ಸಮಾಚಾರ

ನಲಪಾಡ್‌ ಜಾಮೀನು ಅರ್ಜಿ ವಜಾ ಆಗಲು ಕಾರಣಗಳು

ಬಹುಕೋಟಿ ಉದ್ಯಮಿಯ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಂತಿನಗರ ಶಾಸಕ ಹ್ಯಾರಿಸ್‌ ಪುತ್ರ ಮಹಮ್ಮದ್‌ ನಲಪಾಡ್‌ನ ಜಾಮೀನು ಅರ್ಜಿ ತೀರ್ಪು ಪ್ರಕಟಿಸಿದ್ದು ಅರ್ಜಿಯನ್ನು ವಜಾಗೊಳಿಸಿ ನಲಪಾಡ್‌ಗೆ ಜಾಮೀನು ನೀಡಲು ಹೈಕೋರ್ಟ್‌ ತಿರಸ್ಕರಿಸಿದೆ. ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ನಂತರ ತೀರ್ಪು ಕಾಯ್ದಿರಿಸಿದ್ದ ಏಕಸದಸ್ಯ ಪೀಠ ಇಂದು ತೀರ್ಪನ್ನು ಪ್ರಕಟಿಸಿದೆ.

 

 

ನಲಪಾಡ್‌ ಗೆ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ನೀಡಿದ ಕಾರಣ:

ವಿಧ್ವತ್ ಮೇಲೆ ಹಲ್ಲೆಯಾಗುವಾಗ ನಲಪಾಡ್‌ ಅಲ್ಲಿರಲಿಲ್ಲ ಎಂಬುದಾಗಿ ಎಫ್.ಐ.ಅರ ನಲ್ಲಿ ದಾಖಲಾಗಿದೆ ಅಷ್ಟು ಬಿಟ್ಟರೆ ನಲಪಾಡ್‌ ಹೊಡೆದಿದ್ದಾನೆ ಎಂಬುದಕ್ಕೆ ಯಾವ ಹೇಳಿಕೆಗಳಿಲ್ಲ. ಆದ್ರೆ ಸಿಸಿ ಟಿವಿ ವೀಕ್ಷಣೆ ಮಾಡಿರುವ ನ್ಯಾಯಾಧೀಶರು ವಿದ್ವತ್ ಮೇಲೆ ಭಯಾನಕವಾಗಿ ಹಲ್ಲೆ ಮಾಡಿರುವುದನ್ನು ವೀಕ್ಷಣೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ನಲಪಾಡ್ ತೋರಿದ ದರ್ಪದಿಂದ ಯಾರು ಕೂಡ ವಿದ್ವತ್ ಸಹಾಯಕ್ಕೆ ಬರಲಿಲ್ಲ .

 

ರಾತ್ರಿ 11 : 45 ಕ್ಕೆ ದೂರು ಕಹಳಾದ್ರು ಬೆಳಕ್ಕೆ 3 :30 ರ ವರೆಗೂ ಯಾವುದೇ ಎಫ್.ಐ.ಅರ ದಾಖಲಾಗಿಲ್ಲ. ಪೊಲೀಸರು ಯಾಕೆ ಎಫ್.ಐ.ಆರ್ ದಾಖಲು ಮಾಡಲು ವಿಳಂಬ ಮಾಡಿಯಾದರೂ ಎಂಬುದಕ್ಕೆ ಇನ್ನು ಕಾರಣ ನೀಡಿಲ್ಲ. ಹೀಗಾಗಿ ಆರೋಪಿ ತನ್ನ ಪ್ರಭಾವ ಬಳಸಿರಬಹುದೆಂದು ನ್ಯಾಯಾಲಯ ಗಮನಿಸಿದೆ.

ಅಂದು ಬೆಳಗ್ಗೆ ಅರುಣ್ ಬಾಬು ಎನ್ನುವ ವ್ಯಕ್ತಿಯಿಂದ ಪ್ರತಿ ದೂರು ನೀಡಿ ಬೆಳಗ್ಗೆ 5.30 ಕ್ಕೆ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಏನಾದ್ರು ಪಯತ್ನ ಮಾಡಿ ಮುಚ್ಚಿ ಹಾಕಲು ಪ್ರಯತ್ನ ಮಾಡಿರುವುದನ್ನು ನ್ಯಾಯಾಲಯ ಗಮನಿಸಿದೆ.

 

 

ವಿದ್ವತ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ವಿಡಿಯೋ ದಾಖಲೆಗಳಲ್ಲಿ ಮೇಲ್ನೋಟಕ್ಕೆ ಕಂಡುಬಂದಿದ್ದು ಆರೋಪಿ ಒಬ್ಬ ಪ್ರಭಾವಿ ವ್ಯಕ್ತಿಯ ಮಗ ಆಗಿರುವುದರಿಂದ ಈಗ ಜಾಮೀನು ನೀಡಿದರೆ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಡಲಾಗಿದೆ.. ನಲಪಾಡ್‌ ಪ್ರಭಾವಿ ವ್ಯಕ್ತಿಯ ಮಗ ಎನ್ನುವುದಕ್ಕೆ ವಿದ್ವತ್‌ನ ಮೆಡಿಕಲ್ ರಿಪೋರ್ಟ್ ಪಡೆದುಕೊಂಡಿರುವುದೇ ನಿದರ್ಶನವಾಗಿದೆ.. ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೂ ಜಾಮೀನು ಕೊಡುವುದು ಸೂಕ್ತವಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top