಾಯಿ  ದುರ್ದಾಳನ್ನು ಕೊಂದನು ಎಂದು ಬಿಂದು ಸಾರನ  ಕಿವಿ ಹಿಂಡಿದನು. ಈ ವಿಷಯವು ಚಾಣುಕ್ಯರ ಬಗ್ಗೆ ಬಿಂದು ಸಾರನಲ್ಲಿ ತೀವ್ರ ತಿರಸ್ಕಾರವನ್ನು ಸೃಷ್ಟಿಸಿತ್ತು .ಇಷ್ಟಕ್ಕೂ ಅಲ್ಲಿ ನಡೆದ ಅಸಲಿ ಕಥೆಯಾದರೂ ಏನು ಅಂದರೆ

ಹಿಂದಿನ ಕಾಲದಲ್ಲಿ ವಿಷಕನ್ಯೆಯರನ್ನು  ಸಾಕಲಾಗುತ್ತಿತ್ತು. ನಮ್ಮಲ್ಲಿ ಕೆಲವರಿಗೆ ತಿಳಿದಿರುವ ಹಾಗೆ ವಿಷಕನ್ಯೆಯರನ್ನು ಶತ್ರುಗಳ ಮೇಲೆ ಅಸ್ತ್ರದ ರೀತಿ ಪ್ರಯೋಗ ಮಾಡಲಾಗುತ್ತಿತ್ತು. ಸುಂದರವಾದ ವಿಷ ಕನ್ಯೆಯರು  ಶತ್ರುಗಳ ಜೊತೆ ಸಂಬಂಧ ನೆಡೆಸಿ  ಅವರನ್ನು  ಕೊಂದು ಬರುತ್ತಿದ್ದರು.  ಈ ವಿಷಯವನ್ನು ತಿಳಿದಿದ್ದ ಚಾಣಕ್ಯರು.

 

 

ವಿಷಕನ್ಯೆಯರಿಂದ ಚಂದ್ರಗುಪ್ತರನ್ನು ರಕ್ಷಿಸಲು ಚಂದ್ರಗುಪ್ತರಿಗೆ ಅವರಿಂದ ಯಾವುದೇ ಅಪಾಯ ಉಂಟಾಗದಂತೆ ಚಂದ್ರಗುಪ್ತರಿಗೆ  ಸ್ವಲ್ಪ ಸ್ವಲ್ಪ ವಿಷ  ಕೊಟ್ಟು ವಿಷಪುರುಷನಂತೆ ಮಾಡಿದರು. ಚಂದ್ರಗುಪ್ತರ ರಾಣಿ ದುರ್ದಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಚಂದ್ರಗುಪ್ತರ ತಟ್ಟೆಯಲ್ಲಿ  ಬಿಟ್ಟಿದ್ದ ಎಂಜಲು ಆಹಾರವನ್ನು  ಸೇವಿಸಿದಳು. ಇದರಿಂದ ಆಕೆಗೆ ವಿಷ ಪ್ರಾಶನವಾಗಿ ಒದ್ದಾಡುತ್ತಿದ್ದಳು. ಅದು ಕಾರ್ಕೋಟಕ ವಿಷವಾಗಿತ್ತು. ಯಾವುದೇ ಕಾರಣಕ್ಕೂ ರಾಣಿ ಉಳಿಯುತ್ತಿರಲಿಲ್ಲ.

 

 

ಈ ಸಮಯದಲ್ಲಿ ಚಾಣುಕ್ಯರು ತಮ್ಮ ರಾಜ್ಯದ ಉತ್ತರಾಧಿಕಾರಿಯನ್ನು ಉಳಿಸುವ ಸಲುವಾಗಿ ರಾಣಿಯ ಹೊಟ್ಟೆಯನ್ನು ಬಗೆದು ಮಗುವನ್ನು ಹೊರೆ ತೆಗೆದರು . ಇದೇ ಸಮಯದಲ್ಲಿ ಆಮ್ಮನ  ರಕ್ತ ಬಿದ್ದು ಮಗುವಿನ ಹಣೆಯ ಮೇಲೆ ಮೆತ್ತಿತ್ತು. ಇದೇ ಕಾರಣಕ್ಕೆ ಮಗುವಿಗೆ ಬಿಂದು ಸಾರಾ ಎಂದು ನಾಮಕರಣ ಮಾಡಲಾಯಿತು.

 

ಚಾಣಕ್ಯರು ಬಿಂದುಸಾರನ ಮುಖ್ಯ ಸಲಹೆಗಾರರಾಗಿ ಮುಂದುವರೆದರು , ಚಾಣಕ್ಯರು ಬಿಂದಸಾರನೊಂದಿಗೆ ಹೊಂದಿರುವ ಬಾಂಧವ್ಯವನ್ನು ಮಂತ್ರಿಯಾಗಿದ್ದ ಸುಬಂಧುವಿಗೆ ಸಹಿಸಿಕೊಳ್ಳಲಾಗಲಿಲ್ಲ.ಇಬ್ಬರ ನಡುವೆ ತಂದು ಇಡಲು ಭಯಾನಕ ಬಲೆಯೊಂದನ್ನು ಸೃಷ್ಟಿಸಿದನು.
ಅದೆಂದರೆ ಚಾಣಕ್ಯರು ಬಿಂದುಸಾರನ ತಾಯಿ ಧುರ್ಧಾಳನ್ನು ಕೊಂದನ್ನು ಎಂದು ಬಿಂದುಸಾರನ ಕಿವಿಹಿಂಡಿದ್ದನು ಈ ವಿಷಯವು ಚಾಣಕ್ಯರ ಬಗ್ಗೆ ಬಿಂದುಸಾರನಲ್ಲಿ ತೀವ್ರ ತಿರಸ್ಕಾರವನ್ನು ಸೃಷ್ಟಿಸಿತು.

ಬಿಂದು ಸಾರನಿಗೆ ತಪ್ಪಿನ ಅರಿವಾಗಿದ್ದು ಬಿಂದು ಸಾರನಿಗೆ ನಿಧಾನವಾಗಿ ದಾದಿಯೊಬ್ಬರಿಂದ ನಿಜ ವಿಷಯವು ತಿಳಿಯಿತು. ನಂತರ ಎಷ್ಟೇ ತಿಳಿ ಹೇಳಿದರು. ಚಾಣುಕ್ಯರನ್ನು ಮರಳಿ ಕರೆತರಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಏಕೆಂದರೆ ಅದಾಗಲೇ ಚಾಣುಕ್ಯರು ಸಲ್ಲೇಖನ ತೆಗೆದುಕೊಂಡಿದ್ದರು.

ಸಲ್ಲೇಖನ ಎಂದರೇನು ?

 

ಸಲ್ಲೇಖನ ಎಂದರೆ  ಇಚ್ಛಾಮರಣದ ಒಂದು ಕ್ರಿಯೆ. ಆಹಾರ ಸೇವಿಸದೆ ಇಷ್ಟಪಟ್ಟು ಮರಣ ಹೊಂದುವ  ಅತ್ಯಂತ ಭಯಂಕರವಾದ ಪ್ರಕ್ರಿಯೆ.

 

 

ಮಂತ್ರಿಯಾಗಿದ್ದ ಸುಬಂಧು ಚಾಣಕ್ಯರನ್ನು  ಬೆಂಕಿಯಲ್ಲಿ ಸಜೀವ ದಹನ ಮಾಡಿದರು. ನಂತರ ನಿಜ ವಿಷಯ ತಿಳಿದ ಬಿಂದು  ಸಾರಾ ಸುಬಂಧುವನ್ನು ಕೊಂದನು  ಎನ್ನಲಾಗುತ್ತಿದೆ . ಒಟ್ಟಿನಲ್ಲಿ ಅದೇನೆ ಆಗಲಿ ಪ್ರತಿಯೊಬ್ಬರಿಗೂ ಪ್ರಾಣದ ಮೇಲೆ ಆಸೆ ಎನ್ನುವುದು ಇರುತ್ತದೆ. ಅದರೆ ಚಾಣಕ್ಯ ತನ್ನ ಸ್ವ ಇಚ್ಛೆಯಿಂದ ಸಾವನ್ನಪ್ಪಿರುವುದು. ನಿಜಕ್ಕೂ ವಿಷಾದಕರ ಸಂಗತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top