ಮನೋರಂಜನೆ

ಅನ್ನ ನೀರು ಬಿಟ್ಟು ಉಪವಾಸ ಕುಳಿತಿದ್ದ ಅಭಿಮಾನಿಯ ಆಸೆಯನ್ನು ಈಡೇರಿಸಿದ ಸುದೀಪ್!

ಸಾಮನ್ಯವಾಗಿ ಪ್ರತಿಯೊಬ್ಬ ಸಿನಿಮಾ ಸ್ಟಾರ್’ಗಳು ತಮ್ಮದೇ ಆದ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುತ್ತಾರೆ., ತಮ್ಮ ಫೆವರೇಟ್ ನಟನ ಹವಾ ಭಾವ ಗಳು ಸೇರಿ ಅವರಿಗೆ ಸಂಭಂದಪಟ್ಟ ಪ್ರತಿಯೊಂದನ್ನು ಅನುಕರಣೆ ಮಾಡಲು ಯತ್ನಿಸುವ ಅಭಿಮಾನಿಗಳು ಹೇಗಾದರೂ ಮಾಡಿ ತಮ್ಮ ನಟನನ್ನು ಒಂದು ಬಾರಿ ಕಣ್ತುಂಬಿಸಿಕೊಳ್ಳೋದಕ್ಕೆ ಕಾಯುತ್ತಿರುತ್ತಾರೆ. ಅಭಿಮಾನಿಗಳು ಸೇರಾದರೆ ಸ್ಟಾರ್ ಗಳು ಸವ ಸೇರು, ಹೌದು ಅಭಿಮಾನಿಗಳು ತಮ್ಮ ಮೇಲೆ ಇಟ್ಟಿರುವ ಅಭಿಮಾನಕ್ಕೆ ಮನಸೋತು ಅವರನ್ನು ಖುಷಿ ಪಡಿಸುವ ಕಾಯಕದಲ್ಲಿ ನಟರು ತೊಡಗಿಕೊಳ್ಳುತ್ತಾರೆ. ಆದರೆ ಒಮ್ಮೊಮ್ಮೆ ಇಂತಹ ನಟರಿಗೆ ತಮ್ಮ ಅಭಿಮಾನಿಗಳನ್ನು ನಿಭಾಯಿಸುವುದು ಕಷ್ಟಸಾಧ್ಯವಾಗುತ್ತದೆ.

 

 

ಕನಕಪುರ ಬಳಿ ಇರುವ ಸಾತನೂರಿನ ನಾಗಸೊಂಡೆ ಗ್ರಾಮದ ನಿವಾಸಿ ಆಗಿರುವ ಕಿಚ್ಚ ಸುದೀಪ್ ಅಭಿಮಾನಿ ಶಿವು ಎಂಬಾತ ಫೇಸ್ಬುಕ್ ಲೈವ್ ಮಾಡಿ ತಾನು ಸುದೀಪ್ ಅವರನ್ನು ಭೇಟಿ ಆಗಬೇಕು ಇಲ್ಲದಿದ್ದರೆ ಉಪವಾಸ ಮಾಡುತ್ತೇನೆ ಎಂದು ಫೇಸ್ಬುಕ್ ನಲ್ಲಿ ವಿಡಿಯೋವನ್ನು ಮಾಡಿ ಹಠಹಿಡಿದಿದ್ದರು. ಆ ವಿಡಿಯೋ ವೈರಲ್ ಆಗಿ ಕಿಚ್ಚನ ವರೆಗೂ ತಲುಪಿತ್ತು. ವಿಡಿಯೋವನ್ನು ನೋಡಿ ಅಭಿಮಾನಿಗೆ ಬುದ್ದಿ ಮಾತು ಹೇಳಿದ್ದ ಕಿಚ್ಚ “ನೀವು ಚೆನ್ನಾಗಿದ್ದರೆ ಅದೇ ನನಗೆ ಖುಷಿ, ಉಪವಾಸ ಮಾಡಿ ನನಗೆ ನೋವು ಕೊಡಬೇಡಿ, ಭೇಟಿ ಮಾಡಲು ಬೇಕಾಗಿರುವುದು ಸಮಯ, ಪ್ರೀತಿ ಹಾಗೂ ತಾಳ್ಮೆ , ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿ” ಎಂದು ಬುದ್ದಿಮಾತು ಹೇಳಿದ್ದರು.

 

 

ಏನೇ ಹೇಳಿದರು ಅಭಿಮಾನಿಯ ಮನಸಿನಲ್ಲಿ ಕಿಚ್ಚನನ್ನು ಮೀಟ್ ಮಾಡುವ ಆಸೆ ಮಾತ್ರ ಹಾಗೆಯೆ ಇತ್ತು. ಆ ಆಸೆಯನ್ನು ಕಿಚ್ಚ ಕೊನೆಗೂ ಈಡೇರಿಸಿದ್ದಾರೆ. ಆತನನ್ನು ಭೇಟಿ ಮಾಡಿದ ಕಿಚ್ಚ ಇನ್ಮುಂದೆ ದುಡುಕಿ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಬುದ್ದಿಮಾತು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top