ಸಿನಿಮಾ

ಈ ಕಾರಣಕ್ಕೆ ನಿರ್ದೇಶಕರ ಮೇಲೆ ಕಿಡಿ ಕಾರಿದ ಇಲಿಯಾನಾ.

ಚಿತ್ರರಂಗದಲ್ಲಿ ನಟಿಯರು ಸಿನಿಮಾ ನಿರ್ದೇಶಕರ ಮೇಲೆ ಆರೋಪ ಮಾಡುವುದನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ, ಅದೇ ರೀತಿ ಇದೀಗ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಅಭಿನಯ ಮಾಡಿ ಹೆಸರು ವಾಸಿ ಆಗಿರುವ ಇಲಿಯಾನ ಅವರು ದಕ್ಷಿಣ ಭಾರತದ ನಿರ್ದೇಶಕರ ಮೇಲೆ ದೂರಿದ್ದಾರೆ.

 

 

ಪತ್ರಿಕೆಯಲ್ಲಿ ಇತ್ತೀಚಿಗೆ ಸಂದರ್ಶನದಲ್ಲಿ ಭಾಗವಹಿಸಿದ ಇಲಿಯಾನ ಅವರು ತಮಗೆ ನಟನೆ ಮಾಡುವ ಪ್ರತಿಭೆ ಇದ್ದರೂ ನನ್ನ ಮುಗ್ಧತೆಯನ್ನು ದುರುಪಯೋಗ ಮಾಡಿಕೊಂಡ ದಕ್ಷಿಣದ ನಿರ್ದೇಶಕರು ಬರೀ ಗ್ಲಾಮರ್‌ ಗೊಂಬೆಯಾಗಿ ಮಾತ್ರ ನನ್ನನ್ನು ತೋರಿಸಿದರು ಎಂದು ದೂರಿದರು. ಇಲಿಯಾನ ಎಷ್ಟೇ ಪ್ರಯತ್ನ ಮಾಡಿದರು ಅವಳಿಗೆ ಎಕ್ಸ್ ಪೋಸ್ ಮಾಡುವ ಪಾತ್ರ ಕೊಡುತ್ತಿದ್ದರು ಎಂದು ನಿರ್ದೇಶಕರನ್ನು ದೂರಿದ್ದಾರೆ. ದೇವದಾಸು ಎಂಬ ತೆಲಗು ಚಿತ್ರದ ಮೂಲಕ ಇಲಿಯಾನ ಚಿತ್ರರಂಗಕ್ಕೆ ಕಾಲಿಟ್ಟರು.

 

 

ಹದಿನೇಳನೇ ಚಿಕ್ಕ ವಯಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಇಲಿಯಾನ ನಟನೆ ಚೆನ್ನಾಗಿತ್ತು ಆದರೆ ನಿರ್ದೇಶಕರು ಈಕೆಗೆ ಚಿಕ್ಕ ಬಟ್ಟೆ ಹಾಕಿಕೊಂಡು ಬರಲು ಹೇಳುತ್ತಿದ್ದರು. ನಟನೆ ಗಿಂತ ಎಕ್ಪೋಸ್ ಮಾಡುವುದಕ್ಕೆ ಜಾಸ್ತಿ ಬೆಲೆ ಕೊಡಿದ್ರು ಎಂದು ಕಿಡಿಕಾರಿದ್ದಾರೆ. ಇತ್ತೀಚಿಗೆ ಇನ್ನೊಬ್ಬ ನಟಿ ಕೂಡ ಇದೆ ರೀತಿಯ ಆರೋಪ ಮಾಡಿದ್ದರು.

 

 

 

ಇನ್ನು ದಕ್ಷಿಣಕ್ಕೆ ಹೋಲಿಸಿದರೆ ಬಾಲಿವುಡ್ ನಿರ್ದೇಶಕರು ಉತ್ತಮ ಎಂದಿದ್ದಾರೆ ಇಲಿಯಾನ. ಇಲ್ಲಿ ಗ್ಲಾಮರ್‌ ಜೊತೆಗೆ ಅಭಿನಯ ಮಾಡುವ ಅವಕಾಶ ಸಿಗುತ್ತದೆ ಎಂದರು. ಈ ಮೊದಲು ಕೆಲವು ತಿಂಗಳ ಹಿಂದೆ ನಟಿ ತಾಪ್ಸಿ ಪೊನ್ನು ಸಹಿತ ಇದೇ ರೀತಿ ತೆಲುಗು, ತಮಿಳು ನಿರ್ದೇಶಕರನ್ನು ಖಂಡನೆ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಲಿಯಾನ ಹೇಳಿಕೆ ಬೆನ್ನಲ್ಲೇ ಚರ್ಚೆ ಶುರು ಆಗಿದೆ. ಹೇಳಿಕೆಗೆ ಅಭಿಮಾನಿಗಳಿಂದ ಬೆಂಬಲ ವ್ಯಕ್ತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top