ಮನೋರಂಜನೆ

ಪುನೀತ್ ಚಿತ್ರದ ನಟಿ ಹನ್ಸಿಕಾ ಮೋಟ್ವಾನಿ ವಿರುದ್ಧ ದೂರು ದಾಖಲು!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಿಂದಾಸ್ ಚಿತ್ರದ ನಾಯಕಿ ಹನ್ಸಿಕಾ ಮೊಟ್ವಾನಿ ವಿರುದ್ಧ ದೂರು ದಾಖಲಾಗಿದೆ ಆದರೆ ಅದು ಪೋಲಿಸ್ ಸ್ಟೇಷನ್ ನಲ್ಲಿ ಅಲ್ಲ ಬದಲಾಗಿ ತಮಿಳುನಾಡು ಕಲಾವಿದರ ಸಂಘದಲ್ಲಿ. ದೂರು ದಾಖಲಾಗುವಂತ ಕೆಲಸವನ್ನು ಹನ್ಸಿಕಾ ಏನ್ ಮಾಡಿದ್ದಾಳೆ ಅಂತೀರಾ? ಮುಂದೆ ಓದಿ.

 

 

ಹನ್ಸಿಕಾ ವಿರುದ್ಧ ಅವರ ಮ್ಯಾನೇಜರ್ ಮುನಿಸ್ವಾಮಿ ಸಂಘಕ್ಕೆ ದೂರು ನೀಡಿದ್ದು ಸಂಭಳ ಕೊಟ್ಟಿಲ್ಲ ಎಂದು ಆರೋಪ ಮಾಡಿದ್ದಾನೆ.. “ನಾನು ಹಲವು ವರ್ಷಗಳಿಂದ ಹನ್ಸಿಕಾ ಬಳಿ ಕೆಲಸ ಮಾಡುತ್ತಿದ್ದೇನೆ. ಆದರೆ ತುಂಬಾ ದಿನಗಳಿಂದ ಅವ್ರು ನನಗೆ ಸಂಭಳ ಕೊಟ್ಟಿಲ್ಲ.. ಕೇಳಿದರೆ ಈಗ ಕೊಡುತ್ತೇನೆ, ಆಗ ಕೊಡುತ್ತೇನೆ ಎಂದು ಸತಾಯಿಸುತ್ತಿದ್ದಾರೆ. ನಟಿಯಿಂದ ನನಗೆ ನ್ಯಾಯ ಕೊಡಿಸಿ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಆದರೆ ಹನ್ಸಿಕಾ ಅವರ ಡೇಟ್, ಸಂಭಾವನೆಗೆ ಸಂಬಂಧಪಟ್ಟ ಎಲ್ಲಾ ಬ್ಯುಸಿನೆಸ್ ಗಳನ್ನೂ ಅವರ ತಾಯಿಯೇ ನೋಡಿಕೊಳ್ಳುತ್ತಿದ್ದಾರೆ ಮ್ಯಾನೇಜರ್ ಸಂಬಳವನ್ನು ಕೂಡ ಅವರೇ ನೀಡುತ್ತಿದ್ದರು ಎನ್ನುವುದು ಚಿತ್ರರಂಗದವರ ಮಾತು.. ಅದೇನೇ ಇರಲಿ ಸಂಬಳದ ವಿಚಾರವಾಗಿ ಹನ್ಸಿಕಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ, ಒಂದುವೇಳೆ ಮ್ಯಾನೇಜರ್ ಮುನಿಸ್ವಾಮಿ ಮಾಡಿರುವ ಆರೋಪ ರುಜುವಾತಾದರೆ ಸಂಘದ ಎದುರು ಕಾರಣವನ್ನು ಹನ್ಸಿಕಾ ಹೇಳಬೇಕಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top