ಮನೋರಂಜನೆ

ಪುನೀತ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಕಾದಿದೆ ಸರ್ಪ್ರೈಸ್ ಗಿಫ್ಟ್..

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬಕ್ಕೆ(ಮಾರ್ಚ್ 17) ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದೆ.. ಈಗಾಗಲೇ ಅಭಿಮಾನಿ ವಲಯದಲ್ಲಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲು ಪ್ರಿಪರೇಷನ್ ಕೂಡ ಜೋರಾಗಿ ನಡೆಯುತ್ತಿದೆ. ಈ ಗ್ಯಾಪಲ್ಲಿ ಅಪ್ಪು ಬರ್ತಡೆಗೆ ಅಭಿಮಾನಿಗಳಿಗೊಂದು ಸರ್ಪ್ರೈಸ್ ಗಿಫ್ಟ್ ಸಿಗುತ್ತಿದೆ.. ಏನಪ್ಪಾ ಅದು ಅಂತೀರಾ? ಮುಂದೆ ಓದಿ.

 

 

ಸಾಮಾನ್ಯವಾಗಿ ಸ್ಟಾರ್ ನಂತರ ಹುಟ್ಟುಹಬ್ಬದ ದಿನದಂದು ಅವರ ಚಿತ್ರಕ್ಕೆ ಸಂಭಂದಿಸಿದ ಪೋಸ್ಟರ್’ನೋ ಅಥವಾ ಟೀಸರ್’ನೋ ರಿಲೀಸ್ ಮಾಡಿ ಅಭಿಮಾನಿಗಳಿಗೆ ಗಿಫ್ಟ್ ನೀಡೋದು ಚಿತ್ರರಂಗದ ವಾಡಿಕೆ.. ಪವರ್ ವಿಷಯದಲ್ಲೂ ಅದೇ ಆಗುತ್ತಿದೆ, ಈ ಭಾರಿಯ ಹುಟ್ಟುಹಬ್ಬಕ್ಕೆ ಪವನ್ ಒಡೆಯರ್ ನಿರ್ದೇಶಿಸುತ್ತಿರುವ ಅಪ್ಪು ಮುಂದಿನ ಚಿತ್ರದ ಫರ್ಸ್ಟ್ ಲುಕ್ ರಿಲೀಸ್ ಆಗಲಿದೆ ಎಂಬ ಪಕ್ಕಾ ಮಾಹಿತಿಯೊಂದು ಚಿತ್ರತಂಡದ ಕಡೆಯಿಂದ ತೂರಿಬಂದಿದೆ.. ಈ ಮೂಲಕ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಲು ಮುಂದಾಗಿದ್ದಾರೆ.

 

 

ಮೊನ್ನೆಯಷ್ಟೇ ಈ ಚಿತ್ರದ ಶೂಟಿಂಗ್ ಸ್ಟಾರ್ಟ್ ಆಗಿದ್ದು ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಪ್ರಿಯಾಂಕಾ ಜ್ವಾಲಾಕರ್ ಮತ್ತು ರಚಿತಾ ರಾಮ್ ಈ ಚಿತ್ರದ ನಾಯಕಿಯರು. ವಿಶೇಷ ಪಾತ್ರವೊಂದರಲ್ಲಿ ಹಿರಿಯ ನಟಿ ಬಿ.ಸರೋಜಾದೇವಿ ಕೂಡ ನಟಿಸುತ್ತಿದ್ದಾರೆ.. ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಕೋಟಿಗೊಬ್ಬ ೨ ಖ್ಯಾತಿಯ ಡಿ.ಇಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top