ವಿಶೇಷ

9 ತಿಂಗಳು ಗರ್ಭಿಣಿಯಾಗಿರೋಕೆ ಕಷ್ಟ ಪಡೋವಾಗ 46 ವರ್ಷಗಳು ಗರ್ಭ ಧರಿಸಿದ್ದ ಈ ಹೆಂಗಸಿನ ಬಗ್ಗೆ ತಿಳ್ಕೊಂಡ್ರೆ ಆಶ್ಚರ್ಯ ಆಗ್ದೇ ಇರಲ್ಲ

ಎಪ್ಪತ್ತೈದು ವರ್ಷದ ಮೊರಾಕೋ ದೇಶದ ಮಹಿಳೆಯೊಬ್ಬರು ಕಲ್ಲಿನ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ ನಲವತ್ತಾರು ವರ್ಷಗಳ ಹಿಂದೆ ಗರ್ಭ ಧರಿಸಿದ್ದ ಈಕೆ ಎರಡು ಸಾವಿರದ ಹನ್ನೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ .

 

ಈ ಮಗುವಿನ ಜನನದ ಕಥನ 2001ರಲ್ಲಿ ಹೊರಬಿದ್ದಿತ್ತು ಆಗ ಜಹರಾ ಎಂಬ ಮಹಿಳೆಗೆ ಎಪ್ಪತ್ತೈದು ವರ್ಷ ವಯಸ್ಸಾಗಿತ್ತು

1955ರಲ್ಲಿ ಜಹರಾ ತಮ್ಮ ಮೊದಲ ಮಗುವಿನ ಗರ್ಭವನ್ನು ಧರಿಸಿದ್ದರು ಇನ್ನೇನು ಆಕೆಯ ಗರ್ಭದ ನೋವು ಕಾಣಿಸಿಕೊಂಡಾಗ ಸಮೀಪದ ಆಸ್ಪತ್ರೆಗೆ ತೆರಳಿದ ಆಕೆ ಅಲ್ಲಿ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಒಬ್ಬಾಕೆಗೆ ಆಪರೇಷನ್ ಅನ್ನು ಮಾಡಿ ಮಗುವನ್ನು ಹೊರತೆಗೆದಿದ್ದರು ಆ ಸಮಯದಲ್ಲಿ ಆಕೆ ಸತ್ತು ಹೋಗಿದ್ದಳು ಇದನ್ನು ಕಂಡ ಜಹರಾ ತುಂಬಾ ಭಯಪಟ್ಟುಕೊಂಡು ಅಲ್ಲಿಂದ ಮನೆಗೆ ವಾಪಸ್ಸು ಬಂದಿದ್ದರು ಇದಾದ ನಂತರ ಕೆಲವು ದಿನಗಳಾದ ನಂತರ ಆಕೆಗೆ ಹೊಟ್ಟೆಯ ನೋವು ಸಂಪೂರ್ಣವಾಗಿ ನಿಂತು ಹೋಗಿತ್ತು ಆಕೆಯೂ ಸಹ ಎಲ್ಲವೂ ಸರಿಯಾಗಿದೆ ಎಂದುಕೊಂಡು ಸುಮ್ಮನಾಗಿ ಹೋದರು .

 

ಇದಾದ 40 ವರ್ಷಗಳ ನಂತರ ಆಕೆಗೆ ಮರಳಿ ಹೊಟ್ಟೆನೋವು ಕಾಣಿಸಿಕೊಂಡಿದೆ ಆಗ ಆಸ್ಪತ್ರೆಯವರು ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಅನ್ನು ಆಕೆಗೆ ಮಾಡಿದ್ದಾರೆ ಇದರಲ್ಲಿ ಆಕೆಯ ಗರ್ಭದಲ್ಲಿ ವಿಚಿತ್ರವಾದ ಆಕಾರವೊಂದು ಇರುವುದು ಕಂಡು ಬಂದಿದೆ ಅದೇ ಆಗ ಗರ್ಭದಲ್ಲಿ ಉಳಿದಿದ್ದ ಮಗುವಿನ ಅವಶೇಷ .

ಸತ್ತು ಹೋದ ಗರ್ಭವು ಕರುಳು ಬಳ್ಳಿಯಿಂದ ಬೇರ್ಪಟ್ಟು ಆ ನಂತರ ಹೊಟ್ಟೆಯಲ್ಲಿ ಅಂಟಿಕೊಂಡು ಕ್ಯಾಲ್ಷಿಯಂ ಹಾಗೂ ಇತರ ಪದಾರ್ಥಗಳೊಂದಿಗೆ ಸೇರಿಕೊಂಡು ಒಂದು ರೀತಿಯ ಉಂಡೆಯಾಕಾರದಲ್ಲಿ ಆಕೆಯ ಹೊಟ್ಟೆ ಹಾಗೂ ಸುತ್ತುವರಿದ ಭಾಗಗಳಲ್ಲಿ ಇತ್ತು .

 

ಕ್ಯಾಲ್ಸಿಯಮ್ ಉಂಡೆಯಂತಾಗಿದ್ದು ಸತ್ತ ಮಗುವಿನ ಗರ್ಭ ಅವಶೇಷಗಳನ್ನು ಡಾಕ್ಟರ್ ಗಳು ನಾಲ್ಕು ಗಂಟೆಗಳ ಸತತ ಪ್ರಯತ್ನದಿಂದ 2001 ರಲ್ಲಿ ಹೊರ ತೆಗೆದರು ಈ ಆಪರೇಷನ್ ಅನ್ನು ಮಾಡಲು ಡಾಕ್ಟರ್ ಗಳು ಬಹಳ ಹೆದರಿದ್ದರು ಏಕೆಂದರೆ ಅಷ್ಟು ವರ್ಷಗಳಾದ ಮೇಲೆ ದೇಹದಿಂದ ಒಂದು ಭಾಗವನ್ನು ತೆಗೆಯುವುದು ಚಿಕ್ಕ ವಿಷಯವಾಗಿರಲಿಲ್ಲ ಅಷ್ಟೇ ಅಲ್ಲದೆ ಅಧಿಕ ರಕ್ತ ಸ್ರಾವವಾಗುವ ಅನೇಕ ಸಾಧ್ಯತೆಗಳಿತ್ತು ಈ ಆಪರೇಷನ್ ಏನಾದರೂ ಕೈಕೊಟ್ಟಿದ್ದರೆ ಜಹರಾ ಸತ್ತು ಹೋಗುವ ಸಾಧ್ಯತೆಗಳು ಬಹಳವಾಗಿ ಇತ್ತು .

 

3.15ಕೆಜಿ ತೂಕವಿದ್ದ ಮಗುವಿನ ಅವಶೇಷ ಹಾಗೆ   16.5 ಇಂಚು ಉದ್ದವಾಗಿತ್ತು ಇದನ್ನು ತೆಗೆದ ಡಾಕ್ಟರ್ ಗಳು ಈ ರೀತಿಯ ಘಟನೆಗಳು ವೈಜ್ಞಾನಿಕ ಲೋಕದಲ್ಲಿ ಒಂದು ಅಚ್ಚರಿಯಾಗಿ ಉಳಿಯುತ್ತವೆ ಎಂದು ಹೇಳುತ್ತಾರೆ ಪ್ರಪಂಚದಲ್ಲಿ ಈ ರೀತಿಯ ಮುನ್ನೂರು ಘಟನೆಗಳು ದಾಖಲಾಗಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top