ಸಿನಿಮಾ

18 ನೇ ವಯಸ್ಸಿನಲ್ಲೇ ಎರಡು ಬಾರಿ ಜೈಲು ಪಾಲಾಗಿದ್ದ ಈ ಬಾಲಿವುಡ್ ಸ್ಟಾರ್ ನಟ

ಚಿತ್ರನಟರು ಒಂದಿಲ್ಲ ಒಂದು ಕಾರಣಕ್ಕೆ ಜೈಲಿಗೆ ಹೋಗಿ ಬಂದಿದ್ದಾರೆ. ಅನೇಕ ಬಾಲಿವುಡ್ ನಟರು ಜೈಲು ವಾಸ ಅನುಭವ ಪಡೆದಿದ್ದಾರೆ. ಇದಕ್ಕೆ ಬಾಲಿವುಡ್ ಟಾಪ್ ನಟ ಅಜಯ್ ದೇವಗನ್ ಕೂಡ ಹೊರತಾಗಿಲ್ಲ. ಅಜಯ್ ದೇವಗನ್ ಎರಡು ಬರಿ ಜೈಲು ವಾಸ ಅನುಭವಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಅಜಯ ತಮ್ಮ 18 ನೇ ವಯಸ್ಸಿನಲ್ಲೇ ಜೈಲು ವಾಸ ಅನುಭವಿಸಿದ್ದರು. ತಂದೆಯ ಗನ್ ತೆಗೆದುಕೊಂಡು ಗೆಳೆಯರೊಂದಿಗೆ ಹೊರಗೆ ಹೋಗುತ್ತಿದ್ದರು. ಅದಕ್ಕೆ ಅವರನ್ನು ಲಾಕಪ್ ನಲ್ಲಿ ಹಾಕಲಾಗಿತ್ತು ಎಂದು ತಿಳಿಸಿದರು.

 

 

1991 ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಅಜಯ ದೇವಗನ್, ಫೂಲ್ ಔರ್ ಕಾಂಟೆ ಚಿತ್ರದಲ್ಲಿ ಅಭಿನಯ ಮಾಡಿದರು. ಆದರೆ ಅವರಿಗೆ ಇದು ಇಷ್ಟವಿರಲಿಲ್ಲ, ಆರಾಮಾಗಿ ಸ್ನೇಹಿತರೊಂದಿಗೆ ಸುತ್ತಾಡಿಕೊಂಡು, ಲೈಫ್ ಎಂಜಾಯ್ ಮಾಡೋಣ ಎನಿಸುತ್ತಿತ್ತು. ಇನ್ನೊಂದು ಕುತೂಹಲ ವಿಷ್ಯ ಅಂದ್ರೆ ಅಜಯ್ ದೇವಗನ್ ರ ನಿಜವಾದ ಹೆಸರು ವಿಶಾಲ್ ಚಿತ್ರರಂಗಕ್ಕೆ ಬಂದ ಮೇಲೆ ತಮ್ಮ ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ.

 

 

1991ರಲ್ಲಿ ವಿಶಾಲ್ ಹೆಸರಿನ ಇನ್ನು ಕೆಲವು ನಟರು ಬಾಲಿವುಡ್ ಎಂಟ್ರಿ ಮಾಡಿದ್ದರು. ಹಾಗಾಗಿ ಗೊಂದಲವಾಗಬಾರದೆಂಬ ಕಾರಣಕ್ಕೆ ಅಜಯ್ ದೇವಗನ್ ಎಂದು ತಮ್ಮ ಹೆಸರು ಬದಲಾಯಿಸಿಕೊಂಡರು. ಸದ್ಯ ರೇಡ್ ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿರೋ ಅಜಯ್ ದೇವಗನ್, ಸಾಕಷ್ಟು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top