ಭವಿಷ್ಯ

ಮದುವೆ ಮುಹೂರ್ತದಲ್ಲಿ ಪಂಚಕ ಮತ್ತು ತಾರಾ ಬಲವನ್ನು ಅವಶ್ಯವಾಗಿ ನೋಡಬೇಕು ಅಂತ ಹೇಳ್ತಾರೆ , ಮದುವೆಗೆ ಯಾವ ದಿನ ಒಳ್ಳೆಯದು ಗೊತ್ತೇ

ಮದುವೆ ಮುಹೂರ್ತದಲ್ಲಿ ಪಂಚಕ ಮತ್ತು ತಾರಾ ಬಲವನ್ನು ಅವಶ್ಯವಾಗಿ ನೋಡಬೇಕು

 

 

 

 

ನಿಮಗೆಲ್ಲರಿಗೂ ಗೊತ್ತಿರುವ ಗಾದೆ ಮಾತು ಒಂದು ಇದೆ. ಅದೇನೆಂದರೆ “ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು” ಅಂತ ಹೇಳುತ್ತಾರೆ. ಯಾಕೆಂದರೆ  ಹುಟ್ಟಿದ ದಿನಾಂಕವನ್ನು ಸುಳ್ಳು ಹೇಳುವುದು ಅಥವಾ ಜಾತಕ ಕೂಡಿ ಬರುತ್ತಿಲ್ಲ ಎಂದರೆ ಹೆಸರನ್ನು ಬದಲಾಯಿಸುವುದು. ಹುಡುಗ ಆಗಿರಬಹುದು ಅಥವಾ ಹುಡುಗಿ ಆಗಿರಬಹುದು ಈ ರೀತಿ ಮದುವೆ ಮಾಡಿಸಲು ಪ್ರಯತ್ನ ಮಾಡಿಸಿದರೆ ಎಲ್ಲೋ ಒಂದು ಕಡೆ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಮತ್ತು ಅನ್ಯೋನ್ಯತೆ ಇರುವುದಿಲ್ಲ.

 

ದಾಂಪತ್ಯ ಜೀವನದಲ್ಲಿ ತಾರಾಬಲ ಎಷ್ಟರ ಮಟ್ಟಿಗೆ ಮುಖ್ಯವಾಗಿರುತ್ತದೆ .

 

ಮುಖ್ಯವಾಗಿ ಹೇಳಬೇಕೆಂದರೆ ಈ ವಿವಾಹ ಮಾಡುವ ಸಮಯದಲ್ಲಿ ಲಗ್ನ ಅಥವಾ ಮುಹೂರ್ತ ಎಂದು ಏನು ಹೇಳುತ್ತಾರೋ, ಆ ಮುಹೂರ್ತಕ್ಕೆ ಸರಿಯಾದ ಸಮಯ ಬೇಕು. ಅದಕ್ಕೆ ಪಂಚಕ ಸರಿ ಇರಬೇಕು. ತಾರಾ ಬಲ ಸರಿ ಇರಬೇಕು. ಆದರೆ ಮದುವೆ ಮಾಡುವ ಮುನ್ನ ತಾರಾ ಬಲವನ್ನು ನೀವು ನೋಡುತ್ತೀರಾ , ಜೊತೆಗೆ ಗಣ, ಕೂಟಗಳನ್ನು ನೋಡುತ್ತೀರಾ, ಜೊತೆಗೆ ಮದುವೆ ಸಮಯವನ್ನು ನಿಗದಿ ಮಾಡುವುದಕ್ಕೆ ಪಂಚಕಗಳನ್ನು ನೋಡುತ್ತಾರೆ.

 

 

ಆದರೆ ಈಗ ಯಾವುದಾದರೂ ರಜಾ ದಿನ ಭಾನುವಾರ,ತ್ರಯೋದಶಿ, ಸಪ್ತಮಿ ಅಥವಾ ಪಂಚಮಿಯಾಗಿ ಬಂದಿದೆ ಎಂದರೆ ಯಾವುದೇ ನಕ್ಷತ್ರ ಇರಲಿ, ಯೋಗ ,ಕರಣ ,ಇವೆಲ್ಲವೂ ಸರಿ ಇಲ್ಲ ಎಂದರೂ ಕೂಡ ವಿವಾಹಕ್ಕೆ ದಿನಾಂಕವನ್ನು ಕೊಟ್ಟು ಬಿಡುತ್ತಾರೆ. ಯಾಕೆಂದರೆ ಇದು ಜ್ಯೋತಿಷಿಗಳ ತಪ್ಪಲ್ಲ ಮದುವೆಯ ಮನೆಯವರು ಕೂಡ ತುಂಬಾ ಒತ್ತಡವನ್ನು ಹಾಕುತ್ತಾರೆ. ಆದ್ದರಿಂದ ಅವರು ಕೂಡ ಯಾವುದೋ ಒಂದು ದಿನಾಂಕವನ್ನು ಅವರಿಗೆ ಅನುಸಾರವಾಗಿ ಕೊಟ್ಟು ಬಿಡುತ್ತಾರೆ. ಮದುವೆಗೆ  ಕಲ್ಯಾಣ ಮಂಟಪ ಸಿಗುವುದಿಲ್ಲ ,ಬೇರೆ ಯಾವುದೋ ಒಂದು ಭಾನುವಾರ ಸಿಕ್ಕಿದರೂ ಪರವಾಗಿಲ್ಲ ಆ ಸಮಯವನ್ನು ಕೊಟ್ಟು ಬಿಡಿ. ಪಂಚಮಿ ಅಥವಾ ಸಪ್ತಮಿಯ ದಿನ ಇದ್ದರೆ ಸಾಕು. ಅಥವಾ ದಶಮಿ ಇದ್ದರೂ ಸಾಕು ಎಂದು ಹೇಳುತ್ತಾರೆ .ಆದರೆ ವ್ಯವಸ್ಥಿತವಾಗಿ ಲಗ್ನಕ್ಕೆ ಪಂಚಕ ಕೂಡಿಬರಬೇಕು.

 

ಪಂಚಕ ಎಂದರೇನು ?

 

ತಿಥಿ, ವಾರ, ನಕ್ಷತ್ರ ,ಯೋಗ ,ಕರಣ ಈ ಐದು ಒಟ್ಟಿಗೆ ಸೇರಿದರೆ ಪಂಚಕ ಎಂದು ಕರೆಯಲಾಗುತ್ತದೆ. ಅಂದರೆ ಪಂಚ ಶುದ್ದಿಗಳು ಇರಬೇಕು. ಶುದ್ಧಿ ಇರುವ  ಆ ದಿನಾಂಕವನ್ನು  ಮದುವೆಗೆ ನಿಶ್ಚಯ ಮಾಡಬೇಕು. ಅದರ ಜತೆಗೆ ತಾರಾ ಬಲವನ್ನು ಸಹ ನೋಡಬೇಕು.

ಕೆಲವರನ್ನು ನೀವು ನೋಡಬಹುದು ವಧಾ ತಾರೆ ಇರುವ ದಿನವೇ ಮದುವೆ ಮಾಡುತ್ತಾರೆ. ಹುಡುಗಿಯರ ನಕ್ಷತ್ರದಿಂದ ಅಥವಾ ಹುಡುಗನ ನಕ್ಷತ್ರದಿಂದ ಆ ದಿನಾಂಕದಲ್ಲಿ ಇರುವ ನಕ್ಷತ್ರವನ್ನು ವ್ಯವಸ್ಥಿತವಾಗಿ ಕೂಡಿ ಒಂಬತ್ತರಿಂದ ಭಾಗಿಸಿ ಒಂದು ಬಂದರೆ ಜನ್ಮ ತಾರೆ, ಎರಡು ಬಂದರೆ ಸಂಪತ್ತು ತಾರೆ, ಮೂರು ಆದರೆ ವಿಪತ್ತು ತಾರೆ ,ನಾಲ್ಕು ಆದರೆ ಕ್ಷೇಮ ತಾರೆ, ಐದು ಆದರೆ ಪ್ರತ್ಯರ್ಥ ತಾರೆ, ಆರು ಆದರೆ ಸಾಧಕ ತಾರೆ, ಏಳು ಆದರೆ ವಧ ತಾರೆ , ಎಂಟು ಆದರೆ ಮಿತ್ರ ತಾರೆ, ಒಂಬತ್ತು ಆದರೆ ಪರಮ ಮಿತ್ರ ತಾರೆ.

 

 

ತಾರಾಬಲ ಕೂಡಿ ಬರಲಿಲ್ಲ ಎಂದರೆ ಖಂಡಿತವಾಗಿಯೂ ವಿವಾಹವನ್ನು ಮಾಡಲು ಹೋಗಬೇಡಿ. ಇಂದು ನಾವು ನೀವೆಲ್ಲರೂ ನೋಡುತ್ತಾ ಇದ್ದೇವೆ. ನ್ಯಾಯಾಲಯದ ಬಾಗಿಲಿನಲ್ಲಿ ಮದುವೆ ಆದ ಹೊಸ ಜೋಡಿಗಳನ್ನು. ಇನ್ನೂ ಒಂದು ವರ್ಷ ಕೂಡ ಆಗಿರುವುದಿಲ್ಲ, ಎಷ್ಟೋ ದಂಪತಿಯರು ವಿಚ್ಛೇದನಕ್ಕೆ ಕಾದು ನಿಂತಿರುತ್ತಾರೆ, ಎಷ್ಟೋ ಕುಟುಂಬದಲ್ಲಿ ಕೌಟುಂಬಿಕ ಅನ್ಯೋನ್ಯತೆ ಇಲ್ಲದೆ, ದಾಂಪತ್ಯದಲ್ಲಿ ಬಾಂಧವ್ಯ, ಸ್ನೇಹ ಇಲ್ಲದೆ, ಅವ್ಯವಸ್ಥೆಯನ್ನು ನಾವು ನೋಡುತ್ತಾ ಇರುತ್ತೇವೆ .

ಇದಕ್ಕೆಲ್ಲ ಕಾರಣ ಏನು ?

 

ಪಂಚಕ ಮತ್ತು ತಾರಾಬಲ  ಸರಿ ಇಲ್ಲದೇ ಇರುವುದೇ ಕಾರಣ. ಇದನ್ನೆಲ್ಲ ಸರಿಯಾಗಿ ನೋಡಿ ವಿವಾಹ ಮುಹೂರ್ತ ಮತ್ತು ದಿನ ನಿಗದಿ ಮಾಡಬೇಕು. ಆಗ ಅವರ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಕೌಟುಂಬಿಕ ಜೀವನವೂ ಸುಗಮವಾಗಿ ಸಾಗುತ್ತದೆ. ಅಲ್ಲದೆ ವಾರಗಳಲ್ಲಿ ಮಂಗಳವಾರ ಮತ್ತು ಶನಿವಾರ ಮದುವೆ ಮುಹೂರ್ತಕ್ಕೆ ಅಷ್ಟು ಒಳ್ಳೆಯ ವಾರಗಳಲ್ಲ.

ಸಂಖ್ಯಾ ಶಾಸ್ತ್ರದ ಪ್ರಕಾರ ಯಾವ ದಿನಾಂಕ ಮದುವೆಯಾದರೆ ಉತ್ತಮ ಯಾವ ದಿನಾಂಕ ಮದುವೆಯಾಗುವುದಕ್ಕೆ ಅಶುಭ ?

ಶುಭ ದಿನಗಳು 1 ಮತ್ತು 6. 1 ಎಂದರೆ ಸೂರ್ಯ,6 ಎಂದರೆ ಶುಕ್ರ . ಆದ್ದರಿಂದ ಈ ದಿನಗಳು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಹಾಗೇ ಇದೇ. ಸಂಖ್ಯೆಯನ್ನು ಆಳುವ ಜನವರಿ ಮತ್ತು ಜೂನ್ ತಿಂಗಳು ತುಂಬಾ ಒಳ್ಳೆಯ ತಿಂಗಳು ಮದುವೆಗೆ ಎಂದು ಪರಿಗಣಿಸಲಾಗಿದೆ.

ಇನ್ನೂ 1,10,19,28,6,15,24,3,12,21,30 ಮತ್ತು 9,18,27 ಕೂಡ ಉತ್ತಮ ಎಂದು ಪರಿಗಣಿಸಲಾಗಿದೆ. ನಿಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ಶುಭ ಸಂಖ್ಯೆಯ ದಿನದಂದು ಮದುವೆ ಮಾಡಿಕೊಳ್ಳಿ.

 

 

ಹಾಗೆಯೇ ನಾಲ್ಕು, ಐದು ,ಏಳು, ಎಂಟು ಈ ದಿನಾಂಕಗಳಲ್ಲಿ ಕೂಡ ಮದುವೆ ಮಾಡಿಕೊಳ್ಳುವುದು ಅಷ್ಟು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಇದರಿಂದ ಸಾಕಷ್ಟು ವಿವಿಧ ಬಗೆಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

4,13,22,31 ಈ ದಿನಾಂಕಗಳ್ಳಲ್ಲಿ ನಿಶ್ಚಿತಾರ್ಥ ಮತ್ತು ಮದುವೆ ಎರಡನ್ನು ಮಾಡಿಕೊಳ್ಳಬಾರದು. ಯಾಕೆಂದರೆ 4  ಎನ್ನುವ ಸಂಖ್ಯೆಯು ರಾಹು ಗ್ರಹವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ದಿನಗಳಲ್ಲಿ ಮದುವೆಯಾದರೆ ವಿವಾಹ ವಿಚ್ಚೇದನಗಳೇ ಜಾಸ್ತಿ.

5,14,23 ಈ ದಿನಾಂಕಗಳ್ಳಲ್ಲಿ ಕೂಡ ಮದುವೆಗೆ ಶುಭವಲ್ಲ. ಯಾಕೆಂದರೆ 5 ಎನ್ನುವ ಸಂಖ್ಯೆ ಬುಧ ಗ್ರಹವನ್ನು ಆಳುತ್ತದೆ. ಈ ದಿನದಲ್ಲಿ ಮದುವೆಯಾದರೆ ಮಕ್ಕಳಾಗುವುದಿಲ್ಲ ಅಥವಾ ಸಂತಾನಕ್ಕೆ ಸಂಬಂಧಪಟ್ಟಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬುದ್ದಿ ಮಾಂದ್ಯ ಮಕ್ಕಳು ಜನಿಸುತ್ತಾರೆ.

7,16,25 ಈ ದಿನಾಂಕವು ಕೂಡ ಅಷ್ಟು ಒಳ್ಳೆಯದಲ್ಲ.7 ಎಂದರೆ ಕೇತು ಗ್ರಹದ ಸಂಖ್ಯೆಯಾಗಿದ್ದು.ಈ ದಿನಾಂಕಗಳ್ಳಲ್ಲಿ ಮದುವೆಯಾದರೆ ಕೋರ್ಟು, ಕಚೇರಿ, ಪೊಲೀಸ್ ಠಾಣೆಗಳಿಗೆ ಅಲಿಯಬೇಕಾಗುತ್ತದೆ.

8,17,26 ಈ ದಿನಾಂಕವು ಕೂಡ ಒಳ್ಳೆಯದಲ್ಲ. ಯಾಕೆಂದರೆ 8 ಎಂದರೆ ಶನಿ ಗ್ರಹ. ಆದ್ದರಿಂದ ಇದು ಮಂದತನವನ್ನು ಉಂಟು ಮಾಡುತ್ತದೆ, ಮಕ್ಕಳಾಗುವುದಕ್ಕೆ ಸಮಸ್ಯೆಗಳು ಮತ್ತು ವೈವಾಹಿಕ ಜೀವನದಲ್ಲಿ ಏಳಿಗೆ ಇರುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top