fbpx
ಸಮಾಚಾರ

ಜಯಲಲಿತಾ ಸಾವಿಗೂ ಮುನ್ನ ಆರೋಗ್ಯದ ಬಗ್ಗೆ ನಿಗೂಢ ಸತ್ಯವನ್ನು ಬಿಚ್ಚಿಟ್ಟ ವೈದ್ಯ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೂ ಮುನ್ನ ಅರೋಗ್ಯ ಸ್ಥಿಗತಿ ಹೇಗಿತ್ತು ಎಂಬ ನಿಗೂಢ ಮಾಹಿತಿಯನ್ನು ಅಪೋಲೋ ಆಸ್ಪತೆಯ ವೈದ್ಯ ಶಿವಕುಮಾರ್ ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳ ಮುಂದೆ 2ನೇ ಸಲ ತನಿಖೆಗೆ ಹಾಜರಾದ ವೈದ್ಯ ಶಿವಕುಮಾರ, ಸಾವಿಗೂ ಮುನ್ನ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

 

 

ಜಯಲಲಿತಾ ಆಸ್ಪತ್ರೆಗೆ ದಾಖಲಾಗುವ ಮೊದಲು 2016ರ ಸೆ. 22ರಂದು ತಮ್ಮ ಮನೆಯಲ್ಲಿ ತಲೆ ಸುತ್ತಿ ಬಿದ್ದಿದ್ದರಂತೆ ಅವರ ಮನೆಯಲ್ಲಿಯೇ ಚಿಕಿತ್ಸೆಯನ್ನು ಅವರಿಗೆ ನೀಡಿ ಬಳಿಕ ಆಸ್ಪತೆಗೆ ಕರೆತಂದಿದ್ದರು. ಎರಡು ದಿನಗಳಿಂದ ಜಯಲಲಿತಾ ಅವರು ಜ್ವರದಿಂದ ಬಳಲುತ್ತಿದ್ದಾರೆ ಎಂದು ಶಶಿಕಲಾ ವೈದ್ಯರಿಗೆ ಹೇಳಿದ್ದರು.

 

 

ಶಿವಕುಮಾರ್ ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರಲ್ಲಿ ಶಿವಕುಮಾರ್ ಕೂಡ ಒಬ್ಬರು ಇವರು ಹೇಳಿರುವ ಪ್ರಕಾರ ಜಯಲಲಿತಾ ಸ್ಟೆರಾಯ್ಡ್‌ಯುಕ್ತ ಸ್ಕಿನ್ ಆಯಿಂಟ್‌ಮೆಂಟ್ ಉಪಯೋಗಿಸುತ್ತಿದ್ದರು ಆದರೆ ಅವರ ಅನಾರೋಗ್ಯ ಹಾಗು ಸಾವಿನಲ್ಲಿ ಸ್ಟೆರಾಯ್ಡ್‌ಯುಕ್ತ ಸ್ಕಿನ್ ಆಯಿಂಟ್‌ಮೆಂಟ್ ಔಷದಿಯ ಯಾವುದೇ ಪಾತ್ರವಿಲ್ಲ ಎಂದು ಅವರು ತಿಳಿಸಿದ್ದಾರೆ.

 

 

ಇತ್ತೀಚಿಗೆ ವಿಚಾರಣೆಗೆ ಹಾಜರಾಗಿದ್ದ ಜಯಲಲಿತಾ ವಾಹನ ಚಾಲಕ ಅಯ್ಯಪ್ಪನ್ ಮಾಹಿತಿ ನೀಡಿ ಜಯಲಲಿತಾ ಹೆಬ್ಬೆಟ್ಟು, ಬೆರಳುಗಳನ್ನು ಕಟ್ ಮಾಡಲಾಗಿತ್ತು ಎಂಬ ಆರೋಪವನ್ನು ಅಲ್ಲಗಳೆದಿದ್ದರು. ಅಂತಿಮ ವಿಧಿವಿಧಾನದ ಮೊದಲು ನಾನು ಮತ್ತು ಪೊಲೀಸ್ ಅಧೀಕ್ಷಕ ಕರುಪ್ಪಸ್ವಾಮಿ ಜಯಾರ ಹೆಬ್ಬೆಟ್ಟು ಕಟ್ಟಿದ್ದೇವೆ ಎಂದು ತಿಳಿಸಿದ್ದಾರೆ. ತನಿಖೆ ಮುಂದುವರೆದಿದ್ದು ಇನ್ನು ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top