ಮನೋರಂಜನೆ

ಮೈಸೂರು ಅರಸ ಯದುವೀರ್ ಒಡೆಯರ್ ಬಿಜೆಪಿ ಸೇರ್ಪಡೆ: ವರುಣಾ ಕ್ಷೇತ್ರದಲ್ಲಿ ಸಿಎಂ ಸಿದ್ದು ವಿರುದ್ದ ಕಣಕ್ಕೆ?

ಸದ್ಯ ರಾಜ್ಯದಲ್ಲಿ ಚುನಾವಣಾ ಕಾವೇರಿದ್ದು ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಸೆಳೆಯಲು ನಾ ಮುಂದು ತಾ ಮುಂದು ಎಂದು ರಾಜಕೀಯ ಪಕ್ಷಗಳು ರಂಗು ರಂಗಿನ ನಾಟಕಗಳನ್ನು ಶುರುವಿಟ್ಟಿದ್ದಾರೆ.. ಪಕ್ಷ ತೊರೆಯುವುದು, ಮತ್ತೊಂದು ಪಕ್ಷವನ್ನು ಸೇರಿಕೊಳ್ಳುವುದು ಸೇರಿದಂತೆ ನನ್ನ ದೊಂಬರಾಟಗಳನ್ನು ನಡೆಸುತ್ತಿರುವ ಕೆಟ್ಟಾ ಕೊಳಕು ರಾಜಕಾರಣಿಗಳು ಶತಾಯಗತಾಯ ಗೆಲ್ಲಲೇಬೇಕೆಂಬ ಪಣತೊಟ್ಟು ಕಚ್ಚಿ ಕಟ್ಟಿ ನಿಂತುಬಿಟ್ಟಿದ್ದಾರೆ.. ಅಧಿಕಾರದ ಮೇಲಿನ ಆಸೆಗೆ ವಿವಿಧ ಕ್ಷೇತ್ರಗಳಲ್ಲಿ ಕೆಸರು ಮಾಡಿದ ಗಣ್ಯವ್ಯಕ್ತಿಗಳು ಕೂಡ ದೇಶ ಸೇವೆ, ಸಮಾಜ ಸೇವೆ ಎಂಬ ಕುಂಟು ನೆಪ ಹೇಳಿಕೊಂಡು ರಾಜಕೀಯ ಅಖಾಡಕ್ಕೆ ಇಳಿಯುತ್ತಿದ್ದಾರೆ.

 

 

ಇದೀಗ ಮೈಸೂರಿನ ದಿಕ್ಕಿನಿಂದ ತೂರಿ ಬರುತ್ತಿರುವ ತಾಜಾ ಸುದ್ದಿಯ ಪ್ರಕಾರ ಮೈಸೂರಿನ ಅರಸ ಯದುವೀರ್ ಆದಷ್ಟು ಬೇಗ ರಾಜಕೀಯಕ್ಕೆ ಇಳಿಯುತ್ತಿದ್ದು ಬಿಜೆಪಿ ಪಕ್ಷವನ್ನು ಸೇರಿಕೊಂಡು ದೇಶಸೇವೆಯಲ್ಲಿ ತೊಡಗಲಿದ್ದಾರಂತೆ.. ಇನ್ನೂ ವಿಶೇಷ ಏನಪ್ಪಾ ಅಂದ್ರೆ ಯದುವೀರ್ ಅವರು ವರುಣ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದು ಸಿಎಂ ಸಿದ್ದರಾಮಯ್ಯ ಅವರ ಎದುರೇ ತೊಡೆತಟ್ಟಲಿದ್ದಾರೆ ಎಂದು ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳ ಇಕ್ಕೆಲಗಳಲ್ಲೆಲ್ಲಾ ಕೇಳಿಬರುತ್ತಿದೆ..

ಮಾರ್ಚ್ 10ನೇ ತಾರೀಕಿನಂದು ಸಿಎಂ ಸಿದ್ದು ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದ ವೇಳೆಯಲ್ಲಿ ತಮ್ಮ ಸರ್ಕಾರ ನೀಡಿದ ಕೊಡುಗೆಗಳ ಬಗ್ಗೆ ಹೇಳುವಾಗ “ಮೈಸೂರು ರಾಜರ ನಂತರ ಯಾವುದಾದರೂ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿದ್ದರೆ ಅದು ನಮ್ಮ ಸರ್ಕಾರ ಮಾತ್ರ” ಎಂದು ಘಂಟಾಘೋಷವಾಗಿ ಹೇಳಿಬಿಟ್ಟಿದ್ದರು ಈ ಮಾತನ್ನು ಕೇಳಿ ರೊಚ್ಚಿಗೆದ್ದಿದ್ದ ಯದುವೀರ್ “ನಾವು ಮಾಡಿದ ಸಾಧನೆಗಳನ್ನು ಜನರು ಹೇಳಬೇಕು. ರಾಜರ ಕೊಡುಗೆ ಏನು ಎಂಬುದು ಜನರಿಗೆ ಗೊತ್ತಿದೆ. ಕಳೆದ ಐದು ವರ್ಷದಲ್ಲಿ ಸಿದ್ಧರಾಮಯ್ಯ ಏನು ಮಾಡಿದ್ದಾರೆ ಅನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ.” ಎಂದು ಖಾರವಾಗಿ ಪ್ರತಿಕ್ರಿಯಿದ್ದರು.

 

 

ಯದುವೀರ್ ಅವರು ಸಿಎಂ ವಿರುದ್ಧ ಕೆಂಡವಾಗಿರುವುದನ್ನು ಗಮನಿಸಿದ ಬಿಜೆಪಿ ಮುಖಂಡರು ಯದುವೀರ್ ಅವರಿಗೆ ಗಾಳಹಾಕಿದ್ದು ಅವರನ್ನು ತಮ್ಮ ಪಕ್ಷಕ್ಕೆ ಸೆಳೆದು ವರುಣಾ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ನವರ ವಿರುದ್ಧವೇ ಟಿಕೆಟ್ ನೀಡಿ ಅಖಾಡಕ್ಕಿಳಿಸುವ ಯೋಚನೆಯಲ್ಲಿದೆ ಎಂಬ ಮಾಹಿತಿದೆ. ಸ್ವತಃ ರಾಜಕೀಯದಲ್ಲಿ ಆಸಕ್ತಿಯನ್ನು ಹೊಂದಿರುವ ಯದುವೀರ್ ಬಿಜೆಪಿ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದು ಈ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಇದ್ದರೂ ಲೋಕಸಭೆ ಚುನಾವಚನೆಯಲ್ಲಿಯಾದರು ಸ್ಪರ್ಧೆ ಮಾಡುತ್ತಾರಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top